ಉದ್ಯಾವರ ಎಸ್.ಡಿ.ಎಮ್.ನಲ್ಲಿ ದ್ರವ್ಯಗುಣ ವಿಜ್ಞಾನ ಶಿಕ್ಷಕರಿಗಾಗಿ ವೈಜ್ಞಾನಿಕ ಕಾರ್ಯಾಗಾರ

ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ವಿಭಾಗ ಇವರು ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ಮತ್ತು ಆಯುಷ್ ಮಂತ್ರಾಲಯ, ಭಾರತ ಸರಕಾರ, ಹೊಸ ದೆಹಲಿ ಇವರ ಪ್ರಾಯೋಜಕತ್ವದಲ್ಲಿ ದ್ರವ್ಯಗುಣ ವಿಜ್ಞಾನ ಶಿಕ್ಷಕರಿಗಾಗಿ ಆರು ದಿನಗಳ ವೈಜ್ಞಾನಿಕ ಕಾರ್ಯಾಗಾರವು ಆರು ದಿನಗಳ ಕಾಲ ನೆರವೇರಿಸಲಾಯಿತು. 
ಬೋಧನ ಅಧ್ಯಾಪಕರಿಗೆ ವಿನೂತನ ಔಷಧ ಜ್ಞಾನದ ಸಂಶೋಧನೆ, ಇದರಸದ್ಬಳಕೆ, ದ್ರವ್ಯಗುಣದ ಸಿದ್ಧಾಂತಗಳ ಸಂಪೂರ್ಣ ಮಾಹಿತಿ ಮತ್ತು ಸಂದಿಗ್ಧ ದ್ರವ್ಯಗಳ ಪರಿಶೀಲನೆ, ಫಾರ್ಮಕೋವಿ ಜಿಲೆನ್ಸ್, ಎಡಿಆರ್ ವರದಿ ಮಾಡುವಿಕೆ, ಸುಸ್ಥಿರ ಉತ್ತಮ ಕೃಷಿ ಪದ್ಧತಿಗಳು, ಭೌಗೋಳಿಕ ವಿತರಣೆಯ ಆಧಾರದ ಮೇಲೆ ಔಷಧೀಯ ಸಸ್ಯಗಳ ಸಂಗ್ರಹಣೆ ಸಂರಕ್ಷಣೆಯ ಅರಿವು ಮೂಡಿಸು ವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು.
ಡಾ. ರವಿರಾವ್ ಸೊರಕೆ, ಡೀನ್, ಇಂಡಿಯನ್ ಮೆಡಿಕಲ್ ಸಿಸ್ಟಂ, ಆಯುರ್ವೇದ ಮಹಾ ವಿದ್ಯಾಲಯ, ಎಸ್.ಜಿ.ಟಿ ಯೂನಿವರ್ಸಿಟಿ, ಹರಿಯಾಣ ಇವರು ಮುಖ್ಯ ಅತಿಥಿ ಗಳಾಗಿದ್ದು, ಸೋಮವಾರ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು.
ದ್ರವ್ಯಗುಣ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಮುಖ್ಯ ಸಂಘಟನಾ ಕಾರ್ಯದರ್ಶಿಯಾದ ಡಾ. ಶ್ರೀಕಾಂತ್ ಪಿ ಸ್ವಾಗತಿಸಿದರು. ಡಾ. ಸುಮಾ ವಿ ಮಲ್ಯಾ, ಸಹಪ್ರಾಧ್ಯಾಪಕರು, ದ್ರವ್ಯಗುಣ ವಿಭಾಗ ಹಾಗೂ ಸಂಘಟನಾ ಕಾರ್ಯದರ್ಶಿಯವರು ಕಾರ್ಯಕ್ರಮದ ಸಂಕ್ಷಿಪ್ತ ಪರಿಚಯ ನೀಡಿದರು. 
ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ವೀರಕುಮಾರ ಕೆ. ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಮಹಮ್ಮದ್ ಫೈಜಲ್,ಸಹಪ್ರಾಧ್ಯಾಪಕರು, ದ್ರವ್ಯಗುಣ ವಿಭಾಗ ಹಾಗೂ ಸಂಘಟನಾ ಕಾರ್ಯದರ್ಶಿ ಇವರು ವಂದಿಸಿದರು.
ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಐಶ್ವರ್ಯ ಸಸಿಧರನ್ ಕಾರ್ಯಕ್ರಮ ನಿರೂಪಿಸಿದರು. ಈ 6 ದಿನಗಳ ಕಾರ್ಯಕ್ರಮದಲ್ಲಿ 27 ಮಂದಿ ಆಯುರ್ವೇದದ ದ್ರವ್ಯಗುಣ ಶಿಕ್ಷಕರು ಫಲಾನುಭವಿಗಳಾಗಿ ಭಾಗವಹಿಸಿದ್ದರು.
ದ್ರವ್ಯಗುಣ ಮತ್ತು ಅದಕ್ಕೆ ಸಂಬಂಧಿಸಿದಂತೆ  24 ವಿಷಯಗಳ ಕುರಿತು ಕ್ಷೇತ್ರ ಸಮೀಕ್ಷೆ ಮತ್ತು ಸಂಶೋಧನೆಗಳಲ್ಲಿನ ಬೆಳವಣಿಗೆಗಳ ಬಗ್ಗೆ 12 ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು. ಕಾರ್ಯಾಗಾರ ಅಂಗವಾಗಿ ಡಾ. ಅಜಯನ್ ಎಸ್., ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರು, ಅಷ್ಟಾಂಗ ಆಯುರ್ವೇದ ವಿದ್ಯಾಪೀಠ, ಕೇರಳ ಇವರ ಮುಂದಾಳತ್ವದಲ್ಲಿ ಕುಂಜಾರುಗಿರಿ ವನ್ಯ ಪ್ರದೇಶದಲ್ಲಿ ಸಸ್ಯ ಸಮೀಕ್ಷೆಯನ್ನು ಕೈಗೊಳ್ಳಲಾಯಿತು.ಸಮಾರೋಪ ಸಮಾರಂಭ :ಶನಿವಾರದಂದು ಸಮಾರೋಪ ಸಮಾರಂಭದಲ್ಲಿ ಡಾ. ಮನೋಜ್ ಕುಮಾರ್ ಎನ್, ಪ್ರಾಧ್ಯಾಪಕರು ಹಾಗೂ ದ್ರವ್ಯಗುಣ ವಿಭಾಗದ ಮುಖ್ಯಸ್ಥರು, ವೈದ್ಯರತ್ನಂ ಪಿ.ಎಸ್. ವಾರಿಯರ್ ಆಯುರ್ವೇದ ಕಾಲೇಜು, ಕೋಟಕಲ್, ಕೇರಳ, ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಹಾಗೂ ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ.ಮಮತಾ  ಕೆ.ವಿ., ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ವಿಭಾಗದ ಡೀನ್ ಡಾ. ನಿರಂಜನ್ ರಾವ್, ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಾಂತ್ ಪಿ. ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಮೊಹಮ್ಮದ್ ಪೈಜಲ್, ಸಹಪ್ರಾಧ್ಯಾಪಕರು ಸ್ವಾಗತ ಕೋರಿದರು.

ಕಾರ್ಯಾಗಾರದ ಸಾರಾಂಶವನ್ನು ಡಾ. ಸುಮಾ ವಿ. ಮಲ್ಯ, ಸಹಪ್ರಾಧ್ಯಾಪಕರು ವಿವರಿಸಿದರು.

ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಮುಂದೆಯೂ ಕೂಡ ಈ ತರಹದ ಕಾರ್ಯಕ್ರಮಗಳನ್ನು ಸಂಯೋಜಿಸಲು ವಿನಂತಿಸಿದರು. ಅತಿಥಿಗಳಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಾಂತ್ ಪಿ.ರವರು ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ಲಸಿತಾ ಹಾಗೂ ಡಾ. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.

ಎಸ್.ಡಿ.ಎಮ್. ಉಡುಪಿ ಕಾಲೇಜಿನ ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಿವೇದಿತಾ ಶೆಟ್ಟಿ, ಡಾ. ತೇಜಸ್ವಿ ಐ. ನಾಯ್ಕ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಕ್ರೀಯ  ವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 
 
 
 
 
 
 
 
 
 
 

Leave a Reply