ಬದಲಾಗದವರು​~ಪಿತೃ ದಿನಕ್ಕೊಂದು ಸಣ್ಣ ಕಥೆ…​!​ ಪೂರ್ಣಿಮಾ ಜನಾರ್ದನ್

ಮದುವೆ ಆಗಿ ಪತಿ​ ​ಗೃಹಕ್ಕೆ ಬಂದ ಆ ದಿನಗಳಲ್ಲಿ ತಿಂಗಳ ಋತುಚಕ್ರದ ಮೂರು ದಿನ ಕಟ್ಟುನಿಟ್ಟಿನ ಮಡಿ ಮೈಲಿಗೆ ಆಚರಣೆ ಪೂರ್ವಿಗೆ ಹೊಸದು. ಪತಿರಾಯ ಜಗನ್ನಾಥನೋ ಆ ದಿನಗಳಲ್ಲಿ ಪತ್ನಿಯ ಮುಖ‌ಕಂಡಾಗ,​ ​ಆಕೆ  ಎದುರಿನಲ್ಲಿ ಸರಿದು ಹೋದರೂ ಏನೋ ಆಗಬಾರದ ಅನಾಹುತ ಆದಂತೆ ಮಡಿ ಹುಡಿ ಎಂದು ಮಾರು ದೂರಸರಿಯುತ್ತಿದ್ದ.

 
ಹದಿನೈದು ವರುಷಗಳು ಕಳೆದರೂ ಪತಿಯ ನಡವಳಿಕೆಯಲ್ಲಿ ಎಳ್ಳಷ್ಟೂ ಬದಲಾವಣೆ ಇಲ್ಲದ್ದನ್ನು ಕಂಡ ಪೂರ್ವಿ”  ಇವರು ಈ ಜನ್ಮದಲ್ಲಿ ಬದಲಾಗದವರು” ಎಂಬ ಹಣೆ ಪಟ್ಟಿಯನ್ನಿತ್ತು ಪರಿಸ್ಥಿತಿಗೆ ತಾನೇ ಒಗ್ಗಿಕೊಂಡಳು.​ 
 
​​ಆದರೆ ತನ್ನ ಪ್ರೀತಿಯ ಮಗಳು ಮೊದಲ ಬಾರಿ ಋತುಮತಿಯಾಗಿ ಹೊಟ್ಟೆನೋವು, ಸುಸ್ತು ಎಂದು ಅಲವತ್ತು​ ​ಕೊಂಡಾಗ ಮಾತ್ರ ಪತಿಯ ಸ್ಥಾನದಿಂದ ತಂದೆಯ ಸ್ಥಾನಕ್ಕೆ ಮಾನಸಿಕವಾಗಿ ಭಡ್ತಿ ಪಡೆದ ಜಗನ್ನಾಥ ತಡೆಯಲಾಗದೆ ಮುದ್ದು​ ​ಮಗಳಿಗೆ ದಪ್ಪನೆಯ ಮೆತ್ತ​ನೆಯ  ಹಾಸಿಗೆ ಹಾಸಿ ಆಕೆಯ ಕಾಲು ಒತ್ತುತ್ತಾ ಅಕ್ಕರೆಯಿಂದ “ಮಲಗು ಪುಟ್ಟಾ “ಎಂದು ಸಂತೈಸುವುದನ್ನು ಕಂಡಾಗ ಅರೆ ಇವರು ಯಾವಾಗ ಬದಲಾದರು ಎಂದು ಅಚ್ಚರಿ ಪಟ್ಟಳು ಪೂರ್ವಿ.

​​
 
 
 
 
 
 
 
 
 

Leave a Reply