​​  ಮಾಧ್ವ ಸಂಪ್ರದಾಯವನ್ನು​ ​ಉಳಿಸಿ~ ​ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ​ 

ಇತ್ತೀಚಿನ ದಿನಗಳಲ್ಲಿ ಶಿವಳ್ಳಿ ಮಾಧ್ವ ಸಂಪ್ರದಾಯದ ಬಗ್ಗೆ ಕೆಲವು ಕ್ಷೇತ್ರ​ ಮಠ ಮಂದಿರಗಳಲ್ಲಿ ಅನಿರೀಕ್ಷಿತ ಕೆಲವು ಧಾರ್ಮಿಕ ಆಂತರಿಕ ವಿಚಾರಗಳಲ್ಲಿ​ ​ಪ್ರಕ್ಷುಬ್ದ ವಾತಾವರಣವನ್ನು ಕೆಲವರು ಹಿತಶತ್ರುಗಳು ಉಂಟುಮಾಡುತ್ತಿದ್ದಾರೆ.​ 

ನೂರಾರು ವರ್ಷಗಳಿಂದ​ ಶಾಸ್ತ್ರೀಯ ಪ್ರಮಾಣದ ಅನುಸಾರ ಐತಿಹಾಸಿಕ​ ಘಟನೆಯ ನಿರ್ಣಯದ ಸಂಪ್ರದಾಯ​ದೊಂದಿಗೆ ನಡೆಸುಕೊಂಡು​ ಬರುತ್ತಿರುವ ಈ ಕಾಲದಲ್ಲಿ ಉದಾಹರಣೆಗೆ ಸುಬ್ರಹ್ಮಣ್ಯವೇ ಮೊದಲಾದ​ ಶಿವಳ್ಳಿ ಮಾಧ್ವ ಬ್ರಾಹ್ಮಣರು ಮಾಡುವ ಪೂಜಾ ಸ್ಥಳಗಳಲ್ಲಿ ಅನೂಚಾನವಾಗಿ​ ನಡೆಸಿ ಕೊಂಡು ಬರುತ್ತಿರುವ ಧಾರ್ಮಿಕ ವಿಧಿವಿಧಾನಕ್ಕೆ ಧಕ್ಕೆ ಬರುವಂತೆ​ ನಡೆಸುತ್ತಿದ್ದಾರೆ. 

 
ನಮ್ಮ ಪರಂಪರೆಯ ಗುರು ಮಠಕ್ಕೆ ​ಸಂಬಂಧಪಟ್ಟ ​​ ಅವಹೇಳನಕಾರಿ ಫಲಕಗಳನ್ನು ತೆಗೆಯಲು ನ್ಯಾಯಾಲಯದ ಆದೇಶ​ ಇದ್ದರೂ ​ನಿರ್ಲಕ್ಷ್ಯವನ್ನು ಪ್ರದರ್ಶಿಸಿ ಮಠಕ್ಕೆ ಗುರುಗಳಿಗೆ ಮಾಧ್ವ ಪರಂಪರೆಯ​ ಅರ್ಚಕರಿಗೆ ನೋವನ್ನುಂಟು ಮಾಡುತ್ತಿದ್ದಾರೆ ಈ ಎಲ್ಲಾ ವಿಚಾರದ ಬಗ್ಗೆ​ ಉಡುಪಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘವು ತೀವ್ರ ವಿರೋಧವನ್ನು​ ವ್ಯಕ್ತ ಪಡಿಸುತ್ತಾ ಈ ವಿಚಾರಕ್ಕೆ ​ಸಂಬಂಧ ಪಟ್ಟು ಇದಕ್ಕೆ ​ಸಂಬಂದಿಸಿದ  ಅಧಿಕಾರ ವರ್ಗದವರು ಕೂಡಲೇ ಎಚ್ಚೆತ್ತು ಮಾಧ್ವ ಸಂಪ್ರದಾಯವನ್ನು
ಉಳಿಸಿ ಮಠ ಮಂದಿರಗಳನ್ನು ರಕ್ಷಿಸಬೇಕೆಂದು ಕಳಕಳಿಯ ವಿನಂತಿ.
 
 
 
 
 
 
 
 
 
 
 

Leave a Reply