ಜೇ ಸಿ ಐ ಮಣಿಪಾಲ ಹಿಲ್ ಸಿಟಿಯ ವತಿಯಿಂದ “ಯುವ ಸಬಲೀಕರಣ” ಕಾರ್ಯಕ್ರಮ

ಜೇ ಸಿ ಐ ಮಣಿಪಾಲ ಹಿಲ್ ಸಿಟಿ ಯ ವತಿಯಿಂದ “ಯುವ ಸಬಲೀಕರಣ” ಕಾರ್ಯಕ್ರಮದ ಮುಖೇನ ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ದಿನಾಂಕ 05-08-2023 ರಂದು ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕಾಂತರಾಜ್ ಎ.ಎನ್., ಸಂಪನ್ಮೂಲ ವ್ಯಕ್ತಿಯಾಗಿ ಜೇ.ಸಿ.ಐ. ಸೆನೆಟರ್ ಸುಭಾಷ್ ಬಂಗೇರ, ಐಕಾನಿಕ್ ತರಬೇತುದಾರರು, ಜೇಸಿಐ ಭಾರತ, ಹಾಗು ಸಭೆಯ ಅಧ್ಯಕ್ಷತೆಯನ್ನು ಜೇಸಿಐ ಮಣಿಪಾಲ ಹಿಲ್ ಸಿಟಿಯ  ಅಧ್ಯಕ್ಷ ಜೇಸಿ. ಜಯಂತ ತಲವಾರ್ ಇವರು ವಹಿಸಿದ್ದರು. ಜೊತೆಗೆ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಹಾಗೂ ಜೇ.ಸಿ.ಐ. ನ ಕಾರ್ಯದರ್ಶಿ ಜೇಸಿ. ಸುನೀಲ್ ಕುಮಾರ ಮತ್ತೂ ಯೋಜನಾ ನಿರ್ದೇಶಕ ಜೇಸಿ. ಸಂದೀಪ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಸಂವಹನ ಕಲೆ, ಭಾವನಾತ್ಮಕ ಬುದ್ದಿವಂತಿಕೆ,  ಕೌಶಲ್ಯ, ಮೊದಲಾದ ವಿಷಯಗಳಲ್ಲಿ ಐದು ಗಂಟೆಗಳ ತರಬೇತಿಯನ್ನು ನೀಡಿ  ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ವಿಷಯವನ್ನು ಮನದಟ್ಟು  ಮಾಡಲಾಯಿತು. ವಯಕ್ತಿಕ ಮತ್ತೂ ಕಾಲೇಜಿನ ಕಲಿಕೆಯ ಜೀವನದಲ್ಲಿ ಸಂಹನದ ಪ್ರಾಮುಖ್ಯತೆ, ತಾಳ್ಮೆ, ಜೀವನದ ಗುರಿ ನಿರ್ಧರಣೆ, ನಾವು ಪ್ರತಿ ದಿನ ಎದುರಿಸುವ ಸಂದರ್ಭಗಳ ನಿರ್ವಹಣೆ ಗೆ ಇರಬೇಕಾದ ಭಾವನಾತ್ಮಕ ಬುದ್ದಿವಂತಿಕೆ, ಹೊಸ-ಹೊಸ ವಿಷಯಗಳನ್ನು ಗಮನಿಸುವುದು, ಸ್ರಷ್ಟಿಸುವುದು ಮತ್ತು ಪ್ರತಿ ವಿಷಯದಲ್ಲಿ ಹೊಸತನವನ್ನು ಹೇಗೆ ಕಾಣಬಹುದು ಎಂದು ವಿವರಿಸಲಾಯಿತು.  
 ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಕಿಶನ್ ಸದಾಶಿವ ರವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. ತರಬೇತಿಯ ಕೊನೆಯಲ್ಲಿ ವಿದ್ಯಾರ್ಥಿಗಳು ತರಬೇತಿಯ ಬಗ್ಗೆ ಅವರ ಅನುಭವದ ನುಡಿಯನ್ನು ತಿಳಿಸಿ ಹರ್ಷ ವ್ಯಕ್ತ ಪಡಿಸಿದರು.
 
 
 
 
 
 
 
 
 
 
 

Leave a Reply