ಯುಪಿಎಂಸಿ – ದಿಶಾ ಲೇಡಿಸ್ ಕ್ಲಬ್ ಮಹಿಳಾ ದಿನ ಆಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ‘ದಿಶಾ’ ಮಹಿಳಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 11 ರಂದು ನಡೆಯಿತು.   

ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಮೇರಿ ಜಾನ್ ನಿವೃತ್ತ ಶಾಲಾ ಶಿಕ್ಷಕಿ ವಿದ್ಯಾರ್ಥಿನಿಯರಿಗೆ ಮೊಬೈಲ್ ಬಳಕೆ, ಆತ್ಮವಿಶ್ವಾಸ, ಸಂವಹನ ಕಲೆ, ಸಾಮಾನ್ಯ ಜ್ಞಾನ ಮತ್ತು ಮನೆಯ ಆರ್ಥಿಕ ಸ್ಥಿತಿಗಳ ಕುರಿತ ಮಾಹಿತಿ ಪ್ರತಿಯೊಬ್ಬರಿಗೂ ಇರಬೇಕು ಎಂದು ಕೆಲವು ದೃಷ್ಟಾಂತಗಳ ಸಹಿತ ತಿಳಿಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕ ಸಹ ಸಲಹೆಗಾರರಾದ ಇಂದಿರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿಬಿಎ ಪ್ರಣೀತ ಶೆಟ್ಟಿ ಸ್ವಾಗತಿಸಿದರು, ಆಶೀಕ ವಂದಿಸಿದರು, ದಿಶಾ ಸಂಚಾಲಕಿ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply