“ಕಾರ್ಗಿಲ್ ಸತ್ಯ ಮೇವ ಜಯತೆ” 22 ವರುಷಗಳ ಹರ್ಷ

” ಮೇ 1999 ಫೆಬ್ರವರಿಯಿಂದಲೇ ಭಾರತೀಯ ಗಡಿಯಲ್ಲಿ ಪಾಕಿಸ್ತಾನದ ಗಸ್ತು,ಅತಿಕ್ರಮಣದ ಸುದ್ದಿಗಳು ಬರಲಾಂಭಿಸಿದವು.ಭಾರತ ಮಾತ್ರ ಶಾಂತಿ, ನೆಮ್ಮದಿಯ ಮಾರ್ಗದಲ್ಲಿ ಮಾತುಕತೆ ಮೂಲಕ ಪಾಕಿಸ್ತಾನದ ಕಿವಿ ಹಿಂಡುವ ಕೆಲಸ ಮಾಡಿತು. ತಿದ್ದು ಕೊಳ್ಳದ ವಕ್ರ ಬುದ್ಧಿಯ ಪಾಕಿಸ್ತಾನಕ್ಕೆ ಸಹನೆಯ ಕಟ್ಟೆ ಹೊಡೆದಾಗ ಭಾರತ ಯಾವ ರೀತಿ ಪಾಠ ಕಲಿಸಬಲ್ಲದು ಎಂದು ತೋರಿಸಿ ಕೊಟ್ಟ ಶೌರ್ಯದ ಇತಿಹಾಸ, “ಕಾರ್ಗಿಲ್ ವಾರ್ ಆಫ್ 1999”. ಭಾರತ ಅಣ್ವಸ್ತ್ರ ಪ್ರಯೋಗಿಸಿ 15 ದಿನಗಳಲ್ಲಿ ಪಾಕಿಸ್ತಾನ ಕೂಡಾ ಅಣು ಪರೀಕ್ಷೆ ನಡೆಸಿತು. ಪರಿಣಾಮ ಜಗತ್ತಿನ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಭಾರತ ಹಿರಿಯಣ್ಣನಾಗಿ ಪಾಕಿಸ್ತಾನವನ್ನು ಶಾಂತಿಯ ನೆಲೆಯಲ್ಲಿ, ಸ್ನೇಹಮಯ ವಾತಾವರಣ ಸ್ಥಾಪಿಸುವ ಸಲುವಾಗಿ ಪ್ರಯತ್ನ ಮಾಡಿತು.
 ಭಾರತದಿಂದ ಶಾಂತಿ-ಸ್ನೇಹ ಬಸ್ ಸೇವೆ ಯೋಜನೆ:  ಹಮ್ ಜಂಗ್ ನಹೀ ಹೊನೆ ದೆಂಗೇ, ತೀನ್ ಬಾರ್ ಹೊಚುಕಾ ಹೇ ಲಡಾಯಿ…. (ಯುದ್ಧ ಆಗಲು ಬಿಡುವುದಿಲ್ಲ, ಈ ಮೊದಲಾದ 3 ಸಲ ಕಹಿ ಅನುಭವ,ನಷ್ಟ ಇಬ್ಬರಿಗೂ ತಿಳಿದಿದೆ ಮತ್ತೊಂದು ಯುದ್ಧ ಬೇಡ.)ಇದು ಅಂದಿನ ಭಾರತದ ಪ್ರಧಾನಿ ವಾಜಪೇಯಿಯವರ ನೇರ ನುಡಿಗಳು. ವಿಶ್ವಕ್ಕೆ ಸ್ಪಷ್ಟ ಸಂದೇಶ… ಭಾರತ ಎಂದು ಯುದ್ಧ, ಜಗಳ,ಗಡಿ ಕ್ಯಾತೆಯನ್ನು ಪ್ರಚೋದಿಸುವುದಿಲ್ಲ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿ 20ನೇ ತಾರೀಖು ಭಾರತದಿಂದ ಪಾಕಿಸ್ತಾನಕ್ಕೆ ಬಸ್ಸೊಂದನ್ನು ಹೊರಡಿಸಿದರು.
ಎರಡೂ ದೇಶಗಳ ವೈಮನಸ್ಸು ಶಮನ ಮಾಡುವ ಐತಿಹಾಸಿಕ ನಡೆ ಭಾರತವೇ ತೆಗೆದುಕೊಂಡಿತು. ಶಾಂತಿ-ಅಮನ್ ತಳಹದಿಯಲ್ಲಿ ಬಸ್ಸು-ರೈಲುಗಳ ಮೂಲಕ ಸಾಮಾಜಿಕ, ವ್ಯಾವಹಾರಿಕ ಸಂಬಂಧ ಬೆಸೆಯಲು ಬಹುಮುಖ್ಯ ಹೆಜ್ಜೆ ಭಾರತವಿಟ್ಟಿತು. ಸ್ವತಃ ಅಟಲ್ಜೀ ಮತ್ತು ಕೆಲವು ಕ್ಯಾಬಿನೆಟ್ ಮಂತ್ರಿಗಳು ಶಿಷ್ಟಾಚಾರ,ರಾಜಕೀಯ ಚೌಕಟ್ಟನ್ನು ಬಿಟ್ಟು ಪಾಕಿಸ್ತಾನಕ್ಕೆ ಬಸ್ ಪ್ರಯಾಣ ಬೆಳೆಸಿದರು. ಲಾಹೋರ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿ, ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಜಮ್ಮು-ಕಾಶ್ಮೀರದ ಸಮಸ್ಯೆಗಳನ್ನು ಮಾತುಕತೆ ಹಾಗೂ ಉಗ್ರರನ್ನು ಹೊರಗಿಟ್ಟು ಬಗೆಹರಿಸಿಕೊಳ್ಳುವಂತೆ ಭರವಸೆಯನ್ನು ಒಬ್ಬರಿಗೊಬ್ಬರು ನೀಡಿಕೊಂಡರು.
ಮಾತು ತಪ್ಪಿದ ಪಾಕ್, ಟಾರ್ಗೆಟ್ ಕಾರ್ಗಿಲ್:  ಕಡತಗಳಲ್ಲಿ ಒಂದಾದರೆ, ಉಂಡ ಮನೆಗೆ ದ್ರೋಹ ಬಗೆಯುವುದು ತನ್ನ ಡಿ.ಎನ್.ಎ ಯಲ್ಲಿದೆ ಎಂಬುದನ್ನು ಪಾಕ್ ಮತ್ತೊಮ್ಮೆ ಖಚಿತಪಡಿಸಿತು. ಒಪ್ಪಂದದ ಕರಾರುಗಳನ್ನು ಗಾಳಿಗೆ ತೂರಿ ಲಾಹೋರ್ ಒಪ್ಪಂದಕ್ಕೆ ಅಂಕಿತ ಬಿದ್ದ ಐದೇ ವಾರಗಳಲ್ಲಿ ಅಂದರೆ 1999 ಮಾರ್ಚ್ 28ರ ವೇಳೆಗೆ ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ನರಿಯಂತೆ ಸನ್ನದ್ಧವಾಯಿತು. ಭಾರತದೊಂದಿಗೆ 1948, 1965, 1971ರ ಮೂರು ಯುದ್ಧಗಳಲ್ಲಿ ಆದ ಸೋಲಿನ ಸೇಡು ತಿರಿಸಿಕೊಳ್ಳುವ ಗಡಿಬಿಡಿಯಲ್ಲಿ ಮಾನವೀಯತೆ, ಶಾಂತಿ, ಸ್ನೇಹ ಸಂಬಂಧ ಎಲ್ಲಾ ಮರೆತ ಪಾಕ್ ಒಂದೊಂದಾಗಿ ದ್ರಾಸ್,ಕಾರ್ಗಿಲ್ ಪರ್ವತ ಶಿಖರಗಳನ್ನು ಆಕ್ರಮಿಸಲು ಆರಂಭಿಸಿತು. ಪಾಕ್ ಸೈನ್ಯ,ಐಎಸ್ಐ ಉಗ್ರ ಸಂಘಟನೆ ಸೇರಿಕೊಂಡು ಸಮರ್ಥ ಯೋಜನೆಗಳನ್ನು ರೂಪಿಸಿದ್ದವು.
ಯೋಜನೆಯಂತೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ಅಜ್ಜೌರಿ, ಪೂಂಚ್, ಗಂದರ್ಬಾಲ್, ಶ್ರೀನಗರ ಹೊರವಲಯ, ಅನಂತನಾಗ್ಗಳಲ್ಲಿ ಭಯೋತ್ಪಾದಕ ಕೃತ್ಯ ಎಲ್ಲೆ ಮೀರಿತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡಲಿಲ್ಲ ‘ಆಪರೇಷನ್ ಬಿದ್ರ್’ಗೆ ಚಾಲನೆ ನೀಡಿದರು. ಭಾರತಕ್ಕೆ ತಿಳಿಯುವ ಮುನ್ನ ಎತ್ತರದ ಆಯಕಟ್ಟಿನ ಶಿಖರಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕ್ ಸೈನ್ಯ ಗುಡ್ಡಗಳನ್ನು ಆಕ್ರಮಿಸಿ ಕಲ್ಲಿನ ಬಂಕರು ನಿರ್ಮಾಣ ಮಾಡಿದರು. 
ಭಾರತ ಸೈನ್ಯ ಕ್ಕೆ ಬಕರ್ ವಾಲಾಗಳ ಸಂದೇಶ: ಸೌಮ್ಯ ಸ್ವಭಾವದ ಮೂಲ ನಿವಾಸಿಗಳಾದ ಬಕರ್ರು ವಾಲಾಗಳು ( ಕುರಿಗಾಯಿ) ದಿನ ಸೇನಾ ಅಧಿಕಾರಿಗಳ ಗಮನಕ್ಕೆ ಶಿಖರಗಳಲ್ಲಿ ನೆಲೆಸಿರುವ ಪಾಕ್ ಸೈನಿಕರು ಹಾಗೂ ಉಗ್ರರ ಸುದ್ಧಿ ನೀಡುತ್ತಾರೆ.ಭಾರತೀಯ ಸೇನೆ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು ಕಳುಹಿಸಿತು 6 ಜನರ ತಂಡದೊಂದಿಗೆ ‘ಬಜರಂಗ್’ ಪೋಸ್ಟಿನತ್ತ ಹೊರಟರು, ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನ ಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ತಂಡ ಸೆರೆ ಸಿಕ್ಕಿತು. ಅವರನ್ನು ಚಿತ್ರವಿಚಿತ್ರವಾಗಿ ಹಿಂಸಿಸಿ 22 ದಿನಗಳ ಸೆರೆಯ ನಂತರ ಕೊಲ್ಲಲಾಯಿತು. 
ಯುದ್ಧಕ್ಕೆ ಅನುಮತಿ ಸೇನೆಗೆ ಪೂರ್ಣ ಜವಾಬ್ದಾರಿ: ಮೇ 24ರಂದು ಇದು ವ್ಯವಸ್ಥಿತ ದಾಳಿ ಸೇನೆ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ಗುಪ್ತಚರ ಇಲಾಖೆ ‘ರಾ’ ಮತ್ತು ಮೂರೂ ಸೇನೆಯ ಮುಖ್ಯಸ್ಥರುಗಳನ್ನು ಸೇರಿಸಿ ಮಹತ್ವದ ಸಭೆ ಮಾಡಲಾಯಿತು. ಭಾರತ ಸೇನೆಯ ಜನರಲ್ ಮಲಿಕ್ “ಸೇನೆಯ ಮೂರೂ ವಿಭಾಗಗಳು ಜೊತೆಗೂಡಿ ದಾಳಿಗೈದರೆ ಮಾತ್ರ ಪರಿಹಾರ. ಅನುಮತಿ ಕೊಡಿ” ಎಂದು ಪ್ರಧಾನಿಗೆ ಒಪ್ಪಿಸಿದರು.ಗಡಿಯ ಕಾರ್ಯಚರಣೆ ಮತ್ತು ಶತ್ರುಗಳನ್ನು ಸದೆಬಡಿಯಲು ಸೇನೆಗೆ ಪೂರ್ಣ ಸ್ವತಂತ್ರ ಸಿಕ್ಕಿತು.ಕಾರ್ಯಾಚರಣೆಯ ಟೈಟಲ್ ‘ಆಪರೇಷನ್ ವಿಜಯ್’. 
ಮೇ ತಿಂಗಳ ಆರಂಭದಲ್ಲಿ ಯುದ್ಧ ಜೋರಾಗಿಯೇ ಶುರುವಾಯಿತು, ದಾಳಿ-ಪ್ರತಿದಾಳಿಗಳು ನಡೆದವು ಎರಡೂ ಕಡೆಯಿಂದ ನಡೆಯುತ್ತದೆ. ವಿಮಾನಗಳ ಹಾರಾಟ, ಹೆಲಿಕಾಪ್ಟರ್ ಸದ್ಧು,  ಗ್ರೇನೆಡ್, ಮೊರ್ಟಾರ್ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಗಿಯೇ ನಡೆದಿತ್ತು. ಮೊದಮೊದಲು ಸ್ವಲ್ಪ ನಷ್ಟ ಅನುಭವಿಸಿದ ಭಾರತೀಯ ಸೇನೆ ಪಾಕಿಗಳನ್ನು ಬಗ್ಗುಬಡೆದು ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಸೇರಿದಂತೆ ಹಲವಾರು ಗುಡ್ಡ ಪ್ರದೇಶಗಳನ್ನು ಜುಲೈ 15-20ರ ಹೊತ್ತಿಗೆ ಅವರ ಪಾಪಿಗಳ ಕೈಗಳಿಂದ ವಶಪಡಿಸಿಕೊಳ್ಳಲಾಯಿತು. 
ಫೈನಲ್ ವಾರ್ ಮತ್ತು ಭಾರತೀಯ ಸೇನೆಗೆ ವಿಕ್ಟರಿ; ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ಕ್ಕೆ ಕಾರ್ಯಾಚರಣೆ ನಿಲ್ಲಿಸಿ “ಆಪರೇಷನ್ ವಿಜಯ್”ನ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತು ಪಡಿಸಿತ್ತು. ಎಲ್ಲಾ ಪೋಸ್ಟ್ ಹಾಗೂ ಶಿಖರಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸುತ್ತದೆ. ಅಡಿಗೆ ಬಿದ್ದರೂ ಮೂಗು ಮೇಲೆಂಬಂತೆ, ಪಾಕಿಸ್ತಾನ ಸರ್ಕಾರ ಮೊದಲು ತನಗಾದ ನಷ್ಟ ಮತ್ತು ಮೃತ ಪಟ್ಟ ಸೈನಿಕರ ಸಂಖೈ ಬಹಿರಂಗ ಪಡಿಸಲು ಹಿಂದೆಟು ಹಾಕಿ ಕೇವಲ 300 ಕ್ಕಿಂತ ಕಡಿಮೆ ಸೈನಿಕರು ಸತ್ತಿರುವಂತೆ ವರದಿ ಮಾಡುತ್ತದೆ.
ನಂತರದ ದಿನಗಳಲ್ಲಿ ಪ್ರಧಾನಿಮಂತ್ರಿ ಮತ್ತು ಪಾಕಿಸ್ತಾನ ಸರ್ಕಾರ ವಿಶ್ವದ ಮುಂದೆ ತೀವ್ರ ಮುಖಭಂಗಕ್ಕೆ ಒಳಗಾದಾಗ 3500 ಸಾವಿರಕ್ಕೂ ಹೆಚ್ಚು ಪಾಕ್ ಸೈನಿಕರು ಹಾಗೂ ಅವರ ಜೊತೆಗಿದ್ದ ಉಗ್ರರ ಸಾವಾಗಿದೆ ಎಂಬುದನ್ನು ಪಾಕ್ ಸಂಸತ್ ನಲ್ಲಿ ಖುದ್ದು ನವಾಜ್ ಶರೀಫ್ ಸ್ಪಷ್ಟನೆ ಕೊಡುತ್ತಾರೆ.ಈ ರೀತಿ ಪಾಕ್ ನ ಸುಳ್ಳಿನ ಮುಖವಾಡ ಕಳಚಿ ಬೀಳುತ್ತದೆ.
 ಮಾಧ್ಯಮಗಳ ಬಹುಮುಖ್ಯ ಪಾತ್ರ:  ಆ ದಿನಗಳಲ್ಲಿ ದೇಶದ ಟಿವಿ ಹಾಗೂ ಮಾಧ್ಯಮಗಳ ಡಿಜಿಟಲ್ ಕ್ರಾಂತಿ ಆರಂಭವಾಗಿತ್ತು.ವಿಶ್ವದಲ್ಲೇ ಮೊದಲು ಎಂಬಂತೆ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಅಪ್ಡೇಟ್ಸ್,ನೇರ ಪ್ರಸಾರದ ದೃಶ್ಯಗಳನ್ನು ದೇಶದ ರಾಷ್ಟ್ರೀಯ ಮಾಧ್ಯಮ ಮತ್ತು ನಿಖರವಾದ ವರದಿಗಳು ದೂರದರ್ಶನದಲ್ಲಿ ಪ್ರಸಾರವಾಯಿತು. ಅನೇಕ ಟಿವಿ ಪತ್ರಿಕೆಗಳ ವರದಿಗಾರರು ಕಾರ್ಗಿಲ್ ಬೆಸ್ ಕ್ಯಾಂಪ್ ಹಾಗು ಗ್ರೌಂಡ್ ರಿಪೋರ್ಟಿಂಗ್ ಮಾಡಿತು.
 ಪ್ರಮುಖ ಕಾರ್ಗಿಲ್ ಯೋಧರ ಹೆಸರುಗಳು ಅಮರ: ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೇನೇಡಿಯರ್ ಯೋಗೇಂದರ್ ಸಿಂಗ್ ಯಾದವ್, ಲೆಫ್ಟಿನೆಂಟ್ ಬಲವಾನ್ ಸಿಂಗ್, ಮೇಜರ್ ರಾಜೇಶ್ ಅಧಿಕಾರಿ, ಮೇಜರ್ ವಿವೇಕ್ ಗುಪ್ತಾ, ಮೇಜರ್ ಪದ್ಮಪಾಣಿ ಆಚಾರ್ಯ, ಕ್ಯಾಪ್ಟನ್ ಅಮೋಲ್ ಕಾಲಿಯಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಅನುಜ್ ನಾಯರ್, ನಾಯ್ಕ ದೀಗೆಂದ್ರ ಕುಮಾರ್, ಸೇರಿದಂತೆ ಅನೇಕ ಸಾಹಸಿ ಯೋಧರ ಪರಾಕ್ರಮ ಮತ್ತು ನೂರಾರು ಯೋಧರ ತ್ಯಾಗ ಬಲಿದಾನದ ಪ್ರತೀಕವಾಗಿ ಕಾರ್ಗಿಲ್ ವಿಜಯ ಭಾರತದ ಪಾಲಾಯಿತು.
ಸತ್ಯ, ಧರ್ಮ, ನಿಸ್ವಾರ್ಥ, ಕರ್ತವ್ಯ ಬದ್ಧತೆ, ತ್ಯಾಗ, ಶೌರ್ಯಗಳಲ್ಲಿ ಭಾರತೀಯ ಸೈನಿಕರಿಗೆ ಸರಿಸಮ ಮತ್ತಾರೂ ಇಲ್ಲ. ದೈಹಿಕವಾಗಿ ಬಲಾಢ್ಯನೂ, ಚುರುಕೂ ಆಗಿದ್ದಾನೆ. ಸೂಕ್ತ ನಾಯಕನ ನೇತೃತ್ವದಲ್ಲಿ ಅವನು ಅದ್ಭುತವಾದ ಕೊಡುಗೆಗಳನ್ನು ಕೊಡಬಲ್ಲ! ಎಂಬುದು ಜಗತ್ತಿನೆದುರು ಮತ್ತೆ ಸಾಬೀತಾಯಿತು.
ಭಾರತೀಯ ಸೇನೆ ಯಾವುದೇ ಧರ್ಮಾಧರಿತ ತತ್ವ ಅಥವ ಮೂಲಭೂತ ಸಿದ್ಧಾಂತ ಗಳನ್ನು ನಂಬಿಕೊಂಡಿಲ್ಲ. ಕೇವಲ ಮಾತೃಭೂಮಿ, ಸೇವೆ, ಐಕ್ಯತೆ ‘ಸರ್ವೇ ಜನಾ ಸುಖಿನೋ ಭವಂತು’ ಎಂಬ ನೆಲೆಯಲ್ಲಿ ಕಾರ್ಯ ನಿರ್ವಹಿಸುವ ಜಗತ್ತಿನ ಏಕೈಕ ಸೇನಾ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ನಮ್ಮ ಯೋಧರ ಬಲಿದಾನವನ್ನು ನಾವಿಂದು ಸ್ಮರಿಸಿಕೊಳ್ಳಬೇಕಿದೆ.
 ಕಾಣದ ಕೈಗಳ ಶೌರ್ಯ ಶಕ್ತಿ ಪ್ರದರ್ಶನ: ಭಾರತೀಯ ಸೈನಿಕರಿಗೆ ಅನೇಕ ಕಡೆಗಳಲ್ಲಿ ವ್ಯತಿರಿಕ್ತ ಅನುಭವ, ಹಿನ್ನಡೆಯಾದ ಸಂಧರ್ಭ ಕಂಡುಬರುತ್ತದೆ, ಕಾರಣ ಸಾವಿರಾರು ಅಡಿಗಳ ಬೆಟ್ಟದ ತುದಿಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಅಡಗಿ ಕೂತು ದಾಳಿಮಾಡುವ ಶತ್ರುಗಳು ಒಂದೆಡೆಯಾದರೆ, ಮೈ, ರಕ್ತ ಮೂಳೆ ಮುರಿವಂತೆ ಕೊರೆಯುವ ಮೈನಸ್ ಹವಾಮಾನ, ಗಾಳಿ, ಮಳೆ ಇವೆಲ್ಲವೂ ಸಮಸ್ಯೆ ತಂದೊಡ್ಡುತ್ತಿತ್ತು. ಆವಾಗ ತನ್ನ ಫರ್ಫೆಕ್ಟ್ ದಾಳಿಯಿಂದ ಭಾರತೀಯ ವಾಯುಸೇನೆ ಹೆಲಿಕಾಪ್ಟರ್, ವಿಮಾನಗಳು ಶತ್ರುಗಳನ್ನು ಹಿಮೆಟ್ಟಿಸುವ ತಂತ್ರಗಾರಿಕೆ ಮಾಡಿತು.ಇದರೊಂದಿಗೆ ಬೋಫೋರ್ಸ ಫಿರಂಗಿಗಳ ದಾಳಿಗೆ ನೂರಾರು ಪಾಕ್ ಬಂಕರ್ ಗಳು ಉಡೀಸ್ ಆದವು. 
ಶಾಂತಿ,ಸಂಯಮ, ಗೌರವ, ಶಿಸ್ತಿಗೆ ಹೆಸರುವಾಸಿ ಭಾರತೀಯ ಸೇನೆ ಕಾಲ್ಕೆರೆದು ಏನಾದರೂ ನಮ್ಮ ತಂಟೆಗೆ ಬಂದರೆ ಹೆಡೆಮುರಿ ಕಟ್ಟುವುದು ಗ್ಯಾರಂಟಿ ಎಂದು ಕಾರ್ಗಿಲ್ ನಲ್ಲಿ ತೋರಿಸಿ ಕೊಟ್ಟಿತು. ಮೋಸದಿಂದ ಪಾಕಿಸ್ತಾನ ಪೂರ್ವ ನಿಯೋಜಿತ ದಾಳಿ ಮಾಡಿದಾಗ, ನಮ್ಮೆಡೆಯಿಂದ ನಿರೀಕ್ಷಿತ ಪ್ರತ್ಯುತ್ತರ.
ಇವತ್ತು ಕಾರ್ಗಿಲ್ ವಿಜಯ್ ದಿವಸ್ ಭಾರತೀಯ ವೀರ ಸೇನೆಗೆ ಒಂದು ಸಲಾಂ ಇರಲಿ. ಜೈಹಿಂದ್ !!
 
 
 
 
 
 
 
 
 
 
 

Leave a Reply