ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ

ಉಡುಪಿಯ ಆದರ್ಶ ಆಸ್ಪತ್ರೆ ಕಳೆದ ಹಲವಾರು ವರುಷಗಳಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಮಹತ್ವದ ಕೆಲಸವನ್ನು ಆದರ್ಶ ಆಸ್ಪತ್ರೆ ಮಾಡುತ್ತಾ ಬಂದಿದೆ. ಇದಕ್ಕೆ ಮುಖ್ಯಕಾರಣ ಶಿಕ್ಷಕರ ಮೇಲೆ ಆಸ್ಪತ್ರೆಗೆ ಇರುವ ವಿಶೇಷ ಕಾಳಜಿ ಹಾಗೂ ಗೌರವ, ಸಾಧಕ
ಶಿಕ್ಷಕರನ್ನು ಗೌರವಿಸುವ ಮೂಲಕ ಇತರ ಶಿಕ್ಷಕರಿಗೆ ಈ ಹಾದಿಯಲ್ಲಿ ಸಾಗುವಂತೆ ಹುರಿದುಂಬಿಸುವುದು. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ದಿನಾಂಕ ೧೦.೦೯.೨೦೨೩ ರ ಭಾನುವಾರ ಬೆಳಿಗ್ಗೆ ೦೯:೩೦ ಗಂಟೆಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ
ಶಿಕ್ಷಕರು ಹಾಗೂ ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರವನ್ನು ಶ್ರೀಮತಿ ಮಮತಾದೇವಿ ಜಿ ಎಸ್ ಅಪರ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ದೀಪವನ್ನು ಬೆಳಗಿಸುವ ಮೂಲಕ
ಉದ್ಘಾಟಿಸಿದರು. ಉಡುಪಿ ಜಿಲ್ಲೆಯ ೫ ವಲಯಗಳ ಶಿಕ್ಷಕರುಗಳಿಗೆ ಪ್ರತೀ ವಲಯದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಸರಕಾರಿ, ಅನುದಾನಿತ ಅನುದಾನ ರಹಿತ ಹಾಗೂ
ಫ್ರೌಢಶಾಲಾ ವಿಭಾಗದಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಒಟ್ಟು ೫ ವಲಯಗಳ ೩೦ ಶಿಕ್ಷಕರುಗಳಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಶ್ರೀಮತಿ ರಶ್ಮಿ ಎಸ್ ಆರ್ ಸಹಾಯಕ ಆಯುಕ್ತರು ಕುಂದಾಪುರ, ಶ್ರೀ ಗಣಪತಿ ಕೆ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಡಾ| ಎ ಪಿ ಭಟ್ ಖಗೋಳ ಭೌತಶಾಸ್ತ್ರಜ್ಞರು ಮತ್ತು ಆಡಳಿತಾಧಿಕಾರಿ ಪೂರ್ಣ ಪ್ರಜ್ಞ ಕಾಲೇಜು ಉಡುಪಿ, ಪ್ರೊ| ಎ ರಾಜಾ ಖ್ಯಾತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು ಆದರ್ಶ ಆಸ್ಪತ್ರೆ ಉಡುಪಿ, ಶ್ರೀ ಅಶೋಕ್ ಕಾಮತ್ ಶಿಕ್ಷಣ ತಜ್ಞರು ಉಡುಪಿ, ಶ್ರೀಮತಿ ವಿಮಲಾ ಚಂದ್ರಶೇಖರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದರ್ಶ ಆಸ್ಪತ್ರೆ ಉಡುಪಿ, ಉಪಸ್ಥಿತರಿದ್ದರು.
ಶಿಕ್ಷಕರು ಹಾಗೂ ಕುಟುಂಬ ವರ್ಗದವರಿಗೆ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದ ಕೊಬ್ಬಿನಾಂಶ, ರಕ್ತದ ಸಕ್ಕರೆ ಅಂಶ, ಇಸಿಜಿ, ಹೃದಯದ ಸ್ಕಾö್ಯನಿಂಗ್ ಹಾಗೂ
ಟಿಎಂಟಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗಿತ್ತು. ಸರಿಸುಮಾರು ೩೦೦ ಜನ ಶಿಕ್ಷಕರು ಹಾಗೂ ಕುಟುಂಬವರ್ಗದವರು ಉಚಿತ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದರು.
ಎಲ್ಲಾ ಶಿಕ್ಷಕರು ಹಾಗೂ ಕುಟುಂಬವರ್ಗದವರಿಗೆ ಉಚಿತ ಊಟದ ವ್ಯವಸ್ಥೆಯನ್ನು
ಮಾಡಲಾಗಿತ್ತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ ಎಸ್ ಚಂದ್ರಶೇಖರ್ ಪ್ರಸ್ತಾವಿಕ ಭಾಷಣವನ್ನು ಮಾಡಿ ಅತಿಥಿಗಳನ್ನು ಸ್ವಾಗತಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶ್ರೀಮತಿ ಅನುಶ್ರೀ ಭಟ್ ವಂದನಾರ್ಪಣೆ ಗೈದರು ಹಾಗೂ ಶ್ರೀ
ಪ್ರಶಾಂತ್ ಶೆಟ್ಟಿ ಹಾವಂಜೆ ಕರ‍್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply