ಉದ್ಯಾವರ ಸರಕಾರಿ ಪ್ರೌಡ ಶಾಲೆ: ಎಸ್‌ಎಸ್‌ಎಲ್‌ಸಿ ಹಳೆ ವಿದ್ಯಾರ್ಥಿಗಳಿಂದ “ಗುರುವಂದನೆ”

ಉದ್ಯಾವರ ಸರಕಾರಿ ಪ್ರೌಡ ಶಾಲೆಯಲ್ಲಿ 1992-93ರ ಎಸ್‌ಎಸ್‌ಎಲ್‌ಸಿ ಹಳೆ ವಿದ್ಯಾರ್ಥಿಗಳಿಂದ “ಗುರುವಂದನೆ”.

ವಿದ್ಯೆ ಕಲಿಸಿದ ಗುರುವೃಂದದವರಿಗೆ ಹಾಗೂ ಕಚೇರಿ ಸಿಬ್ಬಂದಿ ವೃಂದದವರಿಗೆ ಗೌರವಿಸುವ ಅಪೂರ್ವ ಕಾರ್ಯಕ್ರಮವು ರಾಜ್ಯೋತ್ಸವ ದಿನ ಉದ್ಯಾವರ ಲಯನ್ಸ್ ಭವನದಲ್ಲಿ ಜರಗಿತು.
ತಮಗೆ ವಿದ್ಯೆ ನೀಡಿದ ಎಲ್ಲಾ ಅಧ್ಯಾಪಕರನ್ನು ಒಟ್ಟು ಸೇರಿಸಿದದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ಅಂದು ಮುಖ್ಯೋಪಾಧ್ಯಾಯರೂ,ಆಂಗ್ಲ ಭಾಷಾ ಭೋದನೆ ಮಾಡಿದ ಮಹಾಬಲ ತಿಂಗಳಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಕನ್ನಡ ರಾಜ್ಯೋತ್ಸವದ ಧ್ವಜ ಅನಾವರಣ ಗೊಳಿಸಿ ನಾಡಗೀತೆ ನುಡಿಸಲಾಯಿತು.
ಅಗಲಿದ ಗುರುಗಳಿಗೆ ಹಾಗೂ ಸಹಪಾಠಿಗಳಿಗೆ ನುಡಿನಮನ ಸಲ್ಲಿಸಲಾಯಿತು.
ಗುರುವಂದನೆಯನ್ನು ಕ್ರಮವಾಗಿ ಮುಖ್ಯೋಪಾಧ್ಯಾಯರು ಮತ್ತು. ಇಂಗ್ಲೀಷ್ ಅಧ್ಯಾಪಕರಾದ ಮಹಾಬಲ ತಿಂಗಳಾಯ ,ಗಣಿತ ಶಿಕ್ಷಕರಾದ ವಿಠ್ಠಲ ಮಾಸ್ಟರ್,ದೈಹಿಕ ಶಿಕ್ಷಕರಾದ ಉಮಾನಾಥ ಶೆಟ್ಟಿ ,ವಿಜ್ಞಾನ ಶಿಕ್ಷಕರಾದ ಐ ಜೆ ವಿಲಿಯಮ್ ,ಸಮಾಜವಿಜ್ಞಾನ ಶಿಕ್ಷಕರಾದಮರ್ಜೋರೀ ಪಯಾಜ್,ಕನ್ಮಡ ಶಿಕ್ಷಕರಾದ ಪಿ ಆರ್ ಹನಸಿ ,ಸಮಾಜ ವಿಜ್ಜಾನ ಶಿಕ್ಷಕರಾದ ಎಂ ಎನ್ ಶೇರಿಗಾರ್ ಟೈಲರಿಂಗ್ ವಿಭಾಗದ
ಶರಣಪ್ಪ ಹಾಗೂ ಕಚೇರಿ ಸಿಬ್ಬಂದಿ ವೃಂದದವರಾದ ಕೆ.ಮಾಧವ ಶೇರಿಗಾರ್ ,ಗೋಪಾಲಕೃಷ್ಣ ನಾಯಕ್ ,ಅಂಗಾರ ಪೂಜಾರಿ
ಗೋಪಾಲ ದೇವಾಡಿಗ ಗೌರವ ಅಭಿನಂದನೆಗಳನ್ನು ಸ್ವೀಕರಿಸಿದರು‌.
ಸನ್ಮಾನಿತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕಲಿತ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು.
ಗುರುವಂದನೆಗಿಂತ ಮೊದಲು ಶಾಲಾ ಹಳೆ ವಿದ್ಯಾರ್ಥಿಗಳ ಮಕ್ಕಳಿಂದ ನೃತ್ಯ ವೈವಿಧ್ಯ, ಗಾಯನ ಜರಗಿತು. ಜಗದೀಶ್ ಕುಮಾರ್
ಸ್ವಾಗತಿಸಿ,ಪ್ರಸ್ತಾವಿಸಿದರು.
ದಯಾನಂದ ಕರ್ಕೇರ ನಿರೂಪಿಸಿದರು.ಹಳೆವಿದ್ಯಾರ್ಥಿ ದಯಾನಂದ ಧನ್ಯವಾದ ಸಲ್ಲಿಸಿದರು.ಸಭಾಕಾರ್ಯಕ್ರಮ ಮುಗಿದ ಬಳಿಕ ಊಟೋಪಚಾರ
ನೆರವೇರಿತು.

Leave a Reply