ಕೋಟ ಅಮೃತೇಶ್ಚರಿ ದೀಪೋತ್ಸವ ಸಂಪನ್ನ

ಕೋಟ: ಶ್ರೀಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಭಾನುವಾರ ಸಂಪನ್ನಗೊoಡಿತು.

ದೇವಳದಲ್ಲಿ ವಿಶೇಷವಾಗಿ ಪೂಜಾ ಕಾರ್ಯದ ನಡುವೆ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹಣತೆಗೆ ದೀಪ ಬೆಳಗುವುದರ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಸಾದ ರೂಪದಲ್ಲಿ ಫಲಹಾರದ ವ್ಯವಸ್ಥೆ ಕಲ್ಪಿಸಲಾಯಿತು. ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆಡಳಿತ
ಮಂಡಳಿಯ ಸದಸ್ಯರು,ಮತ್ತಿತರರು
ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply