ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾರದಾಂಬೆ ದೇಗುಲ!

ಕಾಶ್ಮೀರ: ತಿತ್ವಾಲ್‌ನಲ್ಲಿ ನಿರ್ಮಾಣವಾಗಿರುವ ನೂತನ ಶಾರದಾಂಬೆ ದೇವಾಲಯಕ್ಕೆ ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶೃಂಗೇರಿಯಿಂದ‌ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್ ನಲ್ಲಿ ಶಂಕರಾಚಾರ್ಯರು ಶಾರದಾಂಬೆ ದೇಗುಲವನ್ನು ನಿರ್ಮಿಸಿದ್ದರು. ಇದು ದಕ್ಷಿಣ ಏಷ್ಯಾದ 18 ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ದೇಶ ವಿಭಜನೆ ಮತ್ತು ಬುಡಕಟ್ಟು ದಾಳಿಯ ಕಾರಣದಿಂದ ಪಾಳು ಬಿದ್ದಿತ್ತು. 1948ರ ಬಳಿಕ ತೀರ್ಥಯಾತ್ರಿಗಳಿಗೂ ಅವಕಾಶ ನೀಡಿರಲಿಲ್ಲ. ಇದೀಗ 25 ವರ್ಷಗಳ ಬಳಿಕ ತಿತ್ವಾಲ್ ನ ಶಾರದಾಂಬೆ ದೇಗುಲವನ್ನು ಮರು ನಿರ್ಮಾಣ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರು ಶೃಂಗೇರಿಗೆ ಭೇಟಿ ನೀಡಿ ಸರ್ವಜ್ಞ ಪೀಠವನ್ನು ಪುನರ್ ಪ್ರತಿಷ್ಠಾಪಿಸುವಂತೆ ಮನವಿ ಮಾಡಿದ್ದರು. ಜನವರಿ 24ರಂದು ಪಂಚಲೋಹದ ಶಾರದಾಂಬೆ ಮೂರ್ತಿಯನ್ನು ಶೃಂಗೇರಿಯಿಂದ ಕಳುಹಿಸಲಾಗಿತ್ತು. ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ ಇದೀಗ ಪಂಚಲೋಹದ ಸುಂದರ ಮೂರ್ತಿ ಸರ್ವಜ್ಞ ಪೀಠದಲ್ಲಿ ಪ್ರತಿಷ್ಠಾಪನೆ ಆಗಿದೆ. ಇದೀಗ ಅದೇ ಶಾರದಾಂಭೇ ಮೂರ್ತಿಗೆ ಇಂದು ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಿಲಿದ್ದಾರೆ.

 
 
 
 
 
 
 
 
 
 
 

Leave a Reply