ನನ್ನ ಪ್ರೀತಿಯ ಶಿಕ್ಷಕರು – ಬೆನಗಲ್ ನಾರಾಯಣ ಮೂರ್ತಿ

ಇಂದು ಶಿಕ್ಷಕರ ದಿನ, ನಮ್ಮ ದೇಶದ ಅಧ್ಯಕ್ಷರಾಗಿದ್ದ ಡಾ.ರಾಧಾಕೃಷ್ಣ ಅವರ ನೆನಪಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದೇವೆ.ಈ ದಿನ ನಾನು ನನ್ನ ಪ್ರೌಢಶಾಲೆಯ ಕನ್ನಡ ಶಿಕ್ಷಕರಾಗಿದ್ದ ದಿ. ಎನ್ ಕರಿಬಸವಯ್ಯ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ.

ನಾನು ಹೈಸ್ಕೂಲ್ ಸೇರಿದಾಗ ಕರಿಬಸವಯ್ಯನವರು ಕನ್ನಡ ಪಂಡಿತ ರಾಗಿದ್ದರು.ಮೊದಲ ಸಲ ಅವರು ತರಗತಿಗೆ ಬಂದಾಗ ಲೇ ಅವರ ಶಿಷ್ಯ ಪ್ರೀತಿ ನಮಗೆಲ್ಲಾ ಗೊತ್ತಾಯಿತು. ಮುಂದಿನ ದಿನಗಳಲ್ಲಿ ನಾನು ಭಾಷಣ ಸ್ಫರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾದಾಗ ನನ್ನ ಅವರ ನಡುವೆ ಹೆಚ್ಚಿನ ಒಡನಾಟ ಬೆಳೆಯಿತು. ಆಗಿನ ದಿನಗಳಲ್ಲಿ ಅಂತರ ಶಾಲಾ ಭಾಷಣ ಸ್ಫರ್ಧೆಗಳನ್ನು ಬೇರೆ ಬೇರೆ ಊರುಗಳಲ್ಲಿ ಏರ್ಪಡಿ ಸುತ್ತಿದ್ದರು. ನಾನು ನಮ್ಮಶಿವಮೊಗ್ಗೆಯ ಸರ್ಕಾರಿ ಪ್ರೌಢಶಾಲೆಯನ್ನು 4 ಬಾರಿ ಪ್ರತಿನಿಧಿಸಿದೆ.

ಪ್ರತೀ ಬಾರಿಯೂ ಕರಿಬಸವಯ್ಯ ನವರು ನನ್ನನ್ನು ಕೂರಿಸಿಕೊಂಡು ಉಪಯುಕ್ತ ಸಲಹೆಗಳನ್ನು ಕೊಡುತ್ತಿದ್ದರು.ಪ್ರತಿಸಾರಿಯೂ ನಾನು ಬಹುಮಾನಗಳನ್ನು ಪಡೆದೆ. ಒಮ್ಮೆ ತರಿಕೆರೆಯಲ್ಲಿ ನಾನು ಮತ್ತು ನನ್ನ ಜೊತೆಗೆ ಬಂದಿದ್ದ ಇನ್ನೊಬ್ಬ ಸ್ಫರ್ಧಿ ಇಬ್ಬರಿಗೂ 2ನೇ ಮತ್ತು 4ನೇ ಬಹುಮಾನ ಸಿಕ್ಕಿ ನಮ್ಮ ಶಾಲೆಗೆ ಟ್ರೋಫಿ ಸಿಕ್ಕಿತು. ಆ ದಿನ ನಾವು ಶಾಲೆಗೆ ಬಂದಾಗ ಒಂದು ಸಭೆ ಏರ್ಪಡಿಸಿ ಅರ್ಧದಿನ ರಜೆ ಘೋಷಿಸಿದರು.ನನ್ನ ಪ್ರೀತಿಯ ಶಿಕ್ಷಕ ಕರಿಬಸವಯ್ಯರು ಪಟ್ಟ ಸಂಭ್ರಮ ನಾನು ಮರೆಯಲಾರೆ ಅವರಿಂದ ನನ್ನ ಕನ್ನಡ ಅಭಿಮಾನ ಬೆಳೆಯಿತು.

ನನಗೆ ಉತ್ತಮ ಪುಸ್ತಕಗಳನ್ನು ಓದಲು ಸಲಹೆ ಕೊಡುತ್ತಿದ್ದರು. ಮುಂದೆ ನಾನು ಬೆಂಗಳೂರಿನಲ್ಲಿ ನನ್ನ ಇಂಜಿನೀರಿಂಗ್ ಶಿಕ್ಷಣ ಮುಂದುವರಿಸಿದೆ. ನನ್ನ ಅವರ ಭೇಟಿ ಮುಂದೆ ಆಗಲೆಯಿಲ್ಲ.ಅವರು ನಿವೃತ್ತಿಹೊಂದಿದಮೇಲೆ ಮೈಸೂರಿನಲ್ಲಿ ನೆಲಸಿದ್ದರು. ನನ್ನ ಸೋದರ ಮಾವ,ಮತ್ತು ಅವರ ಶಿಷ್ಯ ರಾಘವೇಂದ್ರ ಭಟ್ಟರು ಸಿಕ್ಕಿದಾಗ ನಾಣಿ (ಅವರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು)ಹೇಗಿದ್ದಾನೆ ಎಂದು ವಿಚಾರಿಸು ತ್ತಿದ್ದರು. ಮಾವ ತಮಾಷೆಯಿಂದ ಅವರು ನನ್ನ ಬಗ್ಗೆ ಕೇಳುವಮೊದಲೇ ನಿನ್ನ ಬಗ್ಗೆ ಕೇಳುತ್ತಿದ್ದರು ಎಂದು ನಗುತ್ತಾ ಹೇಳುತ್ತಿದ್ದರು. ಅಂಥಾ ಪ್ರೀತಿ ತೋರಿದ ಶಿಕ್ಷಕ ಕರಿಬಸವಯ್ಯ ನವರಿಗೆ ಮನದಾಳದ ನಮನಗಳು.

 
 
 
 
 
 
 
 
 
 
 

Leave a Reply