ಉಡುಪಿಯಲ್ಲಿ ಸಿಐಟಿಯು ನಿಂದ ಸ್ವಾತಂತ್ರ್ಯ ದ ಅಮ್ರತ ಮಹೋತ್ಸವ

ಉಡುಪಿ: ಆಗಸ್ಟ್ 14: ಸ್ವಾತಂತ್ರ್ಯದ ಅಮ್ರತ ಮಹೋತ್ಸವ ಕಾರ್ಯಕ್ರಮ ಇಂದು ಉಡುಪಿಯ ಬಸ್ಸು ನಿಲ್ದಾಣದ ಬಳಿ ಅರ್ಧ ರಾತ್ರಿ ವರೆಗೆ ಜಾಗರಣೆ ನಡೆಸಿ 12 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನಡೆಯಿತು.

ಸ್ವಾತಂತ್ರ್ಯ ರಕ್ಷಣೆಗಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ: ಬಿಜೆಪಿ ಪಕ್ಷದ ಮುಖಂಡರು, ಮಂತ್ರಿಗಳು ಈ ಹಿಂದೆ ದೇಶದ ಸ್ವಾತಂತ್ರ್ಯ ಗಳಿಸಿದ್ದು 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನ, ಕಾಶ್ಮೀರದ 370ನೇ ವಿಧಿ ರದ್ದಾದ ದಿನ,ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ದಿನ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದು ಹೇಳಿದವರು ಇಂದು ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿರುವುದು ಬಿಜೆಪಿ ಆರ್ ಎ‌ಸ್ ಎಸ್ ನ ಇಬ್ಬಗೆಯ ನೀತಿ ತೋರಿಸುತ್ತಿದೆ ಎಂದು ಹೇಳಿದರು.

1921 ರಲ್ಲಿ ಕಾರ್ಮಿಕ ಚಳುವಳಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಲೇ ಪಾಳೆಗಾರರು ಭೂಮಾಲಿಕರ ವಿರುದ್ದ ಹೋರಾಟ ಮಾಡಿದರು 1929 ರಲ್ಲಿ ಸಂಪೂರ್ಣ ಸ್ವರಾಜ್ ಗಾಗಿ ಮೊದಲು ಬೇಡಿಕೆ ಇಟ್ಟವರು ಎಂಬುವುದೇ ಹೆಮ್ಮೆ ಎಂದು ಹೇಳಿದರು.
ಸಾವಿರಾರು ಹ ಭಾಷೆ, ಸಾವಿರಾರು ಜಾತಿಗಳು, ವಿವಿಧ ಧರ್ಮಗಳ ಭಾರತ ಸೌಹಾರ್ದತೆ ಉಳಿ‌ಸಿಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ ಆಚರಣೆ ಎಂದರು.
ಕೆ.ಶಂಕರ್ ಉದ್ಘಾಟಿಸಿ ಮಾತನಾಡಿ; ಕಾರ್ಮಿಕರಿಗೆ ಕನಿಷ್ಠ ಕೂಲಿ ,ಉದ್ಯೋಗ, ಆರೋಗ್ಯ,ಶಿಕ್ಷಣ, ಸಾಮಾಜಿಕ ನ್ಯಾಯ ಕೊಡದೇ ಇರುವುದು ಸ್ವಾತಂತ್ರ್ಯಕ್ಕೆ ಯಾವ ಅರ್ಥವೂ ಇಲ್ಲ ಅದಕ್ಕಾಗಿ ಕಾರ್ಮಿಕ ವರ್ಗ ನಿರಂತರ ಹೋರಾಟ ಮಾಡುತ್ತದೆ.ಸ್ವಾತಂತ್ರ್ಯ ಹೋರಾಟಗಾರರ ಕನಸು ಈಡೇರಿಸಲು ಸಿಐಟಿಯು ಬದ್ದವಾಗಿದೆ ಎಂದು ಹೇಳಿದರು.
ಬಾಲಕೃಷ್ಣ ಶೆಟ್ಟಿ, ಎಚ್ ನರಸಿಂಹ, ಶಶಿಧರ ಗೊಲ್ಲ, ಶೇಖರ ಬಂಗೇರ,ಮಹಾಬಲ ವಡೇರಹೋಬಳಿ,ಬಲ್ಕೀಸ್,ದಯಾನಂದ ಕೋಟ್ಯಾನ್,ರಾಮ ಕಾರ್ಕಡ, ಕವಿರಾಜ್ ಮುಂತಾದವರು ಮಾತನಾಡಿದರು.

 
 
 
 
 
 
 
 
 
 
 

Leave a Reply