ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರುಗಳ ಆಯ್ಕೆಯ ಬಗ್ಗೆ ಎಚ್ಚರ ವಹಿಸಬೇಕು

ಉಡುಪಿ : ಶ್ರೀ ರಮಾನಂದ ಗುರೂಜಿಯ ದುರ್ಗಾ ಆದಿಶಕ್ತಿ ಕ್ಷೇತ್ರದ ದೊಡ್ಡಣಗುಡ್ಡೆಯಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಜನ ಜಾಗೃತಿ ಮೂಡಿಸಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಗುರುಗಳ ಆಯ್ಕೆಯನ್ನು ನಾವು ಬಹಳಷ್ಟು ಎಚ್ಚರಿಕೆ ವಹಿಸಿ ನಿರ್ಧರಿಸಬೇಕು.ಯಾಕೆಂದರೆ ಕಲಿಯುಗದಲ್ಲಿ ಗುರುಗಳ ಆಯ್ಕೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ, ಸ್ವಲ್ಪ ಎಡವಿದರೂ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಗುರುವಿನ ಆಯ್ಕೆ ಅತಿ ಮುಖ್ಯ ವೆಂದು ಹೇಳಿದರು.

ಗುರು ಪೂರ್ಣಿಮೆ ಪ್ರಯುಕ್ತ ಕ್ಷೇತ್ರದಲ್ಲಿ ಮನ್ಯು ನಾಮಕ ಲಕ್ಷ್ಮೀನರಸಿಂಹ ನರಸಿಂಹಯಾಗ ಕೃಷ್ಣಮೂರ್ತಿ ತಂತ್ರಿಯ ನೇತೃತ್ವದಲ್ಲಿ ನೆರವೇರಿತು. ಕ್ಷೇತ್ರದ ನಾಗಬನದಲ್ಲಿರುವ ಗುರುಸಾನ್ನಿಧ್ಯದಲ್ಲಿ ವಿಶೇಷವಾದ ಪೂಜೆಯನ್ನು ಸ್ವಸ್ತಿಕ್ ಆಚಾರ್ಯ ಮೂಲಕ ನೆರವೇರಿಸಲಾಯಿತು. ನೂರಾರು ಭಕ್ತರು ಗುರುಗಳಿಗೆ ಕಾಣಿಕೆಯನ್ನು ಸಮರ್ಪಿಸಿ ಗುರು ವಂದನೆಯನ್ನು ಸಲ್ಲಿಸಿದರು. ಗುರೂಜಿಯವರು ದೇಶವು ಕೊರೊನ ಮುಕ್ತವಾಗಿ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಹಾರೈಸಿದರು .ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು .   

ಪ್ರಜ್ಞಾ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಉಷಾ ರಮಾನಂದ, ಜೆಎಂಟಿ ಬಸ್ ಮಾಲಕ ಆನಂದ ಬಾಯಿರಿ, ಪ್ರಾಧ್ಯಾಪಕಿ ಸ್ವಾತಿ ಆಚಾರ್ಯ , ಕೃಷ್ಣ ಕಟ್ಟಡ ಗುತ್ತಿಗೆದಾರ ಪ್ರದೀಪ್, ಸುರತ್ಕಲ್ ನ ದೀಪಕ್ ಕುಮಾರ್, ಅಂಬಲಪಾಡಿಯ ಗಣೇಶ, ಹಳೆಯಂಗಡಿಯ ಕೃಷ್ಣ, ಉಮೇಶ್, ಮಾಧವ ಶೆಟ್ಟಿಗಾರ್, ಜಗದೀಶ್ ಆಚಾರ್ಯ, ಗಣೇಶ್, ಸುಲೋಚನಾ ಶೆಟ್ಟಿ, ಗೀತಾ ಶೆಟ್ಟಿ, ಹರಿಣಿ ದಾಮೋದರ್ ಅಶ್ವಿನ್ ಕುಮಾರ್ ಛಾಯಾ ಗ್ರಾಹಕರಾಗಿ ಚರಣ್ ರಾಜ್ ಹಾಗೂ ಗುರೂಜಿಯವರ ಭಕ್ತವೃಂದ ಹಾಜರಿದ್ದರು. 

 
 
 
 
 
 
 
 
 
 
 

Leave a Reply