ಕಾಪು: ವಿಶ್ವ ಪರಿಸರ ದಿನಾಚಣೆಯ ಅಂಗವಾಗಿ ಪರಿಸರ ಗೀತೆಗಳ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ ಹಾಗೂ ಪಾಂಡೇಶ್ವರ ಕಾಳಿಂಗ ರಾವ್ ಪ್ರತಿಷ್ಠಾನ ಉಡುಪಿ ಜಿಲ್ಲಾ ಘಟಕ ಮತ್ತು ದಂಡತಿರ್ಥ ಸಮೂಹ ಸಂಸ್ಥೆ ಕಾಪು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ:05/06/2023 ರಂದು ವಿಶ್ವ ಪರಿಸರ ದಿನಾಚಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ, ಪರಿಸರ ಜಾನ ಜಾಗೃತಿ ಕುರಿತು ನಾಡಿನ ಹೆಮ್ಮೆಯ ಪ್ರಸಿದ್ಧ ಗಾಯಕ ಡಾ.ಗಣೇಶ್ ಗಂಗೊಳ್ಳಿ ಹಾಗೂ ಯುವ ಗಾಯಕಿ ಕುಮಾರಿ ಅಶ್ವಿನಿ ಕಂಚಿನಡ್ಕ ಇವರ ಬಳಗ ಪರಿಸರ ಗೀತೆಗಳ ಕಾರ್ಯಕ್ರಮ ಜರುಗಿತು… ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀಮತಿ ಮರೀನಾ ಸರೋಜ ಸೋನ್ಸ್ ವಹಿಸಿಕೊಂಡರು ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಚಿತ್ರ ಲೇಖ ಶೆಟ್ಟಿ, ಎಂ . ನೀಲಾನಂದ ನಾಯ್ಕ್ ಕಾರ್ಯದರ್ಶಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರದ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿ ಆಯಿತು ಕೀಬೋರ್ಡ್ ಅಲ್ಲಿ ಶಶಿ ಕುಮಾರ್ ಹೆಜಮಾಡಿ ಕೋಡಿ ಹಾಗೂ ರಾಘವೇಂದ್ರ ಕಾಪು ಅವರು ರಿದಮ್ ಪ್ಯಾಡ್ ಅಲ್ಲಿ ಸಹಕಿರಿಸಿದರು

Leave a Reply