ಕರಾಟೆ ಪಟು, ತೋನ್ಸೆ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಕೊರೋನಾಗೆ ಬಲಿ

ಕೆಮ್ಮಣ್ಣು: ಬಿಲ್ಲವ ಸಮುದಾಯದ ಯುವ ಮುಂದಾಳು, ಕರಾಟೆಪಟು ತೋನ್ಸೆ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು (43) ಇಂದು ಕೋವಿಡ್ ಗೆ ಬಲಿಯಾಗಿದ್ದಾರೆ.

ಕೆಮ್ಮಣ್ಣು ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಗ್ರಾಮದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೂ ಪಕ್ಷಭೇದವನ್ನು ದೂರವಿಟ್ಟು ತೋನ್ಸೆ ಪಂಚಾಯತ್’ನ ಸರ್ವಸದಸ್ಯರು ಅಭಿವೃದ್ಧಿ ಕಾರ್ಯದಲ್ಲಿ ಒಂದಾಗುವಂತೆ ಮಾಡಿದ್ದರು.

ರಾಜ್ಯ ಕರಾಟೆ ಸಂಘದ ಪದಾಧಿಕಾರಿಯೂ ಆಗಿದ್ದ ಇವರು ಕ್ರಿಡಾಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು.ಅವರ ಬಂಧುಗಳು,ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply