ಹಡಿಲು ಭೂಮಿ ಕೃಷಿ ಕಟಾವು ಕಾರ್ಯವನ್ನು ವೀಕ್ಷಿಸಿದ ಶಾಸಕ ರಘುಪತಿ ಭಟ್.

ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಹಡಿಲು ಭೂಮಿ ಕೃಷಿ ಅಂದೋಲನದಡಿ ಉಡುಪಿಯಲ್ಲಿ ಸುಮಾರು 1500 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದ್ದು, ಬೆಳೆಯ ಕಟಾವು ಕಾರ್ಯ ಆರಂಭಗೊಂಡಿರುತ್ತದೆ.

ಶುಕ್ರವಾರ  ಕಡೆಕಾರ್ ಗ್ರಾಮದ ಕುತ್ಪಾಡಿ ಕೋಟಿ ಚೆನ್ನಯ ರಸ್ತೆ ಬಳಿ ಗದ್ದೆಯ ಬೆಳೆಯ ಕಟಾವು ಕಾರ್ಯವನ್ನು ಶಾಸಕ ಕೆ ರಘುಪತಿ ಭಟ್ ರವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಉಡುಪಿ ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರಾದ ವಿನೋದಿನಿ, ಸವಿತಾ, ಅಂಬಲಪಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಳಾದ ಉಮೇಶ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬ್ಬಾರ್ ಹಾಗೂ ಸ್ಥಳೀಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply