ಉಡುಪಿ: ಜುಲೈ 8 ರಂದು ಲಸಿಕಾ ಲಭ್ಯತೆಯ ಮಾಹಿತಿ

ಮುಂಚೂಣಿ ಕಾರ್ಯಕರ್ತರು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ 2ನೇ ಡೋಸ್ ಕೋವಿಡ್-19 ಲಸಿಕೆ ಲಭ್ಯ

ದಿನಾಂಕ 08/07/2021 ರಂದು ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೊರೋನ ಮುಂಚೂಣಿ ಕಾರ್ಯಕರ್ತರು/ ದುರ್ಬಲ ಗುಂಪಿನ ಫಲಾನುಭವಿಗಳು/ಆದ್ಯತಾ ಗುಂಪಿನ ವರು ಮತ್ತು ಆರೋಗ್ಯ ಕಾರ್ಯಕರ್ತರು/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯ ಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್-19 2ನೇ ಡೋಸ್ ಲಸಿಕೆ ಲಭ್ಯ.

ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ)- 2ನೇ ಡೋಸ್ ಕೋವಿಶೀಲ್ಡ್ – (150 ಡೋಸ್ ಲಭ್ಯ) ಕೋವ್ಯಾಕ್ಸಿನ್ 2ನೇ ಡೋಸ್ – (100 ಡೋಸ್‌ ಲಭ್ಯ)

ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್. ಎಸ್) ಆಸ್ಪತ್ರೆ, ಉಡುಪಿ- ದಿನಾಂಕ 15/07/2021 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ (100 ಡೋಸ್ ಲಭ್ಯ.)

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರು ತಿಸಿರುವ ಅನುಬಂಧ- 1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳು/ಆರೋಗ್ಯ ಕಾರ್ಯ ಕರ್ತರು/ಕೇಂದ್ರ ಸರಕಾರ ಗುರುತಿಸಿ ರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್- 19,2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆ ಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿ ಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.

ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿ ಯ ಸಾರ್ವಜನಿಕರಿಗೆ ಯಾವುದೇ ಕೋವಿಡ್- 19 ಲಸಿಕೆ ಲಭ್ಯವಿರುವುದಿಲ್ಲ.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ವಯೋಮಿತಿ ಯ ಸಾರ್ವಜನಿಕರಿಗೆ ಪ್ರಥಮ ಡೋಸ್ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply