ಅದಿತಿ ಗ್ಯಾಲರಿಯಲ್ಲಿ ದೃಢವೃತ ಗೋರಿಕ್ ಅವರ ದಿವ್ಯಕಲಾ ಅನಾವರಣ

ಉಡುಪಿ, ನ.3 : ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ಅಮೇರಿಕಾ ಸಂಜಾತ ದೃಢವೃತ ಗೋರಿಕ್ ಅವರ “ದಿವ್ಯಕಲಾ” ಕಲಾ ಪ್ರದರ್ಶನ ನ. 3 ರಂದು ಅನಾವರಣಗೊಂಡಿತು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್ ಉದ್ಘಾಟಿಸಿದರು.

ಆಹಾರ ಎನ್ನುವ ಶಬ್ದ ಕೇವಲ ಜಠರಾಗ್ನಿಯನ್ನು ತಣಿಸಿದರೆ ಸಾಲದು. ನಾವು ನೋಡುವ ಪ್ರತಿ ದೃಶ್ಯವೂ ಆಹಾರವಾಗಬೇಕು. ಇದರಿಂದ ಮಾನವನ ಆಧ್ಯಾತ್ಮಿಕ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮೀಜಿ ತಮ್ಮ ಆಶೀರ್ವವಚನದಲ್ಲಿ ತಿಳಿಸಿದರು.

ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ನವೆಂಬರ್ 4,5 ಮತ್ತು 6 ರಂದು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಕಲಾ ಪ್ರದರ್ಶನದ ವೀಕ್ಷಣೆಗೆ ಅವಕಾಶವಿದೆ ಎಂದು ಮಾಹಿತಿ ನೀಡಿದರು. ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ ವಂದಿಸಿದರು .ವಿಶ್ವಸ್ಥರಾದ ಆಸ್ಟ್ರೊ ಮೋಹನ್ ವಂದಿಸಿದರು .

ದೃಢವೃತ ಗೋರಿಕ್ ಬಗ್ಗೆ ಒಂದಿಷ್ಟು : ಕಲಾವಿದ ದೃಢ ವೃತ ಗೋರಿಕ್ ಅವರು ಅಮೆರಿಕದಲ್ಲಿ ಹುಟ್ಟಿ ಬೆಳೆದವರು. ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಕಲೆಗಳಲ್ಲಿ ತರಬೇತಿ ಪಡೆದ ಕಲಾವಿದರಾಗಿದ್ದು, ಅವರ ಕಲಾಕೃತಿಗಳ ಮೂಲಕ ಭಕ್ತಿ ಕಲೆಗೆ ನವ ಚೈತನ್ಯ ತುಂಬಿದವರು. ನಾವು ಪಡೆಯುವ ಕೌಶಲ್ಯಗಳು ದೇವರ ಉಡುಗೊರೆಗಳು ಮತ್ತು ನಮ್ಮ ಅಂತಃಪ್ರಜ್ಞೆಯನ್ನು ಉನ್ನತೀಕರಿಸಲು ನಾವು ಅವುಗಳನ್ನು ಬಳಸಬಹುದು ಎಂದು ದೃಢ ನಂಬುತ್ತಾರೆ.

ಪ್ರತಿಮಾಮಾಪನ, ಪ್ರತಿಮಾಶಾಸ್ತ್ರ, ಸಾಂಪ್ರದಾಯಿಕ ಚಿತ್ರಕಲೆ ಮತ್ತು ವಾಸ್ತುಶಿಲ್ಪದ ವಿನ್ಯಾಸದಲ್ಲಿ ಅವರ ವ್ಯಾಪಕ ತರಬೇತಿ, ಹಾಗೆಯೇ lost wax ಎರಕ ಮತ್ತು ಕ್ಲೇ ಮಾಡೆಲಿಂಗ್‌ನಲ್ಲಿ ಕೌಶಲ್ಯಗಳನ್ನು ಹೊಂದಿದ್ದಾರೆ. ಭಾರತದಲ್ಲಿ 15 ವರ್ಷಗಳ ಪ್ರಯಾಣ ಮತ್ತು ಅಧ್ಯಯನ ಅವರಿಗೆ ಸ್ಪೂರ್ತಿ.

 
 
 
 
 
 
 

Leave a Reply