ಎಸ್.ಟಿ.ಪಿ ಪ್ಲಾಂಟ್ ಮುಂದೆ “ಅಪಾಯಕಾರಿ” ನಾಮಫಲಕ ಅಳವಡಿಕೆ ಕಡ್ಡಾಯ

ಆಗಸ್ಟ್, 19  ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮ್ಯಾನ್‌ಹೋಲ್/ಚರಂಡಿ/ಸೆಪ್ಟಿಕ್ ಟ್ಯಾಂಕ್‌ಗಳು ಹಾಗೂ ಎಸ್.ಟಿ.ಪಿ ಪ್ಲಾಂಟ್‌ಗಳನ್ನು ಸ್ವಚ್ಛಗೊಳಿಸಲು ಹೋಗುವ ಸಫಾಯಿ ಕರ್ಮಚಾರಿಗಳು/ ಸ್ವಚ್ಛತಾ ಕಾರ್ಮಿಕರು/ ಪೌರಕಾರ್ಮಿಕರುಗಳು ಸಾವನ್ನಪ್ಪುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಭವಿಸುತ್ತಿರುವುದು ಬೆಳಕಿಗೆ ಬಂದಿರುತ್ತದೆ.

ಇದಕ್ಕೆ ಕಾರಣ ಅನೈರ್ಮಲ್ಯ ತ್ಯಾಜ್ಯದಿಂದ ಬಿಡುಗಡೆಯಾಗುವ ವಿಷಕಾರಿ ಮೀಥೇನ್ ಅನಿಲ, ಈ ಅನಿಲ ಉಸಿರಾಡುವ
ವ್ಯಕ್ತಿಯು ಕ್ಷಣ ಮಾತ್ರದಲ್ಲಿ ಉಸಿರುಗಟ್ಟಿ ಸಾವನಪ್ಪುತ್ತಾರೆ. ಇಂತಹ ಪ್ರಕರಣಗಳನ್ನು ಇನ್ನು ಮುಂದೆ ಸಂಭವಿಸದಂತೆ 
ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಪಾರ್ಟ್ಮೆಂಟ್‌ಗಳು, ಖಾಸಗಿ
ಕಂಪೆನಿಗಳು, ಬಹುಮಹಡಿ ಕಟ್ಟಡಗಳು, ಆಸ್ಪತ್ರೆಗಳು, ಮಾಲುಗಳು, ಮಹಲುಗಳು ಹಾಗೂ ಇನ್ನಿತರೆ ಸ್ಥಳಗಳಲ್ಲಿ ನಿರ್ಮಿಸ ಲಾಗಿರುವ ಮ್ಯಾನ್‌ಹೋಲ್/ಚರಂಡಿ/ಸೆಪ್ಟಿಕ್ ಟ್ಯಾಂಕ್‌ಗಳು ಹಾಗೂ ಎಸ್.ಟಿ.ಪಿ ಪ್ಲಾಂಟ್‌ಗಳ ಮುಂದೆ “ಅಪಾಯ ಕಾರಿ” ಎಂಬ ನಾಮ ಫಲಕವನ್ನು ಅಳವಡಿಸುವುದು ಅತೀ ಅವಶ್ಯಕವಾಗಿರುತ್ತದೆ.

ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಪಾರ್ಟ್ಮೆಂಟ್‌ಗಳು, ಖಾಸಗಿ ಕಂಪೆನಿಗಳು, ಬಹುಮಹಡಿ
ಕಟ್ಟಡಗಳು, ಆಸ್ಪತ್ರೆಗಳು, ಮಾಲುಗಳು, ಮಹಲುಗಳು ಹಾಗೂ ಇನ್ನಿತರೆ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಮ್ಯಾನ್‌ ಹೋಲ್ /ಚರಂಡಿ/ಸೆಪ್ಟಿಕ್ ಟ್ಯಾಂಕ್‌ಗಳು ಹಾಗೂ ಎಸ್.ಟಿ.ಪಿ ಪ್ಲಾಂಟ್‌ಗಳ ಮುಂದೆ “ಅಪಾಯಕಾರಿ” ಎಂಬ ನಾಮ ಫಲಕವನ್ನು ಅಳವಡಿಸುವಂತೆ ಉಡುಪಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply