ಗುರುಗಳಿಗೆ ಶರಣಾಗುವುದರಿಂದ ಮಾತ್ರ ಆತ್ಮೋದ್ಧಾರ ಸಾಧ್ಯ : ಅರವಿಂದ ಶರ್ಮ

ದಿನಾಂಕ 03/05/2022 ರಂದು ಶ್ರೀ ಶಾಂಕರತತ್ವ ಪ್ರಚಾರ ಅಭಿಯಾನ ಸಮಿತಿ ಬ್ರಹ್ಮಾವರ ತಾಲೂಕು ಇದರ ಮಾರ್ಗದರ್ಶನದಲ್ಲಿ ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ ( ರಿ) ಬ್ರಹ್ಮಾವರ ತಾಲೂಕು ಇದರ ವತಿಯಿಂದ ಬಾರಕೂರಿನ ಕುಮಾರಸ್ವಾಮಿ ಬಿ. ಆರ್ ಅವರ ” ಓಂ ಶ್ರೀ ” ಮನೆಯಲ್ಲಿ ” ಶಂಕರಜಯಂತಿ ಮಹೋತ್ಸವ ” ವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ ( ರಿ) ಬ್ರಹ್ಮಾವರ ತಾಲೂಕು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ರಾವ್ ಇವರು ವಹಿಸಿದ್ದು, ಉಪನ್ಯಾಸಕರಾಗಿ ಶ್ರೀ ಅರವಿಂದ ಶರ್ಮ ಆಗಮಿಸಿದ್ದು, ಗುರು ಪರಂಪರೆಯ ಮಹತ್ವದ ಬಗ್ಗೆ ಶಂಕರಾಚಾರ್ಯರ ಸಂದೇಶಗಳನ್ನು ಮನವರಿಕೆ ಮಾಡಿಸಿದರು. ಗುರುಗಳಿಗೆ ಶರಣಾಗದೇ ಯಾವ ಶಿಷ್ಯನ ಆತ್ಮೋದ್ಧಾರ ಅಸಾಧ್ಯವೆಂದರು. ಈ ಸಂದರ್ಭದಲ್ಲಿ ಶ್ರೀ ಶಾಂಕರತತ್ವ ಪ್ರಚಾರ ಅಭಿಯಾನ ಸಮಿತಿ ಬ್ರಹ್ಮಾವರ ತಾಲೂಕು ಇದರ ಕಾರ್ಯದರ್ಶಿಯಾದ ಶ್ರೀಮತಿ ಸವಿತಾ ಎರ್ಮಾಳ್, ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ಸಂಚಾಲಕರಾದ ಶ್ರೀ ಶಂಭುಶಂಕರ ರಾವ್ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಪಿ.ಜಯರಾಮ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಶಂಕರಜಯಂತಿ ಪ್ರಯುಕ್ತ ಶ್ರೀ ಜ್ಞಾನಶಕ್ತಿ ಸ್ಥಾನಿಕ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಮತ್ತು ಶಂಕರ ಅಷ್ಟೋತ್ತರ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 
 
 
 
 
 
 
 
 
 
 

Leave a Reply