ಜಿಲ್ಲೆಯಲ್ಲಿ ಇಂದಿನಿ0ದ ಎಲ್ಲಾ ಸರ್ಕಾರಿ ಆಸ್ಪತೆಗಳಲ್ಲಿ ಉಚಿತ ಕೋವಿಡ್ ಲಸಿಕೆ :​ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ​: ಜಿಲ್ಲೆಯಲ್ಲಿ ಇಂದಿ​ನಿಂದ ಎಲ್ಲಾ ಸರಕಾರಿ ಆಸ್ಪತ್ರ‍್ರೆಗಳಲ್ಲಿ ಉಚಿತವಾಗಿ ಮತ್ತು​ ಖಾಸಗಿ ABARK ನೊಂದಾಯಿತ 14 ಖಾಸಗಿ ಆಸ್ಪತ್ರೆಗಳಲ್ಲಿ ನಿಗಧಿತ ದರ ಪಾವತಿಸಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತು 45​ ರಿಂದ 59 ವಯಸ್ಸಿನವರಲ್ಲಿ Comorbid Condtion​ ​ಇರುವವರಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ​ ಜಿ.ಜಗದೀಶ್ ಹೇಳಿದರು.​ 

 
ಅವರು ಸೋಮವಾರ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತ ನಾಡಿದರು.​ ಸರ್ಕಾರಿ ಆಸ್ಪತ್ರತೆಗಳಲ್ಲಿ ಸಂಪೂರ್ಣ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 250 ರೂ ಪ್ರತೀ ಡೋಸ್ ಗೆ ನೀಡಿ​ ಪಡೆಯಬಹುದಾಗಿದೆ, ಫಲಾನುಭವಿಗಳು ಲಸಿಕೆ ಪಡೆಯಲು ಯಾವುದೇ ಆಸ್ಪತ್ರೆಗಳಲ್ಲಿ ಆನ್ ಲೈನ್ ಮೂಲಕ ಯಾವುದೆ​ ದಿನಾಂಕವನ್ನು  ಆಯ್ಕೆಮಾಡಿ ಕೊಳ್ಳಬಹುದು​. ​ ಲಸಿಕೆ ಪಡೆಯಲು ವೆಬ್ ಸೈಟ್ ವಿಳಾಸ:
https://selfregistration.cowin.gov.in  ನಲ್ಲಿ​ ನೊಂದಾಯಿಸಿ​ ​ಕೊಳ್ಳಬಹುದು.

ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ್ ಕವರೇಜ್ ಮತ್ತು ತಿಳುವಳಿಕೆ ಇಲ್ಲದವರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ​ ನೇರವಾಗಿ ಲಸಿಕಾ ಕೆಂದ್ರಕ್ಕೆ ಬಂದು ಸ್ಪಾಟ್ ​ರಿಜೆಸ್ಟ್ರೇಷನ್ ಮಾಡಿ, ಅದೇ ದಿನ ಲಸಿಕೆ ಪಡೆಯಬಹುದು, ಜಿಲ್ಲೆಯಲ್ಲಿ 60 ವರ್ಷ​ 60 ವರ್ಷ ಮೇಲ್ಪಟ್ಟ ಮತ್ತು 45 ರಿಂದ 59 ವಯಸ್ಸಿನ Comorbid Condtion ಇರುವ 151557 ಮಂದಿ ಗುರಿ​ ನಿಗಧಿಪಡಿಸಿದ್ದು, ಜಿಲ್ಲೆಗೆ 82100 ಡೋಸ್ ಕೋವಿಶೀಲ್ಡ್ ಲಸಿಕೆ ಸರಬರಜು ಆಗಿದ್ದು, ಇದರಲ್ಲಿ 49200 ಹಿರಿಯ ನಾಗರಿಕ ರಿಗೆ​ ಮೀಸಲಾಗಿದೆ ಎಂದು ಜಿಲ್ಲಾಧಿಕರಿ ಜಿ.ಜಗದೀಶ್ ತಿಳಿಸಿದರು.
​​
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾಸ್ಪತ್ರೆಯಲ್ಲಿ ರಜಾದಿನ ಹೊರತುಪಡಿಸಿ ಎಲ್ಲಾ ದಿನ ಲಸಿಕೆ​ ಪಡೆಯಬಹುದು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೆಂದ್ರಗಳಲ್ಲಿ ಮಂಗಳವಾರ ಮತ್ತು ಗುರುವಾರ ಹೊರತುಪಡಿಸಿ​ ಎಲ್ಲಾ ಕೆಲಸದ ದಿನಗಳಂದು ಲಸಿಕೆ ಪಡೆಯಬಹುದು, ಹಿರಿಯ ನಾಗರೀಕರು ಮತ್ತು ಇತರೇ ಕಾಯಿಲೆಗಳಿಂದ​ ಬಳಲುತ್ತಿರುವವರು ಕೋವಿಡ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗುತ್ತಿದ್ದು, ಇವರುಗಳು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ​ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ ಗಳು, ಜಿಲ್ಲೆಯಲ್ಲಿ ಕೋವಿಡ್ ಹಿಮ್ಮೆಟ್ಟಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.

ಇದುವರೆಗೆ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದ ನಂತರ 3 ಮಂದಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಅದು​ ಕೂಡ ಲಸಿಕೆಯಿಂದ ಅಲ್ಲ ಎಂದು ದೃಡಪಟ್ಟಿದೆ, ಆ ಮೂರು ಜನ ಸಹ ಸುರಕ್ಷಿತ ವಾಗಿದ್ದು, ಸಾರ್ವಜನಿಕರು ಲಸಿಕೆ ಕುರಿತಂತೆ​ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಲಸಿಕೆ ಪಡೆಯುವಂತೆ ಜಿ.ಜಗದೀಶ್ ಹೇಳಿದರು.

ಜಿಲ್ಲೆಗೆ ನೆರೆಯ ಮಹಾರಾಷ್ಟç ಮತ್ತು ಕೇರಳದಿಂದ ಬರುವವರು ಕಡ್ಡಾಯವಾಗಿ 72 ಗಂಟೆಗಳ ಅವಧಿಯ ಕೋವಿಡ್​ ನೆಗೆಟಿವ್ ವರದಿ ಹೊಂದಿರುವುದು ​ಖಡ್ಡಾಯವಾಗಿ ,ವ್ಯವಹಾರಿಕ ಉದ್ದೇಶ ಗಳಿಗಾಗಿ ಎರಡೂ ರಾಜ್ಯಗಳಿಗೆ ನಿರಂತರವಾಗಿ​ ಓಡಾಡುವವರು 15 ದಿನಗಳಿಗೊಮ್ಮ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ನೆಗೆಟಿವ್ ವರದಿ ಇಲ್ಲದೇ ಜಿಲ್ಲೆಗೆ​ ಆಗಮಿಸುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು, ಸಾರ್ವಜನಿಕರು ತಮ್ಮ ಮನೆಯ ಸಮೀಪ ನೆಗೆಟಿವ್ ವರದಿ ಇಲ್ಲದೇ​ ​ಮಹಾ ರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ತಿಳಿಸುವಂತೆ ಡಿಸಿ ಜಿ.ಜಗದೀಶ್ ಹೇಳಿದರು.

ಕೋವಿಡ್ ಇನ್ನೂ ಸಂಪೂರ್ಣವಾಗಿ ನಾಶವಾಗಿಲ್ಲ ಆದರೆ ಸಾರ್ವಜನಿಕರು ಕೋವಿಡ್ ಇಲ್ಲ ಎಂಬ ಭಾವನೆಯಿಂದ , ಕೋವಿಡ್​ ಸುರಕ್ಷ ಕ್ರಮಗಳನ್ನು ಉಲ್ಲಂಘಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ, ಇದು ಸಲ್ಲದು . ಸಾರ್ವಜನಿಕರು ​ಕಡ್ಡಾಯವಾಗಿ ಮಾಸ್ಕ್ , ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸುವಂತೆ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ​ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply