Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ನ.6~ ಪ್ರಪ್ರಥಮ ಉಡುಪಿ ಜಿಲ್ಲಾ ವಿಪ್ರಸಮ್ಮೇಳನ

ಉಡುಪಿ: ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಕಾರ್ಕಳ ತಾಲೂಕು ಬ್ರಾಹ್ಮಣ ಸಂಘದ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಪ್ರಥಮ ವಿಪ್ರ ಸಮ್ಮೇಳನ ನವಂಬರ್ 6ರಂದು ಕಾರ್ಕಳ ರಾಧಾಕೃಷ್ಣ ಸಭಾಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೈ.ಸುಧಾಕರ ಭಟ್‌ ಕಾರ್ಕಳ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪ್ರ ಸಮಾಜದ ಅಭಿವೃದ್ಧಿಗೆ ಪೂರಕ ವಿಷಯಗಳನ್ನು ಚರ್ಚಿಸಿ ಸರಕಾರಕ್ಕೆ ಮನವಿ ಸಲ್ಲಿಸುವುದು, ಸಮಾಜದ ಸಮಸ್ಯೆ ಗಳ ಬಗ್ಗೆ ಚರ್ಚೆ ಇತ್ಯಾದಿ ವಿಷಯಗಳನ್ನು ಸಮ್ಮೇಳನದಲ್ಲಿ ಅಳವಡಿಸಲಾಗಿದ್ದು, ಜಿಲ್ಲೆಯ ವಿವಿಧ ವಿಪ್ರವಲಯಗಳ ಸಮಾಜಮುಖಿ ಕಾರ್ಯಕ್ರಮಗಳ ಪಕ್ಷಿನೋಟ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಆಯೋಜಿಸಲಾಗಿದೆ.

ಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ದಿಕ್ಸೂಚಿ ಭಾಷಣ ಮಾಡುವರು. ಶಾಸಕ ರಘುಪತಿ ಭಟ್, ರೆವಾ ವಿ.ವಿ ಮಾಜಿ ಕುಲಪತಿ ಡಾ|| ಎಸ್‌. ವೈ. ಕುಲಕರ್ಣಿ, ಮಹಾಸಭಾ ಸಂಘಟನಾ ಕಾರ್ಯದರ್ಶಿ“ರಾಘವೇಂದ್ರ ಭಟ್‌, ಉಪಾಧ್ಯಕ್ಷ ನಟರಾಜ ಭಾಗವತ್‌, ಪತ್ರಕರ್ತೆ ಡಾ||ಯು.ಬಿ.ರಾಜಲಕ್ಷ್ಮೀ ಅಭ್ಯಾಗತರಾಗಿರುವರು. ವಿಚಾರಗೋಷ್ಠಿಯಲ್ಲಿ ಕಶಕೋಡಿ ಸೂರ್ಯನಾರಾಯಣ ಭಟ್‌, ಕೆ.ಎಲ್‌.ಕುಂಡಂತಾಯ ಮತ್ತು ಅಕ್ಷಯ ಗೋಖಲೆ ಭಾಗವಹಿಸುವರು.

ಸಂಜೆ ಸಮಾರೋಪ ಸಮಾರಂಭದಲ್ಲಿ “ವಿಪ್ರ ಸ್ಪಂದನ’ ಸ್ಮರಣ ಸಂಚಿಕೆಯನ್ನು ಸಚಿವ ಸುನಿಲ್ ಕುಮಾರ್‌ ಅನಾವರಣಗೊಳಿಸುವರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಜಿದಾನಂದ ಮೂರ್ತಿ, ನಿರ್ದೇಶಕರಾದ ರಾಜೇಶ್ ನಡ್ಯ೦ತಿಲ್ಲಾಯ, ವತ್ಸಲಾ ನಾಗೇಶ್‌, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ”ಶ್ರೀರಾಮ ಭಟ್‌ ಸಾಣೂರು ಉಪಸ್ಥಿತರಿರುವರು. ಜಿಲ್ಲಾಬ್ರಾಹ್ಮಣ ಸಂಘ ಅಧ್ಯಕ್ಷ ವೈ ಸುಧಾಕರ ರಾವ್‌ ಅಧ್ಯಕ್ಷತೆ ವಹಿಸುವರು ಎಂದರು.

ಸಮ್ಮೇಳನದ ಹೈಲೈಟ್ಸ್ : ಬ್ರಾಹ್ಮಣ ಸಮಾಜದವರಾದ ನಾವೆಲ್ಲರೂ ಒಂದೇ, ನಮ್ಮಲ್ಲೂ ಒಗ್ಗಟ್ಟಿದೆ’ ಎಂಬ ಧ್ಯೇಯವಾಕ್ಯ ನಮ್ಮದಾಗಿದೆ. ನಮ್ಮ ಸಮಾಜದ ನಾನಾ ಗೋತ್ರಗಳ ನಾನಾ ಪಾತ್ರಗಳ ಪುರುಷ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಾಗಿ ಹಾಗೂ ಮಾರ್ಗದರ್ಶಕರಾಗಿ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಹೋದರ ಭಾವದ ಒಗ್ಗಟ್ಟಿನ ಅಗತ್ಯ ಎಷ್ಟಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಸಂಘಟನಾತ್ಮಕ ಬಲ ಇನ್ನಷ್ಟು ಹೆಚ್ಚ ಬೇಕೆಂದರೆ ವಿವಿಧ ಪಂಗಡಗಳ ವಿಪ್ರ ಬಾಂಧವರೆಲ್ಲರನ್ನೂ ನಾವು ಈ ಸಂಘಟನೆಯ ವ್ಯಾಪ್ತಿಯಲ್ಲಿ ತರಬೇಕಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಉಡುಪಿ ಜಿಲ್ಲಾವ್ಯಾಪ್ತಿಯ ವಿಪ್ರ ಕುಟುಂಬಗಳ ಸಮಗ್ರ ಕ್ಷೇಮಾಭಿವೃದ್ಧಿಯನ್ನು ಸಾಧಿಸಬೇಕಾಗಿದೆ. ಈ ಧ್ಯೇಯದೊಂದಿಗೆ ನಮ್ಮಲ್ಲಿರುವ ಎಲ್ಲಾ ಸಂಘಟನೆಗಳನ್ನು ಒಂದುಗೂಡಿಸಿ ಜಿಲ್ಲಾ ವಿಪ್ರ ಸಮ್ಮೇಳನವನ್ನು ಕಾರ್ಕಳದಲ್ಲಿ ನಡೆಸಬೇಕೆಂದು ನಿರ್ಧರಿಸಿದೆ.

ಸಂಘಟನೆಯು ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲೇ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಸುಮಾರು 1500 ರಿಂದ 3೦೦೦ ವಿಪ್ರ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಒಳಗಡೆ ಹಾಗೂ ಹೊರಗಡೆ-ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ನಮ್ಮ ವಿಪ್ರ ಸಹೋದರರು ಆದ್ಯತೆಯಿಂದ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತಾಗ ಬೇಕು, ಪರಸ್ಪರ ಕಲೆತು ಚರ್ಚಿಸಿ ಭವಿಷ್ಯದ ಆಗು ಹೋಗುಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ವೇದಿಕೆಯೊಂದು ರೂಪುಗೊಳ್ಳುವ ಸುವರ್ಣ ಸಂದರ್ಭ ಇದಾಗ ಬೇಕೆಂಬುದು ಸಮ್ಮೇಳನದ ಆಶಯ.

ಈ ಸಮ್ಮೇಳನದಲ್ಲಿ: ೧) ಸಮಾಜದ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಚರ್ಚಿಸಿ ಸರಕಾರಕ್ಕೆ ಮನವಿ ನೀಡುವುದು, ೨)ನಮ್ಮ ಸಮಾಜದ ವಿವಿಧ ಸಮಸ್ಯೆಗಳ ಬಗೆಗಿನ ಸಂವಾದ ವಿಚಾರಗೋಷ್ಠಿ ನಡೆಯಲಿದೆ. ೩)ಸಮ್ಮೇಳನದ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾನ್ವಿತರಿಗಾಗಿ ಸಾಂಸ್ಕೃತಿಕ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ೪)ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ವಿಪ್ರ ವಲಯಗಳು ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳ ಪಕ್ಷಿನೋಟವನ್ನು ಒದಗಿಸುವ ಕೆಲಸವಾಗಲಿದೆ. ೫)‘ವಿಪ್ರಸ್ಪಂದನ’ ಶೀರ್ಷಿಕೆಯಡಿಯಲ್ಲಿ ನಮ್ಮ ಸಮಾಜಕ್ಕೆ ಅಗತ್ಯವಾಗಿರುವ ವಿಶೇಷ ಮಾಹಿತಿಗಳ ನೀಡಿಕೆ.
೬)ಸಮ್ಮೇಳನದ ದಿನದಂದು ವಿಶೇಷ ವೈದ್ಯಕೀಯ ವಿಭಾಗದ ಚಿಕಿತ್ಸಾ ಸೌಲಭ್ಯವಿರುತ್ತದೆ.

೭)ವ್ಯವಹಾರಸ್ಥ ವಿಪ್ರ ಬಂಧುಗಳ ವ್ಯಾಪಾರಿ ವ್ಯವಹಾರಗಳಿಗಾಗಿ ಹಾಗೂ ವಿಪ್ರ ಸಂಘ ಸಸ್ಥೆಗಳಿ೦ದ ಮಾಹಿತಿ ನೀಡಿಕೆಗಾಗಿ ವಿಶೇಷ ಮಳಿಗೆಗಳ ವ್ಯವಸ್ಥೆಯಿರುತ್ತದೆ.

೮)ಸಮ್ಮೇಳನದ ನೆನಪಿಗಾಗಿ ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಹಿರಿಯ ಲೇಖಕ ಹಾಗೂ ಜಾನಪದ ವಿದ್ವಾಂಸ ಕೆ . ಎಲ್. ಕುಂಡ೦ತಾಯ ಅವರ ಸಂಪಾದಕತ್ವದಲ್ಲಿ ರೂಪುಗೊಳ್ಳುವ ಈ ಸಂಚಿಕೆ ವಿಪ್ರ ಸಮಾಜದ ಪಾಲಿಗೆ ಮಾರ್ಗದರ್ಶಕವಾಗಬಲ್ಲ ಮಹತ್ವದ ಲೇಖನಗಳು ಹಾಗೂ ವಿವಿಧ ವ್ಯವಹಾರ ಸಂಸ್ಥೆಗಳ ಬಗೆಗಿನ ಮಾಹಿತಿ ಹಾಗೂ ಜಾಹೀರಾತುಗಳನ್ನು ಒಳಗೊಂಡು ಸರ್ವಾಂಗ ಸುಂದರವಾಗಿ ಹೊರಬರಲಿದೆ.

ನಮ್ಮ ವಿಪ್ರಬಾಂಧವರು ಈ ಸಮ್ಮೇಳನದಲ್ಲಿ ಸಕುಟುಂಬಿಕರಾಗಿ ಪಾಲ್ಗೊಳ್ಳುವಂತೆ ಮಾಡುವುದಕ್ಕಾಗಿ ಇದನ್ನು ಒಂದು ಹಬ್ಬದಂತೆ-ಸಾ೦ಸ್ಕೃತಿಕ ಉತ್ಸವದಂತೆ ಆಚರಿಸಬೇಕು ಎಂಬುದು ಸಮ್ಮೇಳನದ ಉದ್ದೇಶ.

 ಸಮಸ್ತ ಸಮಾಜ ಬಾಂಧವರು ಈ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈ ಆಶಯವನ್ನು ಈಡೇರಿಸುತ್ತಾರೆ. 

ಪತ್ರಿಕಾ ಗೋಷ್ಟಿಯಲ್ಲಿ ಎಸ್.ಕೃಷ್ಣಾನಂದ ಛಾತ್ರ, ಪ್ರಧಾನ ಕಾರ‍್ಯದರ್ಶಿ ಸಂದೀಪ್‌ ಮ೦ಜ ಉಡುಪಿ, ಉಡುಪಿ ತಾಲೂಕಿನ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಬಲ್ಲಾಳ್, ಮಾಧವ ಭಟ್, ಜೊತೆ ಕಾರ್ಯದರ್ಶಿಗಳಾದ ನಾಗರಾಜ್ ಉಪಾಧ್ಯಾಯ, ಶ್ರೀಕಾಂತ ಉಪಾಧ್ಯ ಕೆ.ಎಸ್.ಕೇಶವ ರಾವ್ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!