ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ವಿದ್ಯಾರಂಭಕ್ಕೆ ಚಾಲನೆ

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಸಪ್ತಮಿ ತಿಥಿಯ ಪರ್ವಕಾಲದಲ್ಲಿ ಶಾರದಾ ಪ್ರತಿಷ್ಠೆ ನೆರವೇರಿಸಲಾಯಿತು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಬೀರು ಶ್ರೀಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಮಕ್ಕಳಿಗೆ ವಿದ್ಯಾರಂಭ ಕ್ಕೆ ಚಾಲನೆ ನೀಡಲಾಯಿತು .
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ನಾರಾಯಣ ತಂತ್ರಿಗಳ ನೇತ್ರತ್ವದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು .ವರ್ಷಂಪ್ರತಿ ಈ ದಿನದಂದು ಕ್ಷೇತ್ರದ ನಾಟ್ಯರಾಣಿ ಗಂಧರ್ವಕನ್ಯೆಯ ಕನ್ಯೆಗೆ ವಿಶೇಷವಾದ ಪೂಜೆ ನೆರವೇರಿಸಲಾಗುತ್ತದೆ .

ಕ್ಷೇತ್ರದಲ್ಲಿ ಜೋಡಿ ಚಂಡಿಕಾಯಾಗ ಮುಂಬಯಿಯ ಸಂತು ಚೆನ್ನ ಮತ್ತು ದಂಪತಿಗಳ ಬಾಪ್ತು ಹಾಗೂ ಕ್ಷೇತ್ರದ ಆನಂದ್ ಬೈರಿ ಮತ್ತು ಮನೆಯವರ ಬಾಪ್ತು ಸಮರ್ಪಿತ ಗೊಂಡಿತು ಮಧ್ಯಾಹ್ನ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಮಾನಸಿ ಗ್ರೀಷ್ಮಾ ಭ್ರಾಮರಿ ಪ್ರಣವಿ ಅನನ್ಯ ಸಿಂಚನ ಸಾನ್ವಿ ಭಾವನಾ ವಿಷ್ಣುಮೂರ್ತಿ ಹಾಗೂ ವಿದ್ವಾನ್ ಭವಾನಿ ಶಂಕರ್ ಅವರಿಂದ ಸಮರ್ಪಿಸಲ್ಪಟ್ಟಿತು ಮಧ್ಯಾಹ್ನ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಘದ ವತಿಯಿಂದ ಮಧ್ವಾಚಾರ್ಯರ ತತ್ತ್ವಗಳ ಸಂಕೀರ್ತನ ಕಾರ್ಯಕ್ರಮ ಮದ್ದು ಅಗಾನಾ ಮಧುವಯ್ಯನ ಗಾನನಮನ ವಿಶೇಷ ಕಾರ್ಯಕ್ರಮ ನೆರವೇರಿತ್ತು .

ಮಧ್ಯಾಹ್ನ ನೆರವೇರಿದ ಮಹಾ ಅನ್ನಸಂತರ್ಪಣೆಯಲ್ಲಿ ಊರ ಹಾಗೂ ಪರವೂರ ಭಕ್ತರು ಗಳು ಸಹಸ್ರ ಸಹಸಸಂಖ್ಯೆಯಲ್ಲಿ ಪಾಲ್ಗೊಂಡರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

 
 
 
 
 
 
 
 
 
 
 

Leave a Reply