Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ಎಡನೀರು ಮಠಕ್ಕೆ ಉತ್ತರಾಧಿಕಾರಿ ಜಯರಾಮ ಮಂಜತ್ತಾಯ..???

ಎಡನೀರು ಮಠಕ್ಕೆ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯ ನೇಮಕ ಸಚ್ಚಿದಾನಂದ ಭಾರತೀತೀರ್ಥರೆಂದು ನಾಮಕರಣ…???!!!

ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀತೀರ್ಥ ಮಹಾಸ್ವಾಮಿಗಳು ಶನಿವಾರ ರಾತ್ರಿ ಪರಂಧಾಮ ಸೇರಿದ ಬಳಿಕ ತೆರ ವಾಗಿದ್ದ ಸ್ಥಾನಕ್ಕೆ ಮಠದ ಉತ್ತರಾಧಿಕಾರಿಯಾಗಿ ಶ್ರೀ ಜಯರಾಮ ಮಂಜತ್ತಾಯರನ್ನು ನೇಮಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಜಯರಾಮಣ್ಣ ಎಂದೇ ಮಠದ ಭಕ್ತ ವಲಯದಲ್ಲಿ ಚಿರಪರಿಚಿತರಾಗಿದ್ದ ಮಂಜತ್ತಾಯರು ಶ್ರೀಗಳ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸು ತ್ತಿದ್ದರು .

ಭಾನುವಾರ ಕೇಶವಾನಂದ ಭಾರತೀತೀರ್ಥರ ಸಮಾಧಿ ಪ್ರಕ್ರಿಯೆ ಮುಗಿಯುವ ಮೊದಲೇ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಸಚ್ಚಿದಾನಂದ ಭಾರತೀತೀರ್ಥ ಮಹಾಸ್ವಾಮಿಗಳೆಂದು ನಾಮಕರಣಗೈಯಲಾಗಿದೆ.

ಮಠದ ಆಸ್ಥಾನ ಪುರೋಹಿತರು, ಕುಂಟಾರು ರವೀಶ ತಂತ್ರಿ ಹಿರಣ್ಯ ವೆಂಕಟೇಶ ಭಟ್ ರಮೇಶ ಜೋಯಿಸ ಮೊದಲಾದ ವಿದ್ವಾಂಸರ ಹಿರಿತನದಲ್ಲಿ ಈ ನೇಮಕ ನಡೆದಿದೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!