ಕನ್ನಡದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಇನ್ನು ನೆನಪಷ್ಟೇ

ಬೆಂಗಳೂರು: ಅಭಿನಯ ಶಾರದೆ , ಹಿರಿಯ ನಟಿ ಜಯಂತಿ ವಿಧಿವಶರಾಗಿದ್ದಾರೆ.76 ವರ್ಷ ವಯಸ್ಸಿನ ಜಯಂತಿ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ ಮಲಯಾಳಿ ಸೇರಿದಂತೆ ಆರು ಭಾಷೆಗಳ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಅಸ್ತಮಾ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಕೊನೆಯ ಉಸಿರು ಎಳೆದಿದ್ದಾರೆ. ಕಳೆದ ಒಂದು ವರ್ಷದಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಆಗಿದ್ದಾಂಗೆ ಆಸ್ಪತ್ರಗೆ ಹೋಗುತ್ತಿದ್ದರು. ಆದ್ರೆ ಮನೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಜಯಂತಿ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಸಂತಾನಲಕ್ಷ್ಮೀ ದಂಪತಿಯ ಹಿರಿಯ ಪುತ್ರಿ. ಗಡಿನಾಡು ಬಳ್ಳಾರಿಯಿಂದ ಬಂದು ಬೆಳೆದು ಬಂದಿದ್ದರು.ಜೇನುಗೂಡು ಸಿನಿಮಾದ ಮೂಲಕ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವರನಟ ರಾಜ್ ಕುಮಾರ್ ಜೊತೆ 47 ಸಿನಿಮಾಗಳಲ್ಲಿ ನಟನೆ ಮಾಡಿರುವುದು ದಾಖಲೆಯೇ ಸರಿ. ಮಯೂರ, ಎಡಕಲ್ಲುಗುಡ್ಡದ ಮೇಲೆ, ಮಸಣದ ಹೂವು ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು.ಜಯಂತಿ ನಿಧನಕ್ಕೆ ಎಲ್ಲಡೆ ಸಂತಾಪ ವ್ಯಕ್ತವಾಗಿದೆ.

 

 

 
 
 
 
 
 
 
 
 
 
 

Leave a Reply