ಜಯಂಟ್ಸ್ ಗ್ರೆಟ್ ಡೇ ಸೆಲೆಬ್ರೆಷನ್ ಕಾಯ೯ಕ್ರಮ

ಬ್ರಹ್ಮಾವರ: – ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ ಜಯಂಟ್ಸ್ ಸಪ್ತಾಹ ಸಮಾರೋಪ ಸಮಾರಂಭ ಜಯಂಟ್ಸ್ ಗ್ರೆಟ್ ಡೇ ಸೆಲೆಬ್ರೆಷನ್ ಕಾಯ೯ಕ್ರಮ ಬ್ರಹ್ಮಾವರ ಸಿಟಿ ಸೆಂಟರ್ ಸಭಾಂಗಣದಲ್ಲಿ ಅ.1 ರಂದು ನಡೆಯಿತು.
ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಮಿ೯ಕ ಅಧಿಕಾರಿ ಬಿ.ಆರ್ ಕುಮಾರ್ , ಕಾಮಿ೯ಕ ಇಲಾಖೆ ಕಾಮಿ೯ಕರ ಅಭಿವೃದ್ಧಿಗೆ ಇರುವ ಇಲಾಖೆ ಯಾಗಿದೆ. ವಿವಿಧ ರೀತಿಯ ಸವಲತ್ತುಗಳನ್ನು ಕಾಮಿ೯ಕರು ಬಳಕೆ ಮಾಡಿ ಉತ್ತಮ ರೀತಿಯ ಜೀವನ ನಡೆಸಬೇಕು.
ಜಯಂಟ್ಸ ಬ್ರಹ್ಮಾವರ ನ್ವಿಸಾರ್ಥತೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದೊಂದು ಮಾದರಿ ಸಂಸ್ಥೆ ಎ೦ದು ಶ್ಲಾಘನೆ ವ್ಯಕ್ತಿ ಪಡಿಸಿದರು. ಹಾಗೆಯೇ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಮಾಹಿತಿ ನಮ್ಮ ಗಮನಕ್ಕೆ ತಂದಲ್ಲಿ ಕಾನೂನ್ಮತಕ ಬಗೆಹರಿಸಲು ಬದ್ಧರಿದ್ದೇವೆ ಎಂದು ತಿಳಿಸಿದರು.

ಜಯಂಟ್ಸ್ ವೆಲ್ಫೇರ್ ಫೆಡರೇಶನ್ ಪಿ.ಆರ್. ಒ ಗೋಪಾಲ್ ನುಗ್ಗೆಹಳ್ಳಿ ಮಾತನಾಡಿ, ಬ್ರಹ್ಮಾವರ ಜಯಂಟ್ಸ್ ತಂಡ ಮಾದರಿಯಾದ ಸಂಸ್ಥೆಯಾಗಿದ್ದು, ವಿವಿಧ ಜನಪರ ಕಾಯ೯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ಈ ಸಂದಭ೯ದಲ್ಲಿ ಸಮಾಜ ದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ಭಾಸ್ಕರ ರೈ, ವಿಶ್ವ ದಾಖಲೆಯ ಅಂಚೆ ಚೀಟಿ ಸಂಗ್ರಾಹಕ ಡೆನೀಯಲ್ ಮೊಂತೆರೋ, ರಾಜ್ಯ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕಿ ದೇವ ಕುಮಾರಿ, ಬಹುಮುಖ ಬಾಲ ಪ್ರತಿಭೆ ಸಮೃದ್ಧಿ ಮುಂತಾದವರನ್ನು ಸನ್ಮಾನಿಸಲಾಯಿತು.
ಬಡ ರೋಗಿಗಳಿಗೆ ಸಹಾಯ ಮಾಡಲು ಜಯಂಟ್ಸ್ ಗ್ರೂಪ್ ಬೆಂಗಳೂರು ಗಾಡ೯ನ್ ಸಿಟಿ ವತಿಯಿಂದ ಕೊಡ ಮಾಡಿದ ಅಕ್ಸಿಜನ್ ಕಾನ್ಸೆಟ್ರಿಟರ್ ರನ್ನು ಹಸ್ತಾಂತರಿಸಲಾಯಿತು.

ಮೆಹಂದಿ ಮತ್ತು ರಂಗೋಲಿ ಸ್ಪಥೆ೯ ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಡ ರೋಗಿಗೆ ವಾಕರ್ ಸ್ಟಿಕ್ ನೀಡಲಾಯಿತು.
ವೇದಿಕೆಯಲ್ಲಿ ಯುನಿಟ್ ಡೈರೆಕ್ಟರ್ ಲಕ್ಷೀಕಾಂತ್ ಬೆಸ್ಕೂರು, ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಶ್ರೀನಾಥ್ ಕೋಟ ಮುಂತಾದವರಿದ್ದರು.
ಹಿರಿಯ ನಾಗರೀಕರಾದ ಸೋಮಪ್ಪ ಪೂಜಾರಿ, ಕಮಲಾ ಪೂಜಾರಿಯವರನ್ನು ಗೌರವಿಸಲಾಯಿತು.
ಸುನೀತಾ ಮಧುಸೂಧನ್ ವರದಿ ವಾಚಿಸಿದರು.
ಅಣ್ಣಯ್ಯದಾಸ್, ಮಿಲ್ಟನ್ ಒಲಿವೇರಾ, ವಿವೇಕ್ ಕಾಮತ್, ರತ್ನ ಶ್ರೀ ನಾಥ್, ಪರಿಚಯಿಸಿದರು.
ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply