‘ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’

ಉಡುಪಿ :​   ವಿಶ್ವದ 7 ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ 7 ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ.​   ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಅಭಿಯಾನದಲ್ಲಿ ನೀವೂ ಪಾಲ್ಗೊಂಡು ಉಡುಪಿ ಜಿಲ್ಲೆಯ ಈ 4 ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ.
ಉಡುಪಿ ನಾಮ ನಿರ್ದೇಶನಗಳು :​  1.  ಒಂದು ಪಕ್ಕದಲ್ಲಿ ಶಾಂತವಾಗಿ ಹರಿಯುವ ಸೌಪರ್ಣಿಕ ನದಿ, ಇನ್ನೊಂದು ಪಕ್ಕದಲ್ಲಿ ಭೋರ್ಗೆರೆಯುವ ಅರಬ್ಬಿ ಸಮುದ್ರಗಳ ನಡುವೆ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕಣ್ಣಿಗೆ  ಹಬ್ಬವನ್ನಂಟು ಮಾಡುವ ಮರವಂತೆ ಕಡಲ ತೀರ 2. ದೇಶದ ಏಕೆೈಕ ಲಾವಾರಸ ನಿರ್ಮಿತ ಶಿಲಾಸ್ತಂಭಗಳ ದ್ವೀಪ, ಮಡಗಾಸ್ಕರ್ ಬಿಟ್ಟರೆ  ವಿಶ್ವದಲ್ಲಿ ಎರಡನೆೇ ಪ್ರಕೃತಿ ನಿರ್ಮಿತ ಅದ್ಭುತ ಸೈಂಟ್ ಮೇರೀಸ್ ದ್ವೀಪ​.   3. ಪಾಜಕದಲ್ಲಿರುವ 32 ಅಡಿ ಎತ್ತರದ ಮಧ್ವಾಚಾರ್ಯರ ಏಕಶಿಲಾ ಪ್ರತಿಮೆ ಉಡುಪಿಯ ಇನ್ನೊಂದು ಆಕರ್ಷಣೆ.​   4. ಕೆೈಸ್ತರು ಮಾತ್ರವಲ್ಲೇ, ಹಿಂದು, ಮುಸ್ಲಿಮರೂ ಭಕ್ತಿಯಿಂದ ನಡೆದುಕೆೊಳ್ಳುವ ಅತಿ ಸುಂದರ ವಾಸ್ತುಶಿಲ್ಪದ ಕಾರ್ಕಳ ಅತ್ತೂರಿನ ಸೈಂಟ್ ಲಾರೆನ್ಸ್ ಬೆಸಿಲಿಕಾ ಚರ್ಚ್.
https://www.7wondersofkarnataka.com ನಲ್ಲಿ ನಾಮನಿರ್ದೇಶನಗೊಂಡಿರುವ 100 ಅದ್ಭುತಗಳ ಪಟ್ಟಿಯಲ್ಲಿರುವ ಉಡುಪಿ ಜಿಲ್ಲೆಯ ಈ 4 ಸ್ಥಳಗಳ ಪೈಕಿ ನಿಮ್ಮ ಆಯ್ಕೆಯ ಸ್ಥಳಕ್ಕೆ ತಲಾ 10 ವೋಟ್ ಮಾಡಿ ಇವನ್ನು ರಾಜ್ಯದ ಏಳು ಅದ್ಭುತಗಳನ್ನಾಗಿಸಬಹುದು.​  ಅತಿ ಹೆಚ್ಚು ವೋಟ್ ಪಡೆದ ಸ್ಥಳಗಳು 49ರ ಪಟ್ಟಿಗೆ ಬರಲಿವೆ. ನಂತರ ಅಂತಿಮ 21ರ ಪಟ್ಟಿಯಲ್ಲಿ ಉಳಿದು ಪ್ರವಾಸೋದ್ಯಮ ಇಲಾಖೆ ತಜ್ಞರ ಸಮಿತಿಯ ಕರ್ನಾಟಕದ 7 ಅದ್ಭುತಗಳನ್ನು ಆಯ್ಕೆ ಮಾಡಲಿದೆ. ಆದ್ದರಿಂದ ಉಡುಪಿ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಪಾಲಿನ ಹತ್ತು ವೋಟ್‌ಗಳನ್ನು ತಮ್ಮ ನೆಚ್ಚಿನ ಸ್ಥಳಕ್ಕೆ ನೀಡಬಹುದು. ಜತೆಗೆ ಸ್ನೇಹಿತರು, ಕುಟುಂಬ ಸದಸ್ಯರೂ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬಹುದು.
ಏನಿದು ಅಭಿಯಾನ ?
ಪ್ರಪಂಚದ ಏಳು ಅದ್ಭುತಗಳಂತೆ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಈ ವಿಶಿಷ್ಟ ಅಭಿಯಾನ ನಡೆಯುತ್ತಿದೆ. ಕರ್ನಾಟಕವು ಸುಂದರ ಕರಾವಳಿ ತೀರ,  ದುರ್ಗಮ ಕಾನನ, ರಮಣೀಯ ಜಲಪಾತಗಳು, ಸಮುದ್ರ ತೀರಗಳು, ಐತಿಹಾಸಿಕ ಸ್ಥಳಗಳಂತಹ ಹಲವು ಜಗತ್ತುಗಳನ್ನು ಒಳಗೊಂಡಿದೆ. ಈ ಪೈಕಿ ಏಳು ಅದ್ಭುತಗಳನ್ನು ಸಾರ್ವಜನಿಕರೇ ಗುರುತಿಸಲು ರೂಪಿಸಿರುವ ವೇದಿಕೆಯೇ ‘ಬನ್ನಿ ಹುಡುಕೋಣ ಕರ್ನಾಟಕದ ಏಳು ಅದ್ಭುತಗಳನ್ನು’ ಎಂಬ ಈ ಅಭಿಯಾನ.
ಯಾವ ಹಂತದಲ್ಲಿದೆ ?
ಮೇ ತಿಂಗಳಲ್ಲಿ ಆರಂಭವಾದ 6 ಹಂತಗಳ ಅಭಿಯಾನದ ಮೊದಲ ಹಂತದಲ್ಲಿ ಸಾರ್ವಜನಿಕರು ವೆಬ್‌ಸೈಟ್ ನಲ್ಲಿ, ತಾವು ನೋಡಿದ ಅದ್ಭುತ ಪ್ರವಾಸಿ ಸ್ಥಳ, ಪಾರಂಪರಿಕ ತಾಣ, ಅತ್ಯಾಧುನಿಕ ಕಟ್ಟಡ, ರಸ್ತೆ ಹೀಗೆ ಅದ್ಭುತ ಎನಿಸುವ ಸ್ಥಳಗಳನ್ನು ನಾಮನಿರ್ದೇಶನ ಮಾಡಿದ್ದಾರೆ.​ ಇದೀಗ, 2ನೇ ಹಂತದಲ್ಲಿ ಜನರೇ ಸೂಚಿಸಿದ ಅದ್ಭುತಗಳಲ್ಲಿ 100ನ್ನು ಆಯ್ಕೆ ಮಾಡಿ, ಸಾರ್ವಜನಿಕರಿಂದ ವೋಟಿಂಗ್‌ ನಡೆಸಲಾಗುತ್ತಿದೆ.
ವೋಟಿಂಗ್ ನಿಯಮ:​  — ಆಯ್ಕೆಯಾಗಿರುವ ನೂರು ಅದ್ಭುತಗಳಿಗೂ ವೋಟ್ ಹಾಕಬಹುದು.​  — ಪ್ರತಿಯೊಂದು ಅದ್ಭುತಕ್ಕೂ 10 ವೋಟ್ ಮಾಡಲು ಅವಕಾಶವಿದೆ.​  — ಈ ಅಭಿಯಾನದ ಬಗ್ಗೆ ಸ್ನೇಹಿತರು ಕುಟುಂಬದವರಿಗೂ ತಿಳಿಸಿ.​  — ತನ್ಮೂಲಕ ನಿಮ್ಮ ಉಡುಪಿ ಜಿಲ್ಲೆಯ ಸ್ಥಳವನ್ನು ಅದ್ಭುತವನ್ನಾಗಿಸಿ.​

 
 
 
 
 
 
 
 
 
 
 

Leave a Reply