ಗ್ರಂಥಾಲಯ ಸಪ್ತಾಹ – 2022ರ ಅಂಗವಾಗಿ ಪುಸ್ತಕ ಪ್ರದರ್ಶನ ವಿಸ್ತರಣಾ ಕಾರ್ಯಕ್ರಮ

ಅಜ್ಜರಕಾಡು ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ – 2022ದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪುಸ್ತಕ ಪ್ರದರ್ಶನ “ಪುಸ್ತಕ ಪ್ರೀತಿ – ನೋಡಿ ಕಲಿ, ಓದಿ ತಿಳಿ” ವಿಸ್ತರಣಾ ಕಾರ್ಯಕ್ರಮ ಕಾಲೇಜಿನ ಗ್ರಂಥಾಲಯದಲ್ಲಿ ನಡೆಯಿತು.

ಸರಕಾರಿ ಸಂಯುಕ್ತ ಪ್ರೌಢಶಾಲೆ, ಅಜ್ಜರಕಾಡು, ಇಲ್ಲಿಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ ಕಿರಣ್‌ರವರು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.‌ ರಂಗನಾಥನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ
ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಸಂಯೋಜಕರಾದ ಮತ್ತು ಆಯ್ಕೆ ಶ್ರೇಣಿ
 ಗ್ರಂಥಪಾಲಕರಾದ ಶ್ರೀಮತಿ ಯಶೋದಾರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಕಾಲೇಜಿನ ಪ್ರಾಂಶುಪಾಲರಾದ
ಡಾ. ಭಾಸ್ಕರ್‌ ಶೆಟ್ಟಿ ಎಸ್ ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ – 2022ದ ಅಂಗವಾಗಿ ಕಾಲೇಜಿನ ಗ್ರಂಥಾಲಯದ ವತಿಯಿಂದ ಪುಸ್ತಕ ಎರವಲು ಪಡೆಯುವ ವಿಶೇಷ ಸೌಲಭ್ಯವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ
ಶಿಕ್ಷಕರಿಗೆ ಒದಗಿಸಲಾಯಿತು. ಸರಕಾರಿ ಸಂಯುಕ್ತ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು, ಕಾಲೇಜಿನ ಕ್ಷೇಮಪಾಲನಾಧಿಕಾರಿ ವಾಣಿ ಬಲ್ಲಾಳ್‌,ಗ್ರಂಥಾಲಯ ಸಹಾಯಕರಾದ ಕು. ಶಮ್ಮಿ, ವಿಜಯಲಕ್ಷ್ಮೀ, ಲಾವಣ್ಯ ಹಾಗೂ
ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply