Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

  ಶ್ರೀ ಪುತ್ತಿಗೆ ಶ್ರೀಗಳು ಓದಿದ ಶಾಲೆಗೆ ಕರ್ನಾಟಕ ಬ್ಯಾಂಕಿನಿಂದ ಐದು ಲಕ್ಷ ದೇಣಿಗೆ   

ಕರ್ನಾಟಕ ಬ್ಯಾಂಕ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅಡಿಯಲ್ಲಿ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟ, ಹಾಗು​ ​ಶ್ರೀಗಳು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ 128 ವರ್ಷ ಹಳೆಯದಾದ ಕನ್ನಡ ಮಾಧ್ಯಮದ ಎಲ್ಲೂರಿನ ಕೆಮುಂಡೇಲು ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ರುಪಾಯಿ 5,00,000-೦೦ ಮಂಜೂರು ಮಾಡಲಾಗಿದೆ.  
ಈ ಬಗ್ಗೆ ಅಧಿಕೃತ ಪತ್ರವನ್ನು  ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚಾತುರ್ಮಾಸ್ಯದ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಶ್ರೀ ಗೋಪಾಲಕೃಷ್ಣ ಸಾಮಗರು ಹಸ್ತಾಂತರಿಸಿದರು.  ಈ ಸಂದರ್ಭದಲ್ಲಿ ವಲಯ ಕಚೇರಿಯ ಮುಖ್ಯ ಪ್ರಬಂಧಕರಾದ ಶ್ರೀ ವಾದಿರಾಜ ಕೆ., ಚಕ್ರಪಾಣಿ ವಿವಿ ಹಾಗೂ ಉಡುಪಿ ರಥಬೀದಿ ಶಾಖಾ ಪ್ರಬಂಧಕ ಮುರಳಿದರ ಐತಾಳ್ ಉಪಸ್ಥಿತರಿದ್ದರು
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!