ಸರಸ್ವತಿ ವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ – ಅಮೃತ ಮಹೋತ್ಸವ 2022 ದಿನಾಚರಣೆ

ಸ್ವಾತಂತ್ರ್ಯೋತ್ಸವ – ಅಮೃತ ಮಹೋತ್ಸವ 2022 ದಿನಾಚರಣೆಯ ಅಂಗವಾಗಿ ಗಂಗೊಳ್ಳಿ
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿಗಳು ಭಾಷಣ,ದೇಶಭಕ್ತಿ ಗೀತೆ ಭಾವಗೀತೆ ಜಾನಪದ ಗೀತೆ,ನೃತ್ಯ, ನಾಟಕ, ಛದ್ಮವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಗಳನ್ನು ವಿತರಿಸಿ ಅಭಿನಂದಿಸಲಾಯಿತು.
ಕೆ.ಪುಂಡಲೀಕ ನಾಯಕ್, ನಾಯ್ಕನಕಟ್ಟೆ ಬೈಂದೂರು ಇವರು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ತಮ್ಮ ಪುಸ್ತಕಗಳನ್ನು ಉಚಿತವಾಗಿ ನೀಡಿ ಸಹಕರಿಸಿದಬಗ್ಗೆ ಅವರಿಗೆ ಧನ್ಯವಾದಗಳನ್ನು ಹೇಳಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ
ಉಮೇಶ್ ಕಾರ್ಣಿಕ್, ಉಪ ಪ್ರಾಂಶುಪಾಲರು. ಶ್ರೀಲತಾ ಹಿರಿಯ ಶಿಕ್ಷಕಿಯರು.
ಪೋಷಕರ ಪ್ರತಿನಿಧಿ ಶ್ರೀ ಪ್ರಕಾಶ್ ಶೆಣೈ ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಗೋಪಾಲ್, ಲವಿನಾ,ಆದಿನಾಥ ಕಿಣಿ,
ನಮಿತಾ ಶೆಣೈ ಇವರು ಆಯೋಜಿಸಿ, ನಿರ್ವಹಿಸಿದರು.

 
 
 
 
 
 
 
 
 
 
 

Leave a Reply