ಕೃಷ್ಣಪ್ರೇಮ ಪ್ರಶಸ್ತಿ ಪ್ರದಾನ

“ಕಲೆಯ ಮೂಲಸ್ವರೂಪವನ್ನು ಕೆಡಿಸದೇ ಪ್ರಯೋಗಗಳನ್ನು ಮಾಡಿದಾಗ ಮಾತ್ರ ಅದು ಪ್ರೇಕ್ಷಕನನ್ನು ಮುಟ್ಟುತ್ತದೆ, ಕಲೆಯ ಬೆಳವಣಿಗೆ ಮತ್ತು ಪ್ರಸರಣ ವಾಗುತ್ತದೆ”. ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಶ್ರೀ ಸಂದೇಶ್ ಜವಳಿಯವರು ಅಭಿಪ್ರಾಯ ವ್ಯಕ್ತಪಡಿಸಿದರು

ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಕೊಡುತ್ತಿರುವ ನಾಲ್ಕನೇ ವರುಷದ “ಕೃಷ್ಣಪ್ರೇಮ”ಪ್ರಶಸ್ತಿ ಪ್ರದಾನ ಮಾಡಿ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದರು.ಅತಿಥಿಗಳಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಾಗಿರುವ ಶ್ರೀಮತಿ ಪೂರ್ಣಿಮಾರವರು ಸಂಸ್ಥೆಯು ನೃತ್ಯ ಮಾಡುವ ಕಲಾವಿದರನ್ನು ಮಾತ್ರ ಗೌರವಿಸದೇ ನೃತ್ಯಕ್ಕೆ ಪೂರಕವಾಗಿ ಸೇವೆಸಲ್ಲಿಸುತ್ತಿರುವ ಹಾಡುಗಾರರನ್ನು,ಹಿಮೇಳದ ವಾದ್ಯಸಂಗೀತ ಕಲಾವಿದರನ್ನು,ವರ್ಣಾಲಂಕಾರ ಕಲಾವಿದರನ್ನು ಮತ್ತು ಬೆಳಕಿನ ಸಂಯೋಜನೆ ಮಾಡುವ ಕಲಾವಿದರನ್ನೂ ಗುರುತಿಸಿ ನಗದುಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದು ಅಭಿನಂದನಾರ್ಹ ಎಂದು ತಿಳಿಸಿದರು.ಅತಿಥಿಗಳಾಗಿದ್ದ ವಿಶ್ವನಾಥ್ ಶೆಣೈ ಮತ್ತು ಯು.ಕೆ.ಪ್ರವೀಣ್ ಸಂಸ್ಥೆಗೆ ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿದ ಪಿ.ಕಮಲಾಕ್ಷ ಆಚಾರ್, ಹರೀಶ್ ಕುಮಾರ್ ಗುಂಡಿಬೈಲು, ಮತ್ತು ಶರ್ಮಿಳಾ ಕೆ.ರಾವ್ ರವರು ಸನ್ಮಾನಿತರಪರವಾಗಿ ಮಾತನಾಡಿದರು.ಸಂಸ್ಥೆಯ ನಿರ್ದೇಶಕ ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.ಪೂರ್ಣಿಮಾ ಜನಾರ್ದನ್ ನಿರ್ವಹಿಸಿದ ಕಾರ್ಯಕ್ರಮಕ್ಕೆ ಚಂದ್ರಶೇಖರ ರಾವ್ ಕೊಡವೂರು ಧನ್ಯವಾದ ಅರ್ಪಿಸಿದರು.ನೃತ್ಯನಿಕೇತನ ಕೊಡವೂರು ಕಲಾವಿದರಿಂದ “ಚಿತ್ರಾ” ನೃತ್ಯನಾಟಕ ಪ್ರದರ್ಶನಗೊಂಡಿತು

 
 
 
 
 
 
 

Leave a Reply