ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ

ಕುಂದಾಪುರ: ಕೋಟೇಶ್ವರ,ಕಿರಿಮಂಜೇಶ್ವರ,ಶಿರೂರು ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಶನಿವಾರ ಭೇಟಿ ನೀಡಿದರು.

ಶಿರೂರು ಟೋಲ್‌ಗೇಟ್,ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಹಾಗೂ ಶಿರೂರು ಗ್ರಾಮ ಪಂಚಾಯತ್‌ಗೆ ಭೇಟಿ ನಿಡಿದರು.ಈ ಸಂದರ್ಭದಲ್ಲಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 40 ಗ್ರಾಮ ಪಂಚಾಯತ್‌ಗಳನ್ನು ಸೀಲ್‌ಡೌನ್ ಮಾಡಲಾಗಿದೆ.ಆರಂಭದಲ್ಲಿ ನೂರಕ್ಕೆ 38 ರಿಂದ 48 ಜನರಿಗೆ ಸೋಂಕು ತಗಲುವ ಪ್ರಮಾಣ ಇದ್ದು ಪ್ರಸ್ತುತ ಕಠಿಣ ನಿಲುವುಗಳ ಮೂಲಕ 15% ಶೇಕಡದಿಂದ 16% ಶೇಕಡಕ್ಕೆ ಇಳಿಸುವ ಗುರಿಯಿದೆ.ಹೊಸ ಪ್ರಕರಣಗಳು ಕಡಿಮೆಯಾಗಬೇಕಿದೆ ಎಂದರು.ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಜಿಲ್ಲಾಧಿಕಾರಿಗಳು ಶ್ಲಾಘೀಸಿದ್ದಾರೆ.ಆರಂಭದಲ್ಲಿ 350 ಇರುವ ಸಂಖ್ಯೆ ಇಂದು 65ಕ್ಕೆ ಬಂದಿದೆ.ಇದು ಬಹಳ ಉತ್ತಮ ಪ್ರಯತ್ನ ಈ ನಿಟ್ಟಿನಲ್ಲಿ ಪ್ರಯತ್ನಿಸಿದ ಕಂದಾಯ ಇಲಾಖೆ,ಗ್ರಾಮ ಪಂಚಾಯತ್,ಆರೋಗ್ಯ ಇಲಾಖೆ,ಟಾಸ್ಕ್‌ಪೋರ್ಸ್,ಆರಕ್ಷಕರು ಮತ್ತು ಸಾರ್ವಜನಿಕರ ಸಹಕಾರ ಶ್ಲಾಘನೀಯವಾಗಿದೆ ಎಂದರು. 

ಕುಂದಾಪುರ ಸಹಾಯಕ ಕಮಿಷನರ್ ರಾಜು,ಬೈಂದೂರು ತಹಶೀಲ್ದಾರ ಶೋಭಾಕ್ಷ್ಮಿ, ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಹನಾ,ಕಂದಾಯ ನಿರೀಕ್ಷಕ ಮಂಜು,ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ,ಶಿರೂರು ಪಿಡಿಓ ಮಂಜುನಾಥ ಶೆಟ್ಟಿ,ಶಿರೂರು ಗ್ರಾಮ ಲೆಕ್ಕಾಧಿಕಾರಿ ಸತೀಶ ಹೋಬಳಿದಾರ್ ಹಾಜರಿದ್ದರು.

 
 
 
 
 
 
 
 
 
 
 

Leave a Reply