ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಲುವಾಗಿ ಧ್ವಜಾರೋಹಣ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. 

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಈ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ಅವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ಅವರ ವಿಚಾರಗಳನ್ನು ಜೀವಂತವಾಗಿಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಭಾರತದ ಅಗಾಧ ಸಂಪತ್ತಿನ ಮೇಲಿನ ವ್ಯಾಮೋಹದಿಂದ ವಿದೇಶಿ ಆಕ್ರಮಣಕಾರರು ಭಾರತದ ಮೇಲೆ ದಾಳಿಯಿಟ್ಟು ಲೂಟಿ ಮಾಡಿದರೂ ಎಂದಿಗೂ ಬರಿದಾಗದಂತಹ ಸಂಪತ್ತು ಭಾರತದ ಒಡಲಿನಲ್ಲಿದೆ. ಭಾರತದ ಮೇಲೆ ದಾಳಿ ಮಾಡಿದ ಬ್ರಿಟೀಷರು ಸಂಪತ್ತನ್ನು ಮಾತ್ರವಲ್ಲದೆ ಇಲ್ಲಿನ ಪರಂಪರೆ, ಆಚಾರ, ವಿಚಾರಗಳ ಮೇಲೆ ತಮ್ಮ ಕರಿಛಾಯೆ ಬೀರಿದ್ದರು. ಈ ದೇಶದ ಕ್ರಾಂತಿವೀರರ ತ್ಯಾಗ ಬಲಿದಾನದಿಂದಾಗಿ ಭಾರತವು ಗುಲಾಮಗಿರಿಯಿಂದ ಮುಕ್ತಿ ಪಡೆಯಿತು ಎಂದರು‌.

ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್, ಪ್ರಮುಖ ಮೋನಪ್ಪ ಭಂಡಾರಿ, ಪ್ರಭಾಮಾಲಿನಿ, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ರವಿಶಂಕರ ಮಿಜಾರ್, ನಿತಿನ್ ಕುಮಾರ್, ವಿಜಯ ಕುಮಾರ್ ಶೆಟ್ಟಿ, ರೂಪ ಬಂಗೇರ, ಸತೀಶ್ ಪ್ರಭು, ರಾಧಾಕೃಷ್ಣ, ಪೂಜಾ ಪೈ,ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply