ಫ್ಯಾಷನ್ ತಾರೆ, ಡಾಕ್ಟರೇಟ್ ಪುರಸ್ಕೃತ ವಿದ್ಯಾ ಸರಸ್ವತಿ ಉಡುಪಿ

ಫ್ಯಾಶನ್ ಜಗತ್ತಿನಲ್ಲಿ ತನ್ನ ಅಪೂರ್ವ ಪ್ರತಿಭಾ ಕೌಶಲದ ಮೂಲಕ ನಾಡಿನಾದ್ಯಂತ ಹೆಸರುಗಳಿಸಿರುವ ಶ್ರೀಮತಿ ವಿದ್ಯಾ ಸರಸ್ವತಿ ಉಡುಪಿ ನಮ್ಮವರು, ಅದರಲ್ಲೂ ನಮ್ಮ‌ ತುಳುನಾಡಿನ ಸಾಧಕಿ ಎನ್ನಲು ತುಂಬಾ ಹೆಮ್ಮೆ ಎನಿಸುತ್ತದೆ. ಫ್ಯಾಷನ್ ತಾರೆಯಾಗಿ, ಸಿನೆಮಾ ನಟಿಯಾಗಿ,ನಿರೂಪಕಿಯಾಗಿ, ಇವೆಂಟ್ ಡಿಸೈನರ್ ,ಫ್ಯಾಷನ್ ಕ್ರಿಯೇಟರ್ , ರೂಪದರ್ಶಿಯಾಗಿ, ಜ್ಯವೆಲ್,ಸ್ಯಾರಿ ಬ್ರಾಂಡ್ ಅಂಬಾಸಿಡರ್ ಆಗಿ, ಸಮಾಜ ಸೇವಕಿಯಾಗಿ ಹತ್ತು ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇವರ ಸಾಧನೆಗೆ ಡಾಕ್ಟರೇಟ್ ಪದವಿ ಒಲಿದು ಬಂದಿರುವುದು ಸಂತೋಷದ ಸಂಗತಿ. ಓರ್ವ ಸಂಪ್ರದಾಯ ಬದ್ಧ ಗೃಹಿಣಿಯಾಗಿ ಕ್ಯೂಟೆಸ್ಟ್ ಮೊಮ್ ಆಫ್ ದ ಇಯರ್ -2022 ಪ್ರಶಸ್ತಿ ಗೆದ್ದಿದ್ದಾರೆ. ತನ್ನ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ವಿದ್ಯಾ ಸರಸ್ವತಿ ಮೇಡಮ್ ಇವರು ಈ ಸಾಲಿನ ಉಮನ್ ಆಫ್ ದ ಇಯರ್ ಪ್ರಶಸ್ತಿ ವಿಜೇತರು. ಇವರ ಸಾಧನಾ ಕ್ಷೇತ್ರದ ಪ್ರಶಸ್ತಿಯ ಪಟ್ಟಿ ದಿನೇವದಿನೇ ಬೆಳೆಯುತ್ತಲೇ ಹೋಗುತ್ತದೆ. ಜ್ಯೂರಿ ಕರಾವಳಿ ಬೆಡಗಿ ಆಫ್ ಡಾಜ್ಲಿಂಗ್ ಮಿಸ್ & ಮಿಸೆಸ್ ಇಂಡಿಯಾ ಪ್ರಶಸ್ತಿ- 2023, ನ್ಯಾಷನಲ್ ವುಮೆನ್ಸ್ ಐಕಾನ್ ಪ್ರಶಸ್ತಿ- 2023, ಮಿಸೆಸ್ ಇಂಡಿಯಾ ಕರ್ನಾಟಕ -2022 ಜಡ್ಜ್, ಪ್ರೈಡ್ ಆಫ್ ನಮ್ಮ ಬೆಂಗಳೂರು ಪ್ರಶಸ್ತಿ-2021, ಕ್ಲಾಸಿಕ್ ಮಿಸೆಸ್ ಕರ್ನಾಟಕ ಪ್ರಶಸ್ತಿ -2021, ವಾರಿಯರ್ ಕ್ವೀನ್ ಆಫ್ ಮಿಸೆಸ್ ಇಂಡಿಯಾ ಕರ್ನಾಟಕ-2021, ಬೆಸ್ಟ್ ಕಪಲ್ ಸ್ಮೈಲ್ ಆಫ್ ಮಿಸೆಸ್ ಇಂಡಿಯಾ – 2020, ಎವರ್ ಗ್ರೀನ್ ಇಂಡಿಯಾ ಆಫ್ ವರ್ಚುವಲ್ ಕ್ವೀನ್ ಆಫ್ ಮಿಸೆಸ್ ಇಂಡಿಯಾ ಕರ್ನಾಟಕ ಪ್ರಶಸ್ತಿ-2020 ಸೇರಿದಂತೆ ಇನ್ನೂ ಹಲವರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಜೊತೆಗೆ ಕಳೆದ ಕೆಲವು ವರ್ಷಗಳಿಂದ ಉಡುಪಿ ಸೀರೆ ಉಟ್ಟು ತುಳುನಾಡಿನ ರೈತ ಮಹಿಳೆಯ ಉಡುಗೆ ತೊಡುಗೆ ತೊಟ್ಟು ಸ್ವತಃ ರೂಪದರ್ಶಿ ಯಾಗಿ ಮಿಂಚಿ , ವಿಶೇಷವಾದ ಆಕರ್ಷಕ ಕ್ಯಾಲೆಂಡರ್ ತಯಾರಿಸಿ ಹಂಚಿ ಉಡುಪಿ ಸೀರೆಯನ್ನು ದೇಶಾದ್ಯಂತ ಪ್ರಚಾರ ಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಳಿವಿನಂಚಿನಲ್ಲಿರುವ ಕೈಮಗ್ಗದ ಉದ್ಯಮ, ಉಡುಪಿ ಸೀರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಫ್ಯಾಷನ್ ಆಕ್ಟಿವಿಟಿ ಜೊತೆಗೆ ಸಮಾಜದ ದೀನದಲಿತರ ಬಗ್ಗೆ ಅಪಾರ ಕಾಳಜಿ,ತುಳುನಾಡಿನ ಕಲೆ, ಸಂಸ್ಕೃತಿಗಳ ಬಗ್ಗೆ ಅಪಾರ ಒಲವನ್ನು ಹೊಂದಿರುವ ಇವರು ಮಹಿಳೆಯರು ಸಬಲರು, ಸಮಾನರು ಎನ್ನುವ ಪರಿಕಲ್ಪನೆಯೊಂದಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಉಡುಪಿ ತುಳುಕೂಟದ ಸಕ್ರಿಯ ಸದಸ್ಯೆಯಾಗಿ,ಉಪಾಧ್ಯಕ್ಷೆಯಾಗಿ, ಸಂಚಾಲಕಿಯಾಗಿ,ಮಾಧವ ಪೈ ಕಾಲೇಜಿನ ಪಿಟಿಎ ಅಧ್ಯಕ್ಷ ರಾಗಿ ಉನ್ನತ ಜವಾಬ್ದಾರಿ ನಿರ್ವಹಿಸಿರುವ ವಿದ್ಯಾಸರಸ್ವತಿ ಅವರು ಸಮಾಜದ ಗೃಹಿಣಿಯರಿಗೆ,ಮಹಿಳಾ ಸಾಧಕರಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಇವರ ಬಹುಮುಖ ವ್ಯಕ್ತಿತ್ವ, ಸಾಧನಾಶೀಲ ಚಟುವಟಿಕೆಗಳು ಪಾದರಸದಂತೆ ನಿತ್ಯ ನಿರಂತರವಾಗಿ ಮಿನುಗುವಂತಾಗಲಿ. ಇವರಿಗೆ ಸದಾ ಉಡುಪಿ ಶ್ರೀ ಕೃಷ್ಣಮುಖ್ಯಪ್ರಾಣನ ದಯೆಯಿರಲಿ ಎಂಬ ಸದಾಶಯ ನಮ್ಮದು.

 
 
 
 
 
 
 
 
 
 
 

Leave a Reply