ಹೋಂ ಡಾಕ್ಟರ್ ಫೌಂಡೇಶನ್ ವೈಶಿಷ್ಟ್ಯಪೂರ್ಣ ವಿಶ್ವ ಮಹಿಳಾ ದಿನಾಚರಣೆ

ಉಡುಪಿ :- 64 ರ ಇಳಿ ವಯಸ್ಸಲ್ಲೂ ಚರ್ಮುರಿ ಮಾರಿ ಒಳ್ಳೆಯ ರೀತಿಯಲ್ಲಿ ಇನ್ನೊಬ್ಬರ ಕೈ ನೋಡದೆ ಜೀವನ ನಡೆಸುತ್ತಿರುವ ಅಜ್ಜರಕಾಡು ಪಾರ್ಕ್ ಬಳಿ ಕಳೆದ 27 ವಷ೯ದಿಂದ ಚರ್ಮುರಿ ಮಾರಿ ಉಡುಪಿಯಲ್ಲಿ ಬಾಡಿಗೆ ಮನೆ ಯಲ್ಲಿ ಒಬ್ಬಂಟಿ ವಾಸವಿರುವ ಧೀರ ಮಹಿಳೆ ಶಿಕಾರಿಪುರ ಮೂಲದ ಶಾಕುಂತಲ ರವರನ್ನು ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮಾ.8ರಂದು
ಸ್ಪಂದನ ವಿಶೇಷ ಚೇತನ ಮಕ್ಕಳ ಶಾಲೆ ಉಪ್ಪುರುನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು

ಈ ಸಂದಭ೯ದಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡಿದ ಡಾll ಸುಮಾ ಶೆಟ್ಟಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸವಿತಾ ಶೆಟ್ಟಿ ಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಪಂದನಸಂಸ್ಥೆಯ ಮುಖ್ಯಸ್ಥರಾದ ಜನಾರ್ದನ್, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಉದಯ್ ನಾಯ್ಕ್ ಉಮೇಶ್ ರಾಘವೇಂದ್ರಪೂಜಾರಿ ,ಬಂಗಾರಪ್ಪ , ನಯನ ,ಶಶಿ ,ಕೀರ್ತಿರಾಜ್ ಸ್ವಚ್ಚ ಭಾರತ್ ಫ್ರೆಂಡ್ಸ್ ಸ್ಥಾಪಕ ಸಂಚಾಲಕ ಗಣೀಶ್ ಪ್ರಸಾದ್.ಜಿ ನಾಯಕ್, ಜಗದೀಶ್ ಶೆಟ್ಟಿ, ವಿಕ್ಷೀತ್ ಪೂಜಾರಿ, ನಯನಾ ಮಂತಾದವರು ಉಪಸ್ಥಿತರಿದ್ದರು. ಡಾ|| ಶಶಿಕಿರಣ್ ಶೆಟ್ಟಿ ಸ್ತಾವನೆಗೈದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply