Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಕೋವಿಡ್ ಕೇರ್ ಸೆಂಟರ್ ಗೆ ತೆರಳುವ ರೋಗಿಗಳನ್ನು ತಡೆಯುವವರ ವಿರುದ್ಧ ಕಾನೂನು ಕ್ರಮ : ಜಿ.ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ.ಈವರೆಗೆ ದಾಖಾಲಾದ ಪ್ರಕರಣಗಳಲ್ಲಿ, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಕಂಡುಬಂದಿರುವುದಿಲ್ಲ. ಅಲ್ಲದೇ ಅಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳು ಸೀಮಿತ ಸಂಖ್ಯೆಯಲ್ಲಿರುವ ಹಿನ್ನೆಲೆ ರೋಗಲಕ್ಷಣ ತೀವ್ರವಿರುವ ಮತ್ತು ಆಸ್ಪತ್ರೆಯ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಲಭ್ಯವಾಗುವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. 

ಉಡುಪಿಯಲ್ಲಿ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ಈ ಮಧ್ಯೆ ಮನೆಯಲ್ಲಿ ಅಗತ್ಯವಾದ ಸೌಲಭ್ಯಗಳಿಲ್ಲದಿದ್ದರೂ ಸಾಂಸ್ಥಿಕ ಪ್ರತ್ಯೇಕತೆ ಮಾಡಿಸಿಕೊಳ್ಳಲು ನಿರಾಕರಿಸುತ್ತಿರುವ ಬಗ್ಗೆ , ರೋಗಿಗಳಿಂದ ಪ್ರತಿರೋಧವ ಎದುರಾಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ರೋಗಿಗಳು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುವ ಕಾರಣ ರೋಗಿಯ ಮನೆಮಂದಿಗೆಲ್ಲ ರೋಗ ತಗಲುವ ಸಂಭವ ಅಧಿಕವಾಗಿದ್ದು, ಕೋವಿಡ್-19 ಪಾಸಿಟಿವ್ ಪ್ರಕರಣಗಳು ಅಲ್ಪ ಸಮಯದಲ್ಲಿ ಹೆಚ್ಚಾಗಿ , ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಹಾಗೂ ಆಸ್ಪತ್ರೆಗಳ ಬೆಡ್ ಗಳಿಗೆ ಬೇಡಿಕೆ ಹೆಚ್ಚಾಗಿ, ಬೆಡ್ ಗಳ ಕೊರತೆ ಉಂಟಾಗುತ್ತದೆ.

ಇದನ್ನು ಗಂಭೀರವಾಗಿ ಪರಿಗಣಿಸಿದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯಚರಣೆಗೆ ಅಡಚಣೆಯುಂಟಾಗಬಹುದಾಗಿದೆ.ಅಲ್ಲದೇ ಅಸ್ಪತ್ರೆಗಳಲ್ಲಿ ಬೆಡ್ ಗಳನ್ನು ಆಶ್ರಯಿಸಿ ಬರುವವರ ಸಂಖ್ಯೆ ಗಣನೀಯವಾಗಿ ಏರಿ ಬೆಡ್ ಗಳು ಸರಿಯಾದ ಸಮಯದಲ್ಲಿ ಲಭ್ಯವಾಗದೇ ಸಾವಿನ ಪ್ರಮಾಣ ಹೆಚ್ಚಾಗಬಹುದು.ಆದ್ದರಿಂದ ಆರೋಗ್ಯ ಪ್ರಾಧಿಕಾರಗಳು, ವಾರ್ಡ್ ಕಾರ್ಯಪಡೆ, ಗ್ರಾಮ ಕಾರ್ಯಪಡೆಯ ಅಭಿಪ್ರಾಯದಂತೆ ಮನೆಯ ಪ್ರತ್ಯೇಕತೆಗೆ ಅಗತ್ಯವಾದ ಸೌಲಭ್ಯಗಳನ್ನು ಮನೆಗಳಲ್ಲಿ ಹೊಂದಿರದ ರೋಗಿಗಳು ಕೋವಿಡ್ ಕೇರ್ ಸೆಂಟರ್ ಕಡ್ಡಾಯವಾಗಿ ಸ್ಥಳಾಂತರಗೊಳ್ಳಬೇಕು. 

 ಅಂತಹ ರೋಗಿಗಳ ಸ್ಥಳಾಂತರವನ್ನು ತಡೆಯುವ, ವಿರೋಧಿಸುವ, ಪ್ರತಿರೋಧಿಸುವ ಯಾವುದೇ ವ್ಯಕ್ತಿಯ ಅಥವಾ ರೋಗಿಯ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ 2020 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!