ಉಡುಪಿ ಜಿಲ್ಲೆಯ 77 ಗ್ರಾಮಗಳು ಬಹುತೇಕ ನೀರುಪಾಲು

  • ಉಡುಪಿ: ಧಾರಾಕಾರವಾಗಿ ಸುರಿದ ಮಳೆಗೆ ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳ 77 ಗ್ರಾಮಗಳು ಅಕ್ಷರಶಃ ಜಲಾವೃತವಾಗಿದೆ. ಈ ಗ್ರಾಮಗಳಲ್ಲಿನ 785 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರ ಮಾಡಿದ್ದು, 1107 ಮನೆಗಳಿಗೆ ಹಾನಿಯುಂಟಾಗಿದೆ. ಸದ್ಯ ಜಿಲ್ಲೆಯಲ್ಲಿ 31ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ 1201 ಜನರಿಗೆ ತಾತ್ಕಾಲಿಕ ನೆಲೆ ಒದಗಿಸಲಾಗಿದೆ.
  • ನಿರಂತರ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗಿದೆ. ಉಡುಪಿ, ಕಾಪು, ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕಿನ ನದಿ ತೀರದ ಗ್ರಾಮಗಳ ಹಲವು ತಗ್ಗುಪ್ರದೇಶಗಳು ನೀರು ಪಾಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2874 ಜನರನ್ನು ಅಪಾಯದಂಚಿನಿಂದ ರಕ್ಷಿಸಲಾಗಿದೆ. ಉಡುಪಿ ಜಿಲ್ಲೆಯ 25 ಗ್ರಾಮಗಳು ಜಲಾವೃತವಾಗಿದ್ದು, 469 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 1406 ಜನರ ರಕ್ಷಣೆ ಮಾಡಲಾಗಿದೆ.
  • ಒಟ್ಟು 518 ಮನೆಗಳಿಗೆ ಹಾನಿ ಸಂಭವಿಸಿದ್ದು, 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 952 ಮಂದಿ ಇಲ್ಲಿ ಸಹಾಯ ಪಡೆಯುತ್ತಿದ್ದಾರೆ. ಕಾರ್ಕಳ ತಾಲೂಕಿನಲ್ಲೂ ನಾಲ್ಕು ಗ್ರಾಮಗಳು ಜಲಾವೃತವಾಗಿ, 23 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಒಟ್ಟು 85 ಜನರನ್ನು ರಕ್ಷಣೆ ಮಾಡಿದರೆ, ಎರಡು ಕಾಳಜಿ ಕೇಂದ್ರತೆರೆದು ಅಲ್ಲಿ 78 ಜನರಿಗೆ ನೆರವು ಒದಗಿಸಲಾಗುತ್ತಿದೆ. ತಾಲೂಕಿನ 68 ಮನೆಗಳಿಗೆ ಹಾನಿಯಾಗಿದ್ದು ಬ್ರಹ್ಮಾವರ ತಾಲೂಕಿನ 18 ಗ್ರಾಮಗಳು ಜಲಾವೃತ ಗೊಂಡಿವೆ.
  • ಇಲ್ಲಿನ 223 ಮಂದಿಯನ್ನು ರಕ್ಷಿಸಲಾಗಿದ್ದು ಇವರಲ್ಲಿ 78 ಮಂದಿಗೆ ಮೂರು ತಾತ್ಕಾಲಿಕ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ತಾಲೂಕಿನಲ್ಲಿ ಹಾನಿ ಸಂಭವಿಸಿದ ಮನೆಗಳು 145.  ಕಾಪುತಾಲೂಕಿನ 30 ಗ್ರಾಮಗಳು ಜಲಾವೃತವಾಗಿವೆ. ಈ ಗ್ರಾಮಗಳಲ್ಲಿ ನೆರೆಗೆ ಸಿಲುಕಿದ 293 ಕುಟುಂಬಗಳನ್ನು ಅಪಾಯದಿಂದ ರಕ್ಷಣೆ ಮಾಡಲಾಗಿದೆ. ಒಟ್ಟು 1160 ಜನರನ್ನು ಸ್ಥಳಾಂತರ ಮಾಡಿದ್ದು, 12 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ 93 ಮಂದಿ ಸಹಾಯ ಪಡೆಯುತ್ತಿದ್ದಾರೆ. ಕಾಪು ತಾಲೂಕಿನಲ್ಲಿ 376 ಮನೆಗಳಿಗೆ ಹಾನಿಯಾಗಿದೆ.
  • ಚಿತ್ರ_ ನಾಗಭೂಷಣ್ ಬೇಳೂರು

Leave a Reply