ದಾಂಡಿಯಾ ನೈಟ್ ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ್ ಶೆಟ್ಟಿ

ದುಷ್ಟ ರಾಕ್ಷಸ ರಾಜ ಮಹಿಷಾಸುರನನ್ನು ವಧಿಸಿದ ಜಗನ್ಮಾತೆಯನ್ನು ನವದುರ್ಗೆಯರಾಗಿ ಆರಾಧಿಸುವ ನವರಾತ್ರಿಯು ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಾರುತ್ತದೆ. ನಾವು ಪರರಿಗೆ ಕೆಟ್ಟದನ್ನು ಬಯಸಿದರೆ, ಅದು ನಮಗೆ ಕೆಟ್ಟದನ್ನು ಮಾಡುತ್ತದೆ ಇಂದು ಲಯನ್ಸ್ ಜಿಲ್ಲೆ 317Cಯ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಅವರು ಹೇಳಿದರು.  
ಉಡುಪಿ-ಇಂದ್ರಾಳಿ ಹಾಗೂ ಮುನಿಯಾಲು ಲಯನ್ಸ್ ಮತ್ತು ಲಿಯೋ ಕ್ಲಬ್ ಗಳು ಜಂಟಿಯಾಗಿ ಆಯೋಜಿಸಿದ ದಾಂಡಿಯಾ ನೈಟ್ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಯೋಗಿನಿ ವಿ ಶೆಟ್ಟಿ ಅವರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರಥಮ ಉಪಜಿಲ್ಲಾ ಗವರ್ನರ್ ಕೆಸಿ ವೀರಭದ್ರ, ದ್ವಿತೀಯ ಉಪಜಿಲ್ಲಾ ಗವರ್ನರ್ ನೇರಿ ಕರ್ನೇಲಿಯೋ, ಮಾಜಿ ಜಿಲ್ಲಾ ಗವರ್ನರ್ ಹಾಗೂ ಜಿಲ್ಲಾ ಮಾರ್ಗದರ್ಶಕರು ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಉದಯೋನ್ಮುಖ ಸಿನಿಮಾ ತಾರೆಯರಾದ ನಿರೀಕ್ಷ ಶೆಟ್ಟಿ, ನವ್ಯ ಪೂಜಾರಿ, ರಕ್ಷಾ ಶೆಣೈ ಮತ್ತು ಶಟರ್ ಬಾಕ್ಸ್ ಯೂಟ್ಯೂಬರ್ ಮತ್ತು ಬೈಕರ್ ಸಚಿನ್ ಶೆಟ್ಟಿ ಅವರನ್ನು ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸಲಾಯಿತು.
ಮೂಲತಃ ಗುಜರಾತಿನವರಾಗಿದ್ದು ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ದೀಪ ಮತ್ತು ಸಂಗಡಿಗರಿಂದ ಸಾಂಪ್ರ ದಾಯಿಕ ದಾಂಡಿಯಾ ಕಾರ್ಯಕ್ರಮ ನಡೆಯಿತು. ಲಯನ್ಸ್ ಜಿಲ್ಲೆಯ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ತೃಪ್ತಿ ಎಂ ಶೆಟ್ಟಿ, ಸಂಧ್ಯಾ ಮೋಹನ್, ಸುಮಿಲ ಉಮೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಸಪ್ನಾ ಸುರೇಶ್, ಜಿಲ್ಲಾ ಖಜಾಂಚಿ ಜಯಪ್ರಕಾಶ್ ಭಂಡಾರಿ, ಪಿ ಆರ್ ಒ ಸಿದ್ದರಾಜು, ಪ್ರಾಂತೀಯ ಅಧ್ಯಕ್ಷ ಶಂಕರ್ ಶೆಟ್ಟಿ ಮುನಿಯಾಲು, ವಲಯಾಧ್ಯಕ್ಷ ಹೃಷಿಕೇಶ್ ಹೆಗ್ಡೆ, ಮೋಹನ್ ಎಂಪಿ, ಉಮೇಶ್ ಶೆಟ್ಟಿ ಮುನಿಯಾಲು, ಜಿಲ್ಲಾ ಲಿಯೋ ಅಧ್ಯಕ್ಷ ಜಾಯ್ ಫರ್ನಾಂಡಿಸ್ ಮತ್ತು ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಎಲ್ಲಾ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕರಾದ ಸಂಧ್ಯಾ ಮೋಹನ್ ಸ್ವಾಗತಿಸಿ, ಸುಮಿಲ ಉಮೇಶ್ ಶೆಟ್ಟಿ ವಂದಿಸಿದರು. ರತ್ನಾಕರ್ ಇಂದ್ರಾಳಿ ಮತ್ತು ರೂಪಶ್ರೀ ರತ್ನಾಕರ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 

Leave a Reply