ಕೋವಿಡ್ 19: ಅಪಪ್ರಚಾರಗಳಿಗೆ ಕಿವಿಕೊಟ್ಟು ಜೀವ ಕಳೆದು ಕೊಳ್ಳ ಬೇಡಿ

ಜನ ಸೇವಾ ಅಭಿಯಾನ ವಿಚಾರ ಸಂಕಿರಣದಲ್ಲಿ ಶಾಸಕ ಕೆ. ರಘುಪತಿ ಭಟ್
ಉಡುಪಿಯಲ್ಲಿ ಕೋವಿಡ್19 ಲಾಕ್ ಡೌನ್ ನಿಂದ ಹಿಡಿದು ಸೋಂಕು ಪೀಡಿತರ ಶುಶ್ರೂಷೆ ಮತ್ತು ನಿರ್ವಹಣೆಯಲ್ಲಿ ಜಿಲ್ಲಾ ಅರೋಗ್ಯ ಇಲಾಖೆ ಮತ್ತು ಜನ ಪ್ರತಿನಿಧಿಗಳ ನಿರಂತರ ಸಂಯೋಜನೆಯಿಂದ ಅತ್ಯಂತ ಸುರಕ್ಷಿತ ಮತ್ತು ನಿಭೀತಿ ವಾತಾವರಣ ಕಾಯ್ದು ಕೊಳ್ಳಲು ಸಾಧ್ಯವಾಗಿದೆ. ಆದರೂ ಈ ಸೋಂಕಿನ ಬಗ್ಗೆ ಹಾಗು ಇದು ಯಾವ ರೀತಿಯಲ್ಲಿ ಆಡಳಿತಾತ್ಮಕವಾಗಿ ನಿಯಂತ್ರಣಕ್ಕೆ ತರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲದ ರಾಜಕೀಯ ಸ್ವಹಿತಾಸಕ್ತಿ ಗುಂಪುಗಳು ಈ ಸೋಂಕಿನ ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ಮಾಡಿ ಕರೋನಾ ಯೋಧರ ಆತ್ಮವಿಸ್ವಾಸಕ್ಕೆ ದಕ್ಕೆ ತರುವ ಪ್ರಯತ್ನಗಳನ್ನು ನಡೆಸುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ಹರಿದಾಡುವ ಈ ಸಂದೇಶಗಳಿಂದ ಮುಗ್ದ ಜನರು ಸಾಮಾನ್ಯ ರೋಗ ಲಕ್ಷಣಗಳು ಗೋಚರಿಸಿದಾಗ ಆಸ್ಪತ್ರೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಸಂದೇಶಗಳ ಪರಿಣಾಮದಿಂದ ಉಡುಪಿಯಲ್ಲಿ ಅನೇಕ ಜೀವಹಾನಿಯಾಗಿವೆ. ರೋಗಲಕ್ಷಣಗಳು ಕಾಣಿಸಿ ಕೊಂಡಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ  ಪ್ರಾಥಮಿಕ ಶುಶ್ರೂಷೆಗಳನ್ನು ಪಡೆದು ಕೊಂಡು ಆರೋಗ್ಯವಂತರಾಗಿರಿ ಮತ್ತು ಕೋವಿಡ್ ಪರೀಕ್ಷೆಗಳ ಬಗ್ಗೆ ಅಪನಂಬಿಕೆಗಳನ್ನು ಬಿಟ್ಟುಬಿಡಿ ಎಂದು ಉಡುಪಿ ಜನತೆಗೆ ಶಾಸಕ ಕೆ. ರಘುಪತಿ ಭಟ್ ಕರೆ ನೀಡಿದ್ದಾರೆ.

ಅವರು ಭಾನುವಾರ ಉಡುಪಿ ಪುರಭವನದಲ್ಲಿ ಉಡುಪಿ ನಗರ ಬಿಜೆಪಿ ಆಯೋಜಿಸಿದ ಕೋವಿಡ್ ೧೯ ಜನಸೇವಾ ಅಭಿಯಾನ ಪರಿಕಲ್ಪನೆಯ ವಿಚಾರಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ ಕಾರ‍್ಯಕ್ರಮ ಉದ್ಘಾಟಿಸಿ ಪಕ್ಷದಕಾರ್ಯಕರ್ತರು ನಮ್ಮ ಜನಪ್ರತಿನಿದಿಗಳು ನಡೆಸಿದ ಕರೋನಾ ಹೋರಾಟದ ಮಾಹಿತಿಗಳನ್ನು ಜನತೆಗೆ ನೀಡಿ ವಾಸ್ತವದ ಬೆಳಕು ಚೆಲ್ಲಬೇಕು ಎಂದು ಹೇಳಿದರು.ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಶಶಿಕಿರಣ್ ಮತ್ತು ಮಣಿಪಾಲ ಕೆಎಂಸಿ ಸೂಕ್ಶ್ಮಾಣು ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥೆ ಡಾ. ವಂದನಾ ಕೆ ಇ ಇವರುಗಳು ಕೋವಿಡ್ ೧೯ ಇದರ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಾದಗಳನ್ನು ನಡೆಸಿ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,  ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಮಹಿಳಾ ಮೋರ್ಚಾ  ಅಧ್ಯಕ್ಷೆ ವೀಣಾ ಶೆಟ್ಟಿ, ಅಲ್ಪಸಂಖ್ಯಾತ ಮೋರ್ಚಾ  ಪ್ರದಾನ ಕಾರ್ಯದರ್ಶಿ ಅಲ್ವಿನ್ ಡಿಸೋಜ, ವಕ್ತಾರ ಶಿವಕುಮಾರ್, ಕಾರ‍್ಯಕಾರಿಣಿ ಸದಸ್ಯೆ ಭಾರತಿ ಚಂದ್ರಶೇಖರ್.

ನಗರದ  ಎಲ್ಲಾ ಮೋರ್ಚಾಗಳ, ಪ್ರಕೋಷ್ಠಗಳ ಹಾಗು ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ನಗರ ಬಿಜೆಪಿ ಕಾರ‍್ಯಕಾರಿಣಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿದಿಗಳು ಉಪಸ್ಥಿತರಿದ್ದರು. ಕಾರ‍್ಯಕ್ರಮ ಸಂಯೋಜಕರಾದ ಗಿರೀಶ್ ಅಂಚನ್ ನಿರೂಪಿಸಿದರು. ಮಂಜುನಾಥ್ ಮಣಿಪಾಲ ವಂದಿಸಿದರು.

 
 
 
 
 
 
 
 
 
 
 

Leave a Reply