ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಂಗಳೂರು ವಲಯ ಆಯೋಜನೆಯ “mini expo 2021”

ಸೈಂಟ್ ಸೆಬಾಸ್ಟಿಯನ್ ಮಿನಿ ಹಾಲ್ ಮಂಗಳೂರು ಇಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಂಗಳೂರು  ವಲಯ ಹಾಗೂ ಮಹಾವೀರ ಏಜೆನ್ಸಿ ಇದರ ಸಾರತ್ಯದಲ್ಲಿ ನಿಖಿತಾ ಡಿಸ್ಟ್ರಿಬ್ಯೂಟರ್ಸ್ ಆಯೋಜನೆಯಲ್ಲಿ “mini expo 2021” ಎಂಬ ಪರಿಕಲ್ಪನೆಯ ಒಂದೇ ಸೂರಿನಡಿ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಬಳಸುವ ಪರಿಕರಗಳ ಪ್ರದರ್ಶನ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಮಾಹಿತಿ ಕಾರ್ಯಕ್ರಮವು  ನೆರವೇರಿತು.
ಕಾರ್ಯಕ್ರಮವನ್ನು ಮಂಗಳೂರು ವಲಯದ ಅಧ್ಯಕ್ಷರಾದ ಶ್ರೀ ಸುಧಾಕರ ಶೋಕೆಸ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಹಾವೀರ್ ಏಜೆನ್ಸಿಯ ಮಾಲಕ ರಾದ ಶ್ರಿ ಸುಧಾಕರ್ ಶೆನಯ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹರೀಶ್ ಆಡ್ಯಾರ್,  ಜಿಲ್ಲಾ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್,  ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಮಧು ಮಂಗಳೂರು, ಮಾಜಿ ಜಿಲ್ಲಾಧ್ಯಕ್ಷರುಗಳಾದ ಶ್ರೀ ಜಗನ್ನಾಥ ಶೆಟ್ಟಿ ಮತ್ತು ಶ್ರೀ ಕರುಣಾಕರ ಕಾನಂಗಿ, ವಲಯದ ಪ್ರದಾನ ಕಾರ್ಯದರ್ಶಿ ಶ್ರೀ ಅರ್ಜುನ್ ಶೃಂಗೇರಿ ಹಾಗೂ ಗೌರವಾಧ್ಯಕ್ಷರಾದ ಶ್ರೀ ವಸಂತ್ ರಾವ್ ರವರು ಉಪಸ್ಥಿತರಿದ್ದರು. 
ಶ್ರೀಮತಿ ಬಬಿತಾ ಲತಿಶ್  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಭೆಯಲ್ಲಿ ವಿಶೇಷ ಆಕರ್ಷಣೆಯ ಅದೃಷ್ಟ ಗ್ರಾಹಕರನ್ನು ಆರಿಸಲಾಯಿತು. ವಲಯದ ಅಧ್ಯಕ್ಷ ಸುಧಾಕರ ಶೋಕೆಸ್ ಧನ್ಯವಾದವಿತ್ತರು.  
 
 
 
 
 
 
 
 
 
 
 

Leave a Reply