ಆಕಾಶದಲ್ಲಿ ನಮ್ಮ ವಿಜ್ಞಾನಿಗಳ ಅದ್ಭುತ ಪ್ರಯೋಗಗಳು

ನಮ್ಮ  ಭಾರತದ ಹೆಮ್ಮೆಯ ಚಂದ್ರಯಾನ 3 ರ ಉಡ್ಡಯನೆ, ಜುಲೈ 14 ರಂದಾಗಿತ್ತು.  ರಾಕೇಟಿನಿಂದ ಬೇಕಾದ ಎತ್ತರಕ್ಕೆ ಚಿಮ್ನಿದ ನಮ್ಮ ರೋವರ್ ಭೂಮಿಯಿಂದ ಸುಮಾರು 170 ಕಿಮೀ ಎತ್ತರದಲ್ಲಿ ದೀರ್ಘವೃತ್ತಾಕಾರದ 170 x 36,500 ಕಿಮೀ ಕಕ್ಷೆಯಲ್ಲಿ ಭೂ ಪ್ರದಕ್ಷಿಣೆ ಅಂದೇ ಆರಂಭಿಸಿತು. ಅದರ ಸುತ್ತುವಿಕೆಯ ಕಕ್ಷೆ ವೃದ್ಧಿಯನ್ನು ನಮ್ಮ ವಿಜ್ಞಾನಿಗಳು ಹೆಚ್ಚಿಸುತ್ತಾ ಹೋದರು. 
ಜುಲೈ 15 ರಂದು 173 x 41,762 ಕಿಮೀಗೆ , 
ಜುಲೈ 17 ರಂದು 226 x 41,603 ಕಿಮೀ, 
ಜುಲೈ 18 ರಂದು 228 x 51,400 ಕಿಮೀ, 
ಜುಲೈ 20 ರಂದು 233 x 71,351 ಕಿಮೀ, 
ಜುಲೈ 25 ರಂದು  236 x 1,27,603 ಕಿಮೀ ಗಳಿಗೆ ಎರಿಸುತ್ತಾ ಭೂ ಪ್ರದಕ್ಷಿಣೆ ಮಾಡಿಸಿದರು.
 ನಂತರ ಆಗಸ್ಟ್  1 ರಂದು  288 x 3,69,328 ಕಿಮೀ ಗೆ ದೂಡಿದ್ದರು. 
ಅಂದು ಸೂಪರ್ ಮೂನ್. ಆ ದಿನ ಚಂದ್ರ ಭೂಮಿಯಿಂದ  3,57,700 ಕಿಮೀ ದೂರದಲ್ಲಿತ್ತು.  ಅದು ಭೂಮಿಗೆ ಸರಾಸರಿ ದೂರಕ್ಕಿಂತ ಸುಮಾರು 27 ಸಾವಿರ ಕಿಮೀ ಹತ್ತಿರ. 
ಇಲ್ಲಿಯವರೆಗೂ ಭೂ ಗುರುತ್ವದಲ್ಲೇ ತಿರುಗುತ್ತಿದ್ದ ನಮ್ಮ ರೋವರ್ 
ಆಗಸ್ಟ್ 1 ರಂದು ಈ ರೊವರ್ ನ್ನು ಚಂದ್ರನಲ್ಲಿಗೆ  ಒಡ್ಡುವ ಪ್ರಕ್ರಿಯೆ ನಡೆಯಿತು.
ಆಗಸ್ಟ್ 5ರಂದು  ನಿನ್ನೆ ಚಂದ್ರ  3,65,945 ಕಿಮೀ ದೂರದಲ್ಲಿದ್ದಾಗ ಸಂಜೆ 7:30 ಕ್ಕೆ ನಮ್ಮ ರೋವರ್  ಚಂದ್ರನ ಸಮೀಪ ಬರುತ್ತಿತ್ತು.ಆಗ ಮತ್ತೊಂದು ಪ್ರಯೋಗ ಮಾಡಿ ಈ ರೋವರ್ ನ್ನು ಚಂದ್ರನ ಗುರುತ್ವ ಕಕ್ಷೆಗೆ ದೂಡಿದರು. ಈ ಸಾಹಸಮಯ ಪ್ರಯೋಗ ನಿನ್ನೆ ಸಂಜೆ ಮುಗಿಯಿತು. ಇಲ್ಲಿಂದ ಇನ್ನೂ ಕ್ಲಿಷ್ಟ ಕ್ರಿಯೆಗಳು.
ಇನ್ನು ಕೆಲ ದಿನಗಳು ಚಂದ್ರನ ಸುತ್ತ ದೀರ್ಘವೃತ್ತಾಕಾರದ ನಮ್ಮ ರೋವರ್ ನ ಪಥ. ಅದರ ಪೆರಿಜಿ ( ದೂರದ ದೂರ ) ವನ್ನು ಕಡಿಮೆ ಕಡಿಮೆ ಮಾಡುತ್ತಾ 
ರೋವರ್ ಚಂದ್ರನಿಗೆ ದೀರ್ಘವೃತ್ತ ಪ್ರದಕ್ಷಿಣೆಗಳನ್ನು ಮುಗಿಸಿ ಕೊನೇಗೆ ವೃತ್ತಾಕಾರದ ಪ್ರದಕ್ಷಿಣೆ ಬರಲಿದೆ.  
ಆಗಸ್ಟ್ 17 ರಂದು ರೋವರ್ ನಿಂದ ಲ್ಯಾಂಡರ್ ಬೇರ್ಪಡಲಿದೆ.
ನಂತರ ಲ್ಯಾಂಡರ್ ನ್ನು ಇಳಿಸುವ ಅತೀ ಕ್ಲಿಷ್ಟಕರ ಪ್ರಯೋಗ ಆಗಸ್ಟ್ 23 ರಂದು ಸಂಜೆ 5:30 ಕ್ಕೆ ಅಂತ ಇದೀಗ ನಿರ್ಧರಿಸಿದ್ದಾರೆ. ಚಂದ್ರನ ಮೇಲೆ ನಮ್ಮ ಲ್ಯಾಂಡರ್ ಇಳಿಸುವಕೆ.
ಈ ಎಲ್ಲಾ ಪ್ರಯೋಗಗಳು ಸಫಲವಾದರೆ ನಂತರ ಆ ಲ್ಯಾಂಡರ್ನಲ್ಲಿ ಅಡಗಿ ಕುಳಿತ ನಮ್ಮ  ಮುದ್ದು ಪ್ರಜ್ಞಾನ ಮುಂದಿನ 14 ದಿನಗಳು ಚಂದ್ರನ ಮೇಲೆ ಓಡಾಡಿ ಪ್ರಯೋಗಗಳನ್ನು ಮಾಡಲಿದೆ. 
 ನಮ್ಮ ಇಸ್ರೋ ವಿಜ್ನಾನಿಗಳ ಈ ನಿರಂತರ ಕ್ಲಿಷ್ಟ ಪ್ರಯೋಗಗಳು 
ಸಫಲವಾಗಲೆಂದು ಶುಭ ಹಾರೈಕೆಗಳು.
ಡಾ ಎ. ಪಿ . ಭಟ್ ಉಡುಪಿ.
 
 
 
 
 
 
 
 
 
 
 

Leave a Reply