ಕೋವಿಡ್ ಲಸಿಕೆ – ರಾಜ್ಯಕ್ಕೆ ಮಾದರಿಯಾದ ಕೊಡವೂರು ವಾರ್ಡ್

ಉಡುಪಿ : ಜಿಲ್ಲೆಯ ಕೊಡವೂರು ವಾರ್ಡಿನಲ್ಲಿ ದಿವ್ಯಾಂಗರಿಗೆ ಅಂಗವಿಕಲರಿಗೆ ದುರ್ಬಲರಿಗೆ ನಡೆಯಲು ಸಾಧ್ಯವಿಲ್ಲದವರಿಗೆ ಮನೆ ಮನೆಗೆ ಹೋಗಿ ಲಸಿಕೆ ನೀಡುವ ಅಭಿಯಾನವನ್ನು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ಅಲ್ಲಿಯ ಎಲ್ಲಾ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಡೆಸಿಕೊಟ್ಟ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ. ಮತ್ತು ಪ್ರಥಮವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲಾ ವಿಷಯದಲ್ಲೂ ಕೊಡವೂರು ವಾರ್ಡ್ ನಲ್ಲಿ ಮಾದರಿ ಕೆಲಸಗಳಾಗುತ್ತಿವೆ. ಕೋವಿಡ್ ಸಂದರ್ಭದಲ್ಲಿ ಎಲ್ಲಾ ಮನೆಮನೆಗೂ ಅಕ್ಕಿ ವಿತರಣೆ ನಡೆಸಿ, ಮತ್ತು ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲದವರಿಗೆ ತರಕಾರಿಗಳನ್ನು ಮನೆಮನೆಗೆ ತೆರಳಿ ನಗರಸಭಾ ಸದಸ್ಯರೇ ಗಾಡಿಯಲ್ಲಿ ತರಕಾರಿ ಮತ್ತು ದಿನ ಬಳಕೆಯ ಸಾಮಗ್ರಿಗಳನ್ನು ಮನೆಮನೆಗೆ ಕೊಡುವಂತ ಕೆಲಸವನ್ನು ಮಾಡಿದ್ದಾರೆ.

ಈಗ ಕೋವಿಡ್ ವಿರುದ್ಧ ಹೋರಾಟ ಮಾಡಲು ಲಸಿಕೆ ಅಭಿಯಾನವನ್ನು ಅವರ ವಾರ್ಡ್ ನಲ್ಲಿ ಆರು ಕ್ಯಾಂಪೇನ್ ಗಳನ್ನು ಮಾಡಿದರು, ಅದಾದನಂತರ ಚಿಕ್ಕಚಿಕ್ಕ ವಠಾರಗಳಲ್ಲಿ ಎಂಟು ಕ್ಯಾಂಪೇನ್ ಗಳನ್ನು ನಡೆಸಿ ಸಂಘ ಸಂಸ್ಥೆಗಳ ಮೂಲಕ ಅಂಗವಿಕಲರು ಯಾರು, ದುರ್ಬಲರು ಯಾರು , ನಡೆಯಲುಸಾಧ್ಯವಿಲ್ಲದವರು ಯಾರು ಎಂದು ಸರ್ವೇ ನಡೆಸಿ ಮಾಹಿತಿ ಪ್ರಕಾರ ಮನೆ ಮನೆಗೆ ತೆರಳಿ ಲಸಿಕೆ ಕೊಡುವಂತಹ ಕೆಲಸವನ್ನು ನಡೆಸಿಕೊಟ್ಟಿದ್ದಾರೆ.

 ಚುನಾವಣೆ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರು ಅನೇಕ ಬಾರಿ ಮನೆಗೆ ಬಂದು ಮತ ಹಾಕಿ ಕೇಳುವುದು ಮಾಡುವ ಪ್ರಯತ್ನವನ್ನು ಮಾಡುತ್ತಾರೆ, ಮತದಾನದ ಬೆಳಿಗ್ಗೆ ವಾಹನದ ಮೂಲಕ ಚುನಾವಣೆಗೆ ಕರೆದುಕೊಂಡು ಹೋಗುತ್ತಾರೆ ಇದಾದನಂತರ ಇವರ ಸಂಪರ್ಕ ಇರುವುದಿಲ್ಲ.

ಆದರೆ ಕೊಡವೂರು ವಾರ್ಡ್ ನಲ್ಲಿ ಆ ರೀತಿ ಅಲ್ಲ ಎಲ್ಲಾ ಸಂಘ-ಸಂಸ್ಥೆಗಳ ಸಕ್ರಿಯತೆಯಿಂದ, ಸಹಕಾರದಿಂದ ಕೊಡವೂರು ವಾರ್ಡಿನಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯತ್ತಾ ಇದೆ.ಕೊಡವೂರು ವಾರ್ಡ್ ನಲ್ಲಿ ಒಟ್ಟು 6 ಬಾರಿ ಲಸಿಕಾ ಕ್ಯಾಂಪ್ ನಡೆಸಿ,ಮತ್ತು ಚಿಕ್ಕ ಚಿಕ್ಕ ಲಸಿಕಾ ಶಿಬಿರ ನಡೆಸಿ ಮನೆ ಮನೆಗೆ ಹೋಗಿ ಲಸಿಕೆ ನೀಡುವ ಕಾರ್ಯ ವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಕೊಡವೂರು ವಾರ್ಡ್ ನಲ್ಲಿ 50 ಜನರು ಬಾಕಿ ಉಳಿದಿದ್ದು ಇವರಲ್ಲಿ 13 ಜನರು ಹಿರಿಯರು,5 ಜನ ಬಾಣಂತಿಯರು,11 ಜನರು ಹೃದಯ ಸಂಬಂಧಿ ಕಾಯಿಲೆ ,7 ಜನರು ಬಿಪಿ ಶುಗರ್,9 ಜನರು ಆಧಾರ್ ಕಾರ್ಡ್ ಸಮಸ್ಯೆ,5 ಜನರು ಬೇರೆ ಬೇರೆ ರೀತಿಯ ಕಾರಣವನ್ನು ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ. ಈ ಮಹತ್ಕಾರ್ಯಕ್ಕೆ ಸ್ಪಂದಿಸಿದ ಸಂಘ ಸಂಸ್ಥೆ, ಆರೋಗ್ಯ ಕಾರ್ಯಕರ್ತರು,ಆಶಾ ಕಾರ್ಯಕರ್ತರು ಮತ್ತು ಎಲ್ಲಾ ಕಾರ್ಯಕರ್ತರಿಗೂ ಹಾಗೂ ಊರಿನ ಎಲ್ಲಾ ನಾಗರಿಕರಿಗೆ ನಗರ ಸಭಾ ಸದಸ್ಯ ವಿಜಯ್ ಕೊಡವೂರು ವಂದಿಸಿದರು.

 
 
 
 
 
 
 
 
 
 
 

Leave a Reply