ಉಡುಪಿ: 848 ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಶನಿವಾರ 684 ಮಂದಿಗೆ ಸೋಂಕು ದೃಢಪಟ್ಟಿದ್ದು, 848 ಮಂದಿ ಗುಣಮುಖರಾಗಿದ್ದಾರೆ.ಉಡುಪಿಯ ಇಬ್ಬರು ಮತ್ತು ಕುಂದಾಪುರದ ಓರ್ವರು ಸೇರಿದಂತೆ ಒಟ್ಟು 3 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ 5,775 ಸಕ್ರಿಯ ಪ್ರಕರಣಗಳಿವೆ.

3,611 ಮಂದಿಯನ್ನು ಇಂದು ಪರೀಕ್ಷೆಗೊಳಪಡಿಸಲಾಗಿದ್ದು,ಈ ಪೈಕಿ 684 ಮಂದಿ ಮನೆ ಆರೈಕೆ ಹಾಗೂ 23 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಪೈಕಿ ಉಡುಪಿಯ 290, ಕುಂದಾಪುರ 267, ಕಾರ್ಕಳ 123 ಮತ್ತು ಹೊರ ಜಿಲ್ಲೆಗಳ 4 ಮಂದಿ ಸೋಂಕಿತರು.

ಉಡುಪಿಯ 73 ಮತ್ತು 68ರ ಮಹಿಳೆಯರು ಹಾಗೂ ಕುಂದಾಪುರದ 62ರ ವರ್ಷದ ಪುರುಷ ಸಾವನ್ನಪ್ಪಿದ್ದಾರೆ ಎಂದು ಡಿಎಚ್.ಓ ಡಾ. ಸುಧೀರಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply