ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ (ರಿ.) ಲಕ್ಷ್ಮೀ ನಗರ,
ಡಿಜಿಟಲ್ ಸೇವಾ ಕೇಂದ್ರ ಕೊಡವೂರು. ಇವರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ನ.13 ರಂದು ಲಕ್ಷ್ಮೀ ನಗರ ಪೇಟೆಯಲ್ಲಿ ನಡೆಯಿತು.

ಶಿಬಿರವನ್ನು ಹಿರಿಯರಾದ ಶೇಕರ್ ಲಕ್ಷ್ಮೀ ನಗರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಬದಲ್ಲಿ ಮಾತನಾಡಿದ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು,
ಈಗಾಗಲೇ ಕೊಡವೂರು ವಾರ್ಡಿನಲ್ಲಿ ಇಂತಹ ಶಿಬಿರವನ್ನು ಪ್ರತೀ ಪರಿಸರದಲ್ಲಿ ಸಂಘ ಸಂಸ್ಥೆಗಳ ಸಹಯೋಗದಿಂದ ಮಾಡುತ್ತಾ ಇದ್ದು, ಕೇಂದ್ರ ರಾಜ್ಯ ಸರಕಾರ ಯೋಜನೆಯನ್ನು ಎಲ್ಲಾ ಜನರಿಗೂ ಮುಟ್ಟಿಸಲು ಇಂತಹ ಚಿಕ್ಕ ಚಿಕ್ಕ ಶಿಬಿರದ ಮೂಲಕ ಮಾಡಲು ಸಹಾಯವಾಗುತ್ತದೆ ಎಂದರು.

ಒಟ್ಟು 73 ಜನರು ಉಚಿತವಾಗಿ ಶಿಬಿರದ ಪ್ರಯೋಜನವನ್ನು ಪಡೆದರು.

ಈ ಸಂದರ್ಬದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಪ್ರಶಾಂತ್,ಸುಶ್ಮಿತಾ ಡಿಜಿಟಲ್ ಸೇವಾ ಕೇಂದ್ರ ಕೊಡವೂರು, ಸವಿತ ಡಿ. PHCO ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಅಮಿತ್,ರಮೇಶ್, ರವಿ, ರಾಜೇಶ್, ವಿನಯ್, ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply