Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಉಡುಪಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಇದರ ಉದ್ಫಾಟನಾ ಸಮಾರಂಭ

ಉಡುಪಿ :- ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಇದರ ಉದ್ಫಾಟನಾ ಸಮಾರಂಭ ಆ .15 ರಂದು ನಡೆಯಿತು.

ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಆಂಗಾರ ಪ್ರಧಾನಿಯವರ ಆಶಯದಂತೆ ಅತ್ಯಂತ ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧ ನೀಡುವ ಈ ಕಾಯ೯ ಯಶಸ್ವಿಯಾಗಿ ನಡೆಯುತ್ತಿದೆ. ಸ್ವಾತಂತ್ರ್ಯದ ಅಮ್ರತ ಮಹೋತ್ಸವದ ಈ ಶುಭ ಸಂದಭ೯ದಲ್ಲಿ ಈ ಕೇಂದ್ರ ಪ್ರಾರಂಭಗೊಂಡಿರುವುದು ಸಂತೋಷಕರ ಎಂದರು.

ಕಾಯ೯ಕ್ರಮದಲ್ಲಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಕೂಮ೯ ರಾವ್, ಜಿಲ್ಲಾ ಸಜ೯ನ್ ಡಾII ಮಧುಸೂಧನ್ ನಾಯಕ್, ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಫೆಡರೇಶನ್ ಉಪಾಧ್ಯಕ್ಷ ರಮೇಶ್ ಪೂಜಾರಿ, ವಲಯ ನಿದೇ೯ಶಕ ಲಕ್ಷೀಕಾಂತ್ ಮುಂತಾದವರಿದ್ದರು. ಜಯಂಟ್ಸ್ – ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ. ಸ್ವಾಗತಿಸಿದರು.
ಕಾಯ೯ದಶಿ೯ ಶ್ರೀನಾಥ್ ಕೋಟ, ನಿದೇ೯ಶಕರುಗಳಾದ ರವಿರಾಜ್ ಹೆಚ್.ಪಿ, ವಿವೇಕ್ ಕಾಮತ್, ಅಣ್ಣಯ ದಾಸ್, ರೋನಾಲ್ಡ್’ ಮಿಲ್ಟನ್ , ಸುನೀತಾ ಮಧುಸೂಧನ್ ಮುಂತಾದವರು ರಾಘವೇಂದ್ರ ಕವಾ೯ಲು ನಿರೂಪಿಸಿದರು.ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಕಟ್ಟಡ ನಿಮಾ೯ಣದಲ್ಲಿ ಸಹಕರಿಸಿದ ಅಶೋಕ್ ಮತ್ತು ಜಿಲ್ಲಾ ಸಜ೯ನ್ ರವರನ್ನು ಗೌರವಿಸಲಾಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!