ಎಸ್ ಕೆ ಪಿ ಎ ವತಿಯಿಂದ ಪ್ರಸನ್ನ ಹೆಬ್ಬಾರ್ ಗೆ ಅಭಿನಂದನೆ 

 ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಇದರ ವತಿಯಿಂದ 181ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ‌ಖ್ಯಾತ ಛಾಯಾಗ್ರಾಹಕ  ಪ್ರಸನ್ನ ಹೆಬ್ಬಾರ್ ರವರನ್ನು ಅಭಿನಂದಿಸಲಾಯಿತು.   ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ರವರು ಮಾತನಾಡಿ ಪ್ರಸನ್ನ ಹೆಬ್ಬಾರ್ ರವರು ಸಂಘಟನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸನ್ಮಾನ ಸ್ವೀಕರಿಸಿದ ಪ್ರಸನ್ನ ಹೆಬ್ಬಾರ್ ಸಂಘ ತನ್ನ ಸಾಧನೆಯನ್ನು ಗುರುತಿಸಿದ್ದು ಸಂತಸ ತಂದಿದೆ. ಈ ಅಭಿಮಾನದ ಅಭಿನಂದನೆಯಿಂದ ಸಂಘಟನೆಯಲ್ಲಿ ತನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರು.
ಉಡುಪಿ ವಲಯ ಗೌರವಾಧ್ಯಕ್ಷ ಶಿವ ಕೆ.ಅಮೀನ್, ಕೋಶಾದಿಕಾರಿ ಪ್ರಸಾದ್ ಜತ್ತನ್, ಜೊತೆ ಕಾರ್ಯದರ್ಶಿ ನಾರಾಯಣ್ ಜತ್ತನ್, ಸಂಘಟನಾ ಕಾರ್ಯದರ್ಶಿಗಳಾದ ಸದಾಶಿವ ಸಾಲ್ಯಾನ್, ಚಂದ್ರಶೇಖರ್, ಪ್ರವೀಣ್ ಕುಮಾರ್, ಹಾಗೂ ಸದಸ್ಯರಾದ ಸಂತೋಷ್ ಕೊರಂಗ್ರಪಾಡಿ, ದಾಮೋದರ್ ಸುವರ್ಣ, ಸುಕುಮಾರ್ ಕುಕ್ಕಿಕಟ್ಟೆ, ಮಹೇಶ್ ಸುವರ್ಣ, ವಿಜಯ್ ದೇವಾಡಿಗ, ಪ್ರವೀಣ್ ಹರಿ ಕಂಡಿಗೆ, ಸುಧೀರ್ ಸುರಭಿ, ರಮೇಶ್ ಪೂಜಾರಿ, ರಾಘವೇಂದ್ರ ಫೋಕಸ್, ಸಂದೀಪ್ ಕಾಮತ್, ವಿದ್ಯಾ ಪ್ರಸನ್ನ, ಪದ್ಮನಾಭ ಹೆಬ್ಬಾರ್, ದುರ್ಗಾಧೀಶ ಹಾಗೂ ಅಭೀಷ್ಠ ಉಪಸ್ಥಿತರಿದ್ದರು.
ಉಡುಪಿ ವಲಯಾಧ್ಯಕ್ಷ  ಪ್ರಕಾಶ್ ಎಸ್.ಕೊಡಂಕೂರು ಸ್ವಾಗತಿ ಸಿದರು. ಕಾರ್ಯದರ್ಶಿ ಸುಕೇಶ್ ಕೆ.ಅಮೀನ್ ದನ್ಯವಾದವನಿತ್ತರು. ರಾಘವೇಂದ್ರ ಶೇರಿಗಾರ್  ನಿರೂಪಿಸಿದರು.

Leave a Reply