Janardhan Kodavoor/ Team KaravaliXpress
25 C
Udupi
Monday, May 17, 2021

ಕೊರೊನಾ ಮಹಾಮಾರಿ ನಿರ್ಮೂಲನೆಗೆ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಧನ್ವಂತರಿ ಜಪಾನುಷ್ಠಾನವೇ ಪರಿಹಾರ-  ಶ್ರೀ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು. 

ಲೋಕದಲ್ಲಿ ಅದೂ ದೇಶದಲ್ಲಿ ಭೀಕರವಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿ ಮತ್ತು ಅದರಿಂದ ಎದುರಾಗುತ್ತಿ ರುವ ಮೃತ್ಯು ಸದೃಶ ಭೀಕರ ಪರಿಣಾಮಗಳಿಗೆ ಅದೇ ಪ್ರಮಾಣದಲ್ಲಿ  ಆಸ್ತಿಕರು ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಧನ್ವಂತರಿ ಜಪಾನುಷ್ಠಾನವೇ ಪರಿಹಾರ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಶಿಷ್ಯರೂ ಭಕ್ತರೂ ಬೆಂಗಳೂರಿನ ಮಾಗಡಿ ಸಮೀಪದ ಆನಂದವನದ ಪೂರ್ಣಪ್ರಮತಿ ವಿದ್ಯಾಲಯದ ಸ್ಥಾಪಕರೂ (ಮಾಜಿ ಐಟಿ ಉದ್ಯೋಗಿ ) ಸ್ವಪ್ನ ಸೂಚನೆ ನೀಡಿರುವ ರೋಚಕ ಸಂಗತಿ ತಿಳಿದುಬಂದಿದೆ.
ತಾವು ವೃಂದಾವನ ಪ್ರವೇಶಿಸುವ (ಇಹಲೋಕ ತ್ಯಜಿಸುವ ) ಪೂರ್ವದಲ್ಲಿ ತಿರುಪತಿ ಪ್ರವಾಸದಿಂದ ಮರಳಿಬರುವಾಗ ಆಪ್ತರಲ್ಲಿ ಒಂದು ವಿಷಯವನ್ನು ತಿಳಿಸಿದ್ದು ಅದನ್ನು ತಿಳಿದು ಕೂಡಲೇ ಆಚರಿಸುವಂತೆ ಗುರುಗಳು ತಮ್ಮ ಮೃತ್ತಿಕಾ ವಂದಾವನದ ಸಮೀಪ ಗೋಚರಕ್ಕೆ ಬಂದು  ಸ್ವಪ್ನ ಸೂಚನೆ ನೀಡಿರುವುದಾಗಿ ಶ್ರೀನಿವಾಸ್ ತಿಳಿಸಿದ್ದಾರೆ .‌ಅದರಂತೆ ಶ್ರೀಗಳ ಆಪ್ತರಾಗಿದ್ದ ವಿಷ್ಣುಮೂರ್ತಿ ಆಚಾರ್ಯರಲ್ಲಿ ಈ ಬಗ್ಗೆ ಕೇಳಿದಾಗ ಈ ಎರಡೂ ಲೋಕದ  ಯಾವುದೇ ಮಹಾಮಾರಿ,  ವಿಪತ್ತುಗಳಿಗೂ ಅತ್ಯಂತ ವಿಹಿತ ಪರಿಹಾರ ಎಂದು ಹೇಳಿದ್ದಾಗಿ ತಿಳಿಸಿದರು .

ಅದರಂತೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇಂದು ಸಾಯಂಕಾಲದಿಂದ ಪ್ರತಿದಿನ ಸಂಜೆ 6 ರಿಂದ 6.45 ರ ವರೆಗೆ ಪೂರ್ಣಪ್ರಮತಿ ವಿದ್ಯಾಲಯದ ಆವರಣದಲ್ಲಿರುವ ಶ್ರೀ ವಿಶ್ವೇಶತೀರ್ಥರ ಶ್ರೀಪಾದರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲಿ ವಿಷ್ಣುಸಹಸ್ರನಾಮ‌ ಪಾರಾಯಣ ಮತ್ತು  ಧನ್ವಂತರೀ ಜಪಾನುಷ್ಠಾನಗಳು ಕೆಲ ಶಿಷ್ಯರಿಂದ ನಡೆಯಲಿದೆ .

ನಾಡಿನಾದ್ಯಂತ ಭಕ್ತರು ಆನ್ ಲೈನ್ ಮೂಲಕ ಇದರಲ್ಲಿ ಭಾಗವಹಿಸಬಹುದು . ಅಥವಾ ತಮ್ಮ ತಮ್ಮ ಮನೆಗಳಲ್ಲಿ ಪ್ರತಿನಿತ್ಯ ಪಾರಾಯಣ ಮತ್ತು ಕನಿಷ್ಠ 108 ಬಾರಿ ಧನ್ವಂತರೀ ಜಪಾನುಷ್ಠಾನವನ್ನು ಶ್ರದ್ಧೆಯಿಂದ ನಡೆಸುವಂತೆ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...

ಹೋಪ್ ಇಂಡಿಯಾ ಫೌಂಡೇಶನ್​ ವತಿಯಿಂದ ​ಕೊರೋನಾ ಮುಕ್ತ ಉಡುಪಿ ನಿರ್ಮಾಣ​ ಪಣ ​  ​​

ಉಡುಪಿ ಬೋರ್ಡ್ ಹೈಸ್ಕೂ​ನಲ್ಲಿ  ಆಶ್ರಯ ಪಡೆದಿರುವ ಭಿಕ್ಷುಕರು, ನಿರ್ಗತಿಕರು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದು ಅವರಿಂದ ಉಳಿದ ಸಾರ್ವಜನಿಕರಿಗೆ ಹರಡುವುದನ್ನು ತಪ್ಪಿಸಿ ಕೊರೋನಾ...

ಉಡುಪಿ ಜಿಲ್ಲೆ: 1197 ಗುಣಮುಖ ​~  5 ಸಾವು

ಉಡುಪಿ ಜಿಲ್ಲೆಯಲ್ಲಿ 745 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕು- 316,  ಕಾರ್ಕಳ-113 ​,  ಕುಂದಾಪುರ- 307, ಮತ್ತು ಹೊರ ಜಿಲ್ಲೆಯ 9 ಮಂದಿ ಸೋಂಕಿಗೆ ಒಳಗಾಗಿದ್ದಾರೆ.​ 1197 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 39668 ಮಂದಿ...

 ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆಮ್ಲಜನಕ ಘಟಕ ನಿರ್ಮಾಣ ಹಾಗು ಆರೋಗ್ಯ ಇಲಾಖೆಗೆ ಆಕ್ಸಿಜನ್ ಕೊನ್ಸನೇಟರ್ ಕೊಡುಗೆ

 ​ಉಡುಪಿ: ಕೊರೊನಾ ಪೀಡಿತರಿಗೆ ಉಂಟಾಗುತ್ತಿರುವ ಆಮ್ಲಜನಕ ಕೊರತೆಯನ್ನು ಗಮನಿಸಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ಕಾರ್ಕಳದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ...
error: Content is protected !!