ಕೊಡವೂರು ಗುರುರಾಜ್ ಐತಾಳ್ ನಿಧನ

ಎಳವೆಯಲ್ಲೇ ವಿವಿಧ ಸಂಘಟನೆಯಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಗುರುರಾಜ ಐತಾಳ್ (59ವ.) ರೊಟರಾಕ್ಟ್, ರೋಟರಿ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು.

ನೃತ್ಯ ನಿಕೇತನ ಉಡುಪಿ ಸಂಸ್ಥೆಯ ಬೆನ್ನೆಲುಬಾಗಿ
ಮನೆಮಂದಿ ಹಾಗು ನೃತ್ಯ ನಿಕೇತನದ ಶಿಷ್ಯರೊಂದಿಗೆ ಆತ್ಮೀಯರಾಗಿ ಸಾಹಿತ್ಯ, ನೃತ್ಯದಂತಹ ಲಲಿತ ಕಲೆಗೆ ಪ್ರೋತ್ಸಾಹಕ ರಾದವರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಯಾಗಿ ವೃತ್ತಿಯಲ್ಲಿ ಜನಾನುರಾಗಿ ಯಾಗಿ ಸರಳ ಸ್ನೇಹಪರ ವ್ಯಕ್ತಿತ್ವದಿಂದ ಕಾರ್ಯ ನಿರ್ವಹಿಸಿದವರು.

ಪ್ರೀತಿಯ ಪತ್ನಿ ಲಕ್ಷ್ಮೀ ಗುರುರಾಜ್, ಅಕ್ಕರೆಯ ಮಗಳು ಮಯೂರಿ ವಾತ್ಸಲ್ಯಮಯೀ ಮನೆಮಂದಿಯೊಂದಿಗೆ ಆತ್ಮೀಯ ಒಡನಾಡಿ ಯಾಗಿ ಜನರೊಂದಿಗೆ ಸಂತಸದಿಂದ ಬೆರೆತವರು.

ಬ್ರಾಹ್ಮಣ ಮಹಾ ಸಭಾ‌ ಕೊಡವೂರು ಇದರ ಸಕ್ರಿಯ ಸದಸ್ಯರಾಗಿ ಸಭೆ ಸಮಾರಂಭಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.

 
 
 
 
 
 
 
 
 
 
 

Leave a Reply