ದಶಮ ಸಂಭ್ರಮಕ್ಕೆ ಚಾಲನೆ

ಯುವ ಬಂಟರ ಸಂಘ (ರಿ.) ಕಂಬಳಕಟ್ಟ – ಕೊಡವೂರು ಇದರ ದಶಮ ಸಂಭ್ರಮದ ಚಾಲನೆ ಕಂಬಳಕಟ್ಟ ವಠಾರದಲ್ಲಿ ಜರಗಿತು. ಕುlಆಶ್ರಿತ ಹಾಗೂ   ಕು l ಅನನ್ಯ ಇವರುಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಡುಪಿ ತಾಲೂಕು ಸಮಿತಿ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು ಇದರ ಸಂಚಾಲಕರಾದ ಶ್ರೀ ಜಯರಾಜ್ ಹೆಗ್ಡೆ ಇವರು ಮಾತನಾಡಿ ಸಂಘದ ಈ ವರೆಗಿನ  ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಸಂಘದ ಶ್ರೇಯಸ್ಸಿಗೆ ಹಾರೈಸಿದರು.
 
ಉಡುಪಿ ಬಂಟರ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಶೆಟ್ಟಿ ಇವರು ಸಂಘದ ದಶಮ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿದರು.​ ಸಂಘದ ಲಾಂಛನದೊಂದಿಗೆ ತ್ರಿವರ್ಣ ಬಣ್ಣದ ಬಲೂನು ಗುಚ್ಚಗಳನ್ನು ಬಾನೆತ್ತರಕ್ಕೆ ಹಾರಿಸುವುದರ ಮೂಲಕ ಸಂಘದ ದಶಮ ಸಂಭ್ರಮ ವರ್ಷಕ್ಕೆ ಚಾಲನೆ ನೀಡಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಇವರು ಹತ್ತನೇ ವರ್ಷಾಚರಣೆಗೆ ಪಾದಾರ್ಪಣೆಗೈಯುತ್ತಿರುವ ಯುವ ಬಂಟರ ಸಂಘ ಕಂಬಳಕಟ್ಟ – ಕೊಡವೂರು ಇದರ ಪದಾಧಿಕಾರಿ ಹಾಗೂ ಸದಸ್ಯರುಗಳಿಗೆ ಶುಭಹಾರೈಸುತ್ತಾ, ಯಾವುದೇ ಸಂಘದ ಹುಟ್ಟು ಸುಲಭ ಆದರೆ ಅದು ಉತ್ತುಂಗಕ್ಕೇರಬೇಕಾದರೆ ಅದರ ಹಿಂದಿನ ಶ್ರಮ ಬಹಳ.
ಸಂಘದ ಬೆಳವಣಿಗೆ ಕೇವಲ ಒಬ್ಬರಿಂದ ಅಸಾಧ್ಯ,ಸಂಘದ ಪ್ರತಿಯೋರ್ವ ಸದಸ್ಯನೂ ಅದರ ಯಶಸ್ಸಿಗೆ ಕಾರಣೀಭೂತ ,ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಯೋಜನೆಗಳು ಕಾರ್ಯರೂಪಗೊಳ್ಳಲಿ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಮಜಲುಮನೆ ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಹರ್ಷಿತ್ ಸಂತೋಷ್ ಶೆಟ್ಟಿ,ದೇವಿಕಾ ಸಂತೋಷ್ ರೈ, ಸಿಂಚನ ನವೀನ್ ಶೆಟ್ಟಿ,ಸ್ಪಂದನ ನವೀನ್ ಶೆಟ್ಟಿ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು .
 
ಈ ಸಂದರ್ಭದಲ್ಲಿ ಸಾಸ್ತಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಸಹ ಶಿಕ್ಷಕಿ ಶ್ರೀಮತಿ ವನಿತಾ ಶೆಟ್ಟಿ ಚೇರ್ಕಾಡಿ,ಅರುಣ್ ಶೆಟ್ಟಿ ಗಂಗೋತ್ರಿ,ಸಂಘದ ಗೌರವಾಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ,ಜಗನ್ನಾಥ್ ಶೆಟ್ಟಿ ದೊಡ್ಡಮನೆ, ಮೋಹನ್ ಶೆಟ್ಟಿ ಮೂಡನಿಡಂಬೂರು, ಮನೋಹರ್ ಶೆಟ್ಟಿ ತೋನ್ಸೆ, ರಮೇಶ್ ಶೆಟ್ಟಿ ಜಾರ್ಕಳ, ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು, ಜಯಕರ ಶೆಟ್ಟಿ ಅಂಬಲಪಾಡಿ, ಕೃಷ್ಣ ಶೆಟ್ಟಿ ಪಂದುಬೆಟ್ಟು, ಅರುಣ್ ಕುಮಾರ್ ಶೆಟ್ಟಿ ಡಯಾನಾ ಆಂಡ್ ಡಾಲ್, ಸುಲೋಚನಾ ಶೆಟ್ಟಿ , ವಿನೋದ ಶೆಟ್ಟಿ ಗರ್ಡೆ , ಸಂಘ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. 
 
ಕಾರ್ಯದರ್ಶಿ ಶ್ರೀ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಗೌರವಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಪ್ರಸ್ತಾವನೆ ಗೈದರು. ಗೌರವಾಧ್ಯಕ್ಷರಾದ ಶ್ರೀಮತಿ ಸ್ಮಿತಾ ವಿದ್ಯಾಧರ್ ಶೆಟ್ಟಿ ಗರ್ಡೆ ಧನ್ಯವಾದ ಸಮರ್ಪಿಸಿದರು.  ಶ್ರೀ ಅಮೃತ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply