ಕರೋನಾ~ವೈದ್ಯರ ಬಗ್ಗೆ ಕಾಳಜಿಯಿರಲಿ

ಕೊವಿಡ್ ಸೋ೦ಕು ಎಷ್ಟು ಪರಿಣಾಮ ನಮ್ಮ ಜೀವನದ ಮೇಲೆ ಬೀರಿದೆ ಎಂದರೆ ಒಬ್ಬರನೊಬ್ಬರು ಸಂಶಯದ ದೃಷ್ಟಿಯಿಂದ ನೋಡುವ ಪರಿಸ್ಥಿತಿಯಿದೆ. ಕೋವಿಡ್ ದೂರ ಮಾಡಬೇಕಾದರೆ ನಾವು ದೂರ ಇರಬೇಕು. ಅದೇ ರೀತಿ ವೈದ್ಯರ ಬಳಿ ಚಿಕಿತ್ಸೆಗೆ ಹೋಗುವ ಸಂದಭ೯ ಹೆಚ್ಚಿನವರು ಮಾಡುವ ಸಣ್ಣ ತಪ್ಪಿನಿಂದ ಆರೋಗ್ಯ ಕಾಪಾಡುವ ವೈದ್ಯರಿಗೆ ಕೂಡ ಕೋವಿಡ್ ಬರಬಹುದು .
ನಾನು ಹಲವಾರು ಮಂದಿಯನ್ನು ವೈದ್ಯರ ಕ್ಲಿನಿಕ್ ನಲ್ಲಿ ನೋಡುತ್ತೆನೆ. 
ವೈದ್ಯರ ಬಳಿ ಸರತಿ ಸಾಲು ಕುಳಿತವರಲ್ಲಿ ಹೆಚ್ಚಿನವರು ಮಾಸ್ಕ್ ನ್ನು ಸರಿಯಾಗಿ ಹಾಕಿರುದಿಲ್ಲ. ಒಂದು ಬಾರಿ ಒಬ್ಬ ಮಹಿಳೆ ಮಾಸ್ಕ್ ಹಾಕದೆ ಸೀರೆಯ ಸೆರಗನ್ನು ಮುಖಕ್ಕೆ ಹಾಕಿದ್ದು, ಮತ್ತೊಬ್ಬರ ಬಳಿ ಮಾತನಾಡುವಾಗ ಯಾವುದೇ ರೀತಿಯ ಮುಖ ಕವಚ ಬಳಕೆ ಮಾಡಿಲ್ಲ.  ಈ ಬಗ್ಗೆ ನಾನು ತಿಳಿಸಿದಾಗ ಎದುರು ಉತ್ತರ ನೀಡಿದರು. ಅದೇ ರೀತಿ ಕೆಲವರು ಹೆಗಲಿನ ಟಾವೆಲ್ ನ್ನು ನಾಮಕೆವಾಸ್ತೆ ಮುಖಕ್ಕೆ ಅಡ್ಡ ಹಿಡಿದವರು ಇದ್ದಾರೆ. ಈ ಬಗ್ಗೆ ಜನತೆ ಮಾಸ್ಕ್ ನ ಪ್ರಾಮುಖ್ಯತೆಯ ಬಗ್ಗೆ ತಿಳಿಯಬೇಕಾಗಿದೆ.
ಕೊರೊನಾ ಸೋಂಕು ಸಮುದಾಯಕ್ಕೂ ವ್ಯಾಪಿಸಿ ಎಲ್ಲೆಡೆ ಹರಡುತ್ತಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಈ ರೀತಿಯ ನಿಲ೯ಕ್ಷ ಸರಿ ಯಲ್ಲ. ಈ ಕಾಯಿಲೆಯನ್ನು ದೂರ ಮಾಡಬೇಕಾದರೆ ನಾವು ಎಚ್ಚರಿಕೆಯಿಂದ ಜೀವನ ಸಾಗಿಸಬೇಕು.                                      ಕ್ಲಿನಿಕ್ ಅಥವಾ ಆಸ್ಪತ್ರೆ ಭೇಟಿ ನೀಡುವ ಸಂದಭ೯ ಪಾಲಿಸಬೇಕಾದ ಅಂಶಗಳು :-
ಹೆಚ್ಚಿನ ವೈದ್ಯರಲ್ಲಿ ಅಪಾಯಿಂಟ್ ಮೆoಟ್ ಪದ್ದತಿ ಪಾಲಿಸುತ್ತಾರೆ. ಹೀಗಾಗಿ ಸಮಯ ನಿಗದಿ ಮಾಡಿ ಆ ಸಮಯಕ್ಕೆ ಸರಿಯಾಗಿ ಅಲ್ಲಿ ತೆರಳಬೇಕು. ಇಲ್ಲವಾದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಲ್ಲಿ ಸೋ೦ಕಿನ ಅಪಾಯಕ್ಕೆ ಸಿಲುಕಬಹುದು. ರೋಗಿಯ ಜತೆಗೆ ಬಂದವರು ಕೂಡ ವೈದ್ಯರ ಕ್ಯಾಬಿನ್ ಗೆ ತೆರಳದಿರುವುದು ಉತ್ತಮ ಸಕಾ೯ರದ ಎಲ್ಲಾ ನೀತಿ ನಿಯಮಗಳನ್ನು ಪಾಲಿಸಬೇಕು ಇದ ರಲ್ಲಿ ಯಾವುದೇ ರೀತಿಯ ತಾರತಮ್ಯ ಬೇಡ.
ಮಕ್ಕಳನ್ನು ಕರೆದುಕೊಂಡು ಹೋಗದಿರಿ’ –  ಹೆಚ್ಚಿನವರು ವೈದ್ಯರ ಭೇಟಿಗೆ ಹೋದಾಗ ಮಕ್ಕಳನ್ನು ಕರೆದುಕೊಂಡು ಹೋಗುದನ್ನು ನೋಡುತ್ತೇವೆ . ಇದು ಸಲ್ಲದು ಆದಷ್ಟು ಹಿರಿಯರು ಮತ್ತು ಮಕ್ಕಳನ್ನು ಮನೆಯಲ್ಲಿ ಬಿಟ್ಟರೆ ಉತ್ತಮ. ನಿಮ್ಮ ತಪ್ಪಿನಿಂದ ಅವರು ತೊಂದರೆಗೆ ಸಿಲುಕಬಹುದು.
ಕೋವಿಡ್ ಬಗ್ಗೆ ವೈದ್ಯರ ಬಳಿ ಮಾಹಿತಿ ಮುಚ್ಚಿಡದೆ ತಿಳಿಸಿ :-  ಅನೇಕ ಜನರು ತಮಗೆ ಜ್ವರ ಅಥವಾ ಕೋವಿಡ್ ಲಕ್ಷಣ ಇದ್ದರೆ ಹೆದರಿಕೆಯಿಂದ ಅಥವಾ ನಿಲ೯ಕ್ಷದಿ೦ದ ಅದನ್ನು ಮುಚ್ಚಿಡುವುದು ಸರಿಯಲ್ಲ. ನಿಮ್ಮ  ತಪ್ಪಿನಿಂದ ಉಳಿದ ರೋಗಿಗಳು ಮತ್ತು ವೈದ್ಯರು ಅಪಾಯಕ್ಕೆ ಸಿಲುಕಬಹುದು. ವೈದ್ಯರ ಬಳಿ ಆರೋಗ್ಯದ ಬಗ್ಗೆ ಪೂಣ೯ ಮಾಹಿತಿಯನ್ನು ತಿಳಿಸಿದರೆ ನಿಮಗೂ ಒಳ್ಳೆಯದು ವೈದ್ಯರಿಗೂ ಉತ್ತಮ.
ವೈದ್ಯರ ಬಗ್ಗೆ ಕಾಳಜಿಯಿರಲಿ :– ವೈದ್ಯರನ್ನು ನಾವು ದೇವರ ಸ್ಥಾನದಲ್ಲಿ ನೋಡುತ್ತೇವೆ.  ಅವರ ಆರೋಗ್ಯ ಉತ್ತಮವಿದ್ದರೆ ಮಾತ್ರ ಸಮಾಜದ ಆರೋಗ್ಯ ಉತ್ತ ವಿರಲು ಸಾಧ್ಯ .ಹೀಗಾಗಿ ವೈದ್ಯರ ಬಳಿ ಹೋಗುವಾಗ ತುಂಬಾ ಜಾಗೃತೆ ವಹಿಸಬೇಕು. ನಮ್ಮ ತಪ್ಪಿ ನಿಂದ ವೈದ್ಯರು 14 ದಿನ ಕ್ವಾರಂಟೈನ್ ನಲ್ಲಿ ಇರಬೇಕಾಗಬಹುದು.  ಇದರಿಂದ ವೈದ್ಯರ ಕುಟುಂಬ ಹಾಗೂ ಇತರ ರೋಗಿಗಳಿಗೆ ತೊಂದರೆ ಯಾಗಬಹುದು.
ವೈದ್ಯರು ಕರೋನಾ ಸೈನಿಕರಾಗಿ ಉತ್ತಮವಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ ವೈದ್ಯರು ಈ ಸಂದಭ೯ದಲ್ಲಿ ಕುಟುoಬವನ್ನು ದೂರ ಯಿರಿಸಿ ನೀಡುತ್ತಿರುವ ಸೇವೆ ಅತ್ಯಂತ ಅಭಿನಂದನೀಯ. ಕರೋನಾ ದೂರವಾಗಲಿ ಮತ್ತೊಮ್ಮೆ ನಾವು ಹಿಂದಿನ ದಿನಗಳಿಗೆ ತೆರಳುವಂತಾಗಲಿ.
ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
 
 
 
 
 
 
 
 
 
 
 

Leave a Reply